ಅವಕಾಶವಂಚಿತ ಮಕ್ಕಳ ಶಿಕ್ಷಣಕ್ಕೆ ನೆರವು ನೀಡಿದ ಬಾಲಕನಿಗೆ ಸನ್ಮಾನ
ನ್ಯೂಯಾರ್ಕ್, ಫೆ. 16: ನ್ನ ಪೋಪಕಾರ ಸಂಘಟನೆಯ ಮೂಲಕ ಅಮೆರಿಕ ಮತ್ತು ಜಗತ್ತಿನಾದ್ಯಂತದ ಅವಕಾಶವಂಚಿತ ಮಕ್ಕಳು ಶಿಕ್ಷಣ ಪಡೆಯಲು ನೆರವು ನೀಡಿದ 13 ವರ್ಷದ ಭಾರತೀಯ ಮೂಲದ ಬಾಲಕನನ್ನು ಅಮೆರಿಕದಲ್ಲಿ ಗೌರವಿಸಲಾಗಿದೆ.
ಕನೆಕ್ಟಿಕಟ್ ರಾಜ್ಯದ ಹ್ಯಾರ್ಟ್‌ಫೋರ್ಡ್‌ನ ಶಾಸನ ಸಭೆ ಕಟ್ಟಡದಲ್ಲಿ ಇತ್ತೀಚೆಗೆ ನಡೆದ ಭಾರತೀಯ ಗಣರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ‘ಪ್ಲಾಂಟಿಂಗ್ ಪೆನ್ಸಿಲ್ಸ್’ನ ಸ್ಥಾಪಕ ಹಾಗೂ ಸಿಇಒ ಇಶಾನ್ ಪಟೇಲ್‌ರನ್ನು ಮಿಲಾನ್ ಕಲ್ಚರಲ್ ಆರ್ಗನೈಸೇಶನ್ ಸನ್ಮಾನಿಸಿತು.
ಭಾರತದಿಂದ ವಲಸೆ ಹೋದವರ ಮಗನಾಗಿರುವ ಪಟೇಲ್ ವೆಸ್ಟ್ ಹ್ಯಾರ್ಟ್‌ೀಫೋರ್ಡ್‌ನಲ್ಲಿ ಕಿಂಗ್ಸ್‌ವುಡ್-ಆಕ್ಸ್‌ಫರ್ಡ್ ಸ್ಕೂಲ್‌ಗೆ ಹೋಗುತ್ತಿದ್ದಾರೆ.
ಜಗತ್ತಿನಾದ್ಯಂತವಿರುವ ಅವಕಾಶವಂಚಿತ ಮಕ್ಕಳ ಶಿಕ್ಷಣ ಅವಕಾಶಗಳನ್ನು ಉತ್ತಮಗೊಳಿಸುವುದಕ್ಕಾಗಿ ಅವರು ತನ್ನ ಸಂಘಟನೆಯನ್ನು ಸ್ಥಾಪಿಸಿದರು.
ಮಿಲಾನ್ ಅಸೋಸಿಯೇಶನ್ ಅಮೆರಿಕದಲ್ಲಿ ವಾಸಿಸುತ್ತಿರುವ ಭಾರತೀಯರ ಸಂಘಟನೆಯಾಗಿದೆ.
Next Story





