ಅಮಾಯಕರನ್ನು ಸಂಕಷ್ಟಕ್ಕೆ ಸಿಲುಕಿಸಲು ಕೇಸರಿ ಪಡೆಗಳ ಹುನ್ನಾರ....
ಟ್ವಿಟರ್-ಫೆಸ್‌ಬುಕ್‌ನಲ್ಲಿ ಸಾವಿರಾರು ನಕಲಿ ಖಾತೆಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣದ ಸಮರ್ಥ (ದುರು)ಉಪಯೋಗದಿಂದಲೇ ಬಿಜೆಪಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ್ದು ನಿಜ ಎಂದು ಸ್ವತಃ ಬಿಜೆಪಿಯ ಮುಖಂಡರೇ ಒಪ್ಪಿಕೊಂಡಿದ್ದರು. ಆದರೆ ಈ ಒಳ ದಾರಿಯನ್ನೇ ಈಗಲೂ ಅವರು ಬಳಸಿಕೊಂಡು ಸಾಮಾಜಿಕ ತಾಣಗಳ ಮುಖಾಂತರ ಸಮಾಜದಲ್ಲಿ ಒಡಕು ಹುಟ್ಟು ಹಾಕಿ ತಮ್ಮ ವಿರೋಧಿಗಳಿಗೆ ದೇಶದ್ರೋಹಿಗಳು ಎಂದು ಹಣೆಪಟ್ಟಿ ಕಟ್ಟಿ ಬಿಜೆಪಿ ಪಕ್ಷದ ಕುಂದುತ್ತಿರುವ ಜನಪ್ರಿಯತೆಯನ್ನು ತಡೆಯಲು ಮೂರ್ಖ ಯತ್ನ ಮಾಡಿ ಮುಗ್ಗರಿಸಿ ಬಿದ್ದು ನಗೆಪಾಟಲಿಗೆ ಈಡಾಗುತ್ತಿದ್ದಾರೆ. ಆದರೆ ಕೇಸರಿಗಳ ಈ ದುಸ್ಸಾಹಸ ಅತ್ಯಂತ ಅಪಾಯಕಾರಿಯಾಗಿದ್ದು ಸಮಾಜದಲ್ಲಿ ಹೀನ ವೈರತ್ವ ಹುಟ್ಟು ಹಾಕುತ್ತಿದೆ. ದಿಲ್ಲಿಯ ಜೆಎನ್‌ಯು ವಿದ್ಯಾರ್ಥಿಗಳ ಪ್ರತಿಭಟನೆ, ಹೈದರಾಬಾದಿನ ರೋಹಿತ್ ವೇಮುಲಾ ಪ್ರಕರಣ, ಉತ್ತರ ಪ್ರದೇಶದ ಅಖ್ಲಾಕ್ ಹತ್ಯೆಯ ವಿಷಯ, ಅಥವಾ ಗುಜರಾತಿನ ಗುಜ್ಜು-ಲವ್-ಜಿಹಾದ್ ಇವೆಲ್ಲವುಗಳ ವಿಷಯದಲ್ಲಿ ಸಾಮಾಜಿಕತಾಣದಲ್ಲಿ ಸಾವಿರಾರು ನಕಲಿ ಖಾತೆ ತೆರೆದು ಸುಳ್ಳು ಸುದ್ದಿ ಹಬ್ಬಿಸಿ ಕೇಸರಿ ಪಡೆಗಳು ಸಿಕ್ಕಿ ಬೀಳುತ್ತಿದ್ದಾರೆ. ಪಾಕಿಸ್ತಾನದ ಭೀಕರ ಉಗ್ರವಾದಿ ಸಯೀದ್ ಹಫೀಝ್ ಈತನ ಹೆಸರಲ್ಲೂ ನಕಲಿ ಟ್ವಿಟರ್ ಖಾತೆ ತೆರೆದು ಎಡಪಂಥೀಯ ಜೆಎನ್‌ಯು ವಿದ್ಯಾರ್ಥಿಗಳಿಗೆ ಹಫೀಝ್‌ನ ಹೆಸರಲ್ಲಿ ಅಭಿನಂದಿಸುವ ಮೆಸೇಜ್ ಕಳುಹಿಸಿ ಈ ವಿದ್ಯಾರ್ಥಿಗಳು ಪಾಕಿ ಉಗ್ರವಾದಿಗಳೊಂದಿಗೆ ಕೈಜೋಡಿಸಿದ್ದಾರೆ ಮತ್ತು ದೇಶದ್ರೋಹಿಗಳಾಗಿದ್ದಾರೆ ಎಂದು ಬಿಂಬಿಸುವ ಅಪಾಯಕಾರಿ ಹುನ್ನಾರ ಕೇಸರಿ ಪಡೆಗಳು ನಡೆಸಿವೆ. ಯಾವುದೇ ವಿದ್ಯೆ ಅಥವಾ ತಂತ್ರಜ್ಞಾನವನ್ನು ತಮ್ಮ ಸ್ವಾರ್ಥಕ್ಕೆ ದುರುಪಯೋಗ ಮಾಡಿಕೊಳ್ಳುವುದರಲ್ಲಿ ವೈದಿಕರಿಗೆ ಮೂರು-ನಾಲ್ಕು ಸಾವಿರ ವರ್ಷಗಳ ಧೀರ್ಘ ಅನುಭವ ಇದೆ ತಾನೇ.
ಇತ್ತೀಚೆಗೆ ಮೋದಿಯವರು ಅಪಘಾನಿಸ್ತಾನ ದೇಶದ ಅಧ್ಯಕ್ಷರಿಗೆ 96 ದಿನ ಮುಂಚಿತವಾಗಿ ಹುಟ್ಟು ಹಬ್ಬದ ಶುಭಾಶಯ ಹೇಳಿ ನಗೆಪಾಟಲಿಗೀಡಾದ ಘಟನೆ ಸಾಮಾಜಿಕ ತಾಣದಲ್ಲಿ ಚರ್ಚೆಯ ವಿಷಯವಾಗಿದೆ. ಆದರೆ ಭಾರತದಂತೆ ಅಪಘಾನಿಸ್ತಾನವೂ ಅದೇ ಆಫ್ರಿಕನ್ ದೇಶಗಳಿಂದ ಕೇವಲ ಕೆಜಿಗೆ 40 ರೂ.ಯಂತೆ ತೊಗರಿಬೇಳೆ, ಉದ್ದಿನಬೇಳೆ ಖರೀದಿಸಿ ತನ್ನ ಪ್ರಜೆಗಳಿಗೆ ಅದನ್ನು ಕೇವಲ 80 ರೂ. ಕಿಲೋಗೆ ಕೊಡುತ್ತಿದೆ, ಆದರೆ ಭಾರತದಲ್ಲಿ ಮಾತ್ರ ಅದೇ ಆಫ್ರಿಕನ್ ತೊಗರಿ-ಉದ್ದು ಕೇವಲ ರೂ.40ಕ್ಕೆ ಆಮದು ಮಾಡಿಕೊಂಡು ಅದನ್ನು200ರೂ.ಗೆ ಯಾಕೆ ಮಾರಲಾಗುತ್ತಿದೆ ಎಂದು ಬಡವರ ಈ ಪ್ರಮುಖ ಆಹಾರದ ವಿಷಯದಲ್ಲಿ ಮಾತ್ರ ಸಾಮಾಜಿಕ ತಾಣಗಳಲ್ಲಿ ಚರ್ಚೆಯಾಗದಿರುವುದು ಖೇದಕರ.







