ಪ್ರೊ ಕಬಡ್ಡಿ ಲೀಗ್: ಪಾಟ್ನಾ ಸತತ 8ನೆ ಜಯ

ಪಾಟ್ನಾ, ಫೆ.16: ಬೆಂಗಾಲ ವಾರಿಯರ್ಸ್ ತಂಡವನ್ನು 32-27 ಅಂತರದಿಂದ ಮಣಿಸಿರುವ ಪಾಟ್ನಾ ಪೈರೆಟ್ಸ್ ತಂಡ ಪ್ರೊ ಕಬಡ್ಡಿ ಲೀಗ್‌ನಲ್ಲಿ ಅಜೇಯ ಗೆಲುವಿನ ಓಟವನ್ನು ಮುಂದುವರಿಸಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ 5 ಅಂಕಗಳ ಅಂತರದಿಂದ ಗೆಲುವು ಸಾಧಿಸಿರುವ ಪಾಟ್ನಾ 8 ಪಂದ್ಯಗಳಲ್ಲಿ ಒಟ್ಟು 38 ಅಂಕವನ್ನು ಗಳಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಬೆಂಗಾಲ ತಂಡ 8 ಪಂದ್ಯಗಳಲ್ಲಿ 27 ಅಂಕ ಗಳಿಸಿದೆ.
Next Story





