ಕರಾವಳಿ ಉತ್ಸವಕ್ಕೆ ಹೊಸ ಅತಿಥಿಗಳು: ಗ್ರಾಹಕರನ್ನು ರಂಜಿಸಿದ ‘ಟಾಮ್ ಆ್ಯಂಡ್ ಜೆರಿ’

ಮಂಗಳೂರು, ಫೆ.16: ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಜ.23ರಿಂದ ನಡೆಯುತ್ತಿರುವ ದ.ಕ. ಜಿಲ್ಲಾ ಕರಾವಳಿ ಉತ್ಸವಕ್ಕೆ ಹೊಸ ಅತಿಥಿಗಳಾಗಿ ‘ಟಾಮ್ ಆ್ಯಂಡ್ ಜೆರಿ’ ಆಗಮಿಸಿದ್ದಾರೆ. ಈ ಹೊಸ ಅತಿಥಿಗಳ ಆಗಮನದಿಂದ ಉತ್ಸವಕ್ಕೆ ಧಾವಿಸುತ್ತಿರುವ ಗ್ರಾಹಕರ ಸಹಿತ ಮಕ್ಕಳಿಗೆ ಮನೋರಂಜನೆ ದೊರೆಯುವಂತಾಗಿದೆ. ಉತ್ಸವಕ್ಕೆ ಬರುವ ಗ್ರಾಹಕರು ಮತ್ತು ಮಕ್ಕಳು ಟಾಮ್ ಆ್ಯಂಡ್ ಜೆರಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿರುವ ದೃಶ್ಯ ಕಂಡುಬಂತು. ಒಟ್ಟಾರೆ ಹೊಸ ಅತಿಥಿಗಳ ಆಗಮನದಿಂದಾಗಿ ಉತ್ಸವವು ಮತ್ತಷ್ಟು ಮೆರುಗು ಪಡೆದುಕೊಂಡಿದೆ.
ಕರಾವಳಿ ಉತ್ಸವದ ಪ್ರವೇಶ ದ್ವಾರದಲ್ಲಿ ನಿಂತು ತಮ್ಮ ಹೆತ್ತವರೊಂದಿಗೆ ಉತ್ಸವಕ್ಕೆ ಆಗಮಿಸುವ ಮಕ್ಕಳೊಂದಿಗೆ ಸ್ವಯಂಪ್ರೇರಿತವಾಗಿ ಕೈಕುಲುಕುವ ಮೂಲಕ ಮುದ ನೀಡುವಲ್ಲಿ ಯಶಸ್ವಿಯಾಗಿದೆ.
Next Story





