ಸಿಇಟಿ-2016: ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ
ಬೆಂಗಳೂರು, ಫೆ. 16: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ-2016 ಪ್ರವೇಶ ಪರೀಕ್ಷೆಗಾಗಿ ಆನ್‌ಲೈನ್ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ಫೆ.21ರ ರವಿವಾರದ ವರೆಗೆ ವಿಸ್ತರಿಸಿದೆ ಹಾಗೂ ಬ್ಯಾಂಕುಗಳಲ್ಲಿ ಅರ್ಜಿ ಶುಲ್ಕ ಪಾವತಿಸುವ ಅವಧಿಯನ್ನು ಫೆ.23ರ ವರೆಗೆ ವಿಸ್ತರಿಸಿದೆ.
ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯ ಹಿನ್ನೆಲೆಯಲ್ಲಿ ಬಂದ ರಜಾ ದಿನಗಳು ಹಾಗೂ ವಿದ್ಯಾರ್ಥಿಗಳು-ಪೋಷಕರ ಕೋರಿಕೆಯ ಮೇರೆಗೆ ಕಾಲಾವಧಿಯಲ್ಲಿ ವಿಸ್ತರಣೆ ಮಾಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ನೀಡಿದೆ.
ಈಗಾಗಲೇ ಅಧಿಸೂಚಿಸಿದ್ದಂತೆ ಫೆ.13ರ ವರೆಗೆ ಅರ್ಜಿ ಸಲ್ಲಿಕೆಗೆ ಅಂತಿಮ ದಿನಾಂಕ ವಾಗಿತ್ತು. ಅರ್ಜಿಶುಲ್ಕ ಪಾವತಿಗೆ ಫೆ.15 ಕೊನೆಯ ದಿನವಾಗಿತ್ತು. ಕ್ರೀಡೆ, ಎನ್‌ಸಿಸಿ, ಸಿಎಪಿಎಫ್, ಸಿಆರ್‌ಪಿಎಫ್, ಸೇನೆ, ಆಂಗ್ಲೋ- ಇಂಡಿಯನ್ ಇತ್ಯಾದಿಗಳಡಿ ಮೀಸಲಾತಿ ಕೋರುವ ಅಭ್ಯರ್ಥಿಗಳು ವಿಶೇಷ ಮೀಸಲಾತಿ ಕುರಿತ ತಮ್ಮ ದಾಖಲಾತಿಗಳನ್ನು ಪರೀಕ್ಷಾ ಪ್ರಾಧಿಕಾರಕ್ಕೆ ಸಲ್ಲಿಸುವ ವೇಳಾಪಟ್ಟಿಯನ್ನು ಮತ್ತು ನೋಡಲ್ ಕೇಂದ್ರಗಳಲ್ಲಿ (ಸಹಾಯ ಕೇಂದ್ರಗಳು) ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ನಡೆಸುವ ವೇಳಾಪಟ್ಟಿಯನ್ನು ಪ್ರಾಧಿಕಾರವು ಸಿದ್ಧಪಡಿಸಿದೆ.
ವೆಬ್‌ಸೈಟ್: http://kea.kar.nic.inನಲ್ಲಿ ವಿದ್ಯಾರ್ಥಿಗಳು/ಪೋಷಕರ ಮಾಹಿತಿಗಾಗಿ ಪ್ರಕಟಿಸಿದೆ.





