ಹದಿಹರೆಯದ ಸಮಸ್ಯೆ: ಮಾಹಿತಿ ಕಾರ್ಯಕ್ರಮ

ಕಾರ್ಕಳ, ಫೆ.16: ನೀರೆ ಬೈಲೂರಿನ ಲಯನ್ಸ್ ಲಯನೆಸ್ ಹಾಗೂ ಲೀಯೊ ಕ್ಲಬ್ ವತಿಯಿಂದ ಬೈಲೂರು ಸಪಪೂ ಕಾಲೇಜಿನಲ್ಲಿ ವಿದ್ಯಾರ್ಥಿ ಗಳಿಗೆ ಹದಿಹರೆಯದ ಸಮಸ್ಯೆಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು. ಲಯನ್ಸ್ ಜಿಲ್ಲೆ 317ಸಿಯ ಕೋಆರ್ಡಿನೇಟರ್ ಚಂದ್ರಹಾಸ ಶೆಟ್ಟಿ ಉದ್ಘಾಟಿಸಿದರು. ಲಯನ್ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಮಂಜುನಾಥ್ ಹೆಗ್ಡೆ ಮುಂಡ್ಕೂರು ಕಾರ್ಯಕ್ರಮ ನಡೆಸಿಕೊಟ್ಟರು. ಉದಯ ಕುಮಾರ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಡಾ.ದಿನೇಶ್ಚಂದ್ರ ಹೆಗ್ಡೆ, ಸುಕನ್ಯ ಹೆಗ್ಡೆ, ತಿಲಕ ರಾವ್, ಉಪಪ್ರಾಂಶುಪಾಲ ನಾಗರಾಜ್, ಶಾಲಾ ಆಪ್ತ ಸಲಹೆ ಮತ್ತು ಮಾರ್ಗದರ್ಶನ ಕೇಂದ್ರದ ಸಂಚಾಲಕಿ ವಸಂತಿ ಶೆಟ್ಟಿ, ಲಯನ್, ಲಯನೆಸ್, ಲೀಯೊ ಸದಸ್ಯರು ಉಪಸ್ಥಿತರಿದ್ದರು. ಉದಯಕುಮಾರ್ ಹೆಗ್ಡೆ ಸ್ವಾಗತಿಸಿದರು. ಲಯನ್ ಜಿಲ್ಲಾಧ್ಯಕ್ಷ ಮಹೇಶ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಯನ್ ಜಿಲ್ಲಾ ಸಂಪುಟ ಸದಸ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Next Story





