ಟೇಲರ್ ಸ್ವಿಫ್ಟ್‌ರ ‘1989’ ವರ್ಷದ ಆಲ್ಬಂ 58ನೆ ವಾರ್ಷಿಕ ಗ್ರಾಮಿ ಪ್ರಶಸ್ತಿ ಪ್ರದಾನ
58ನೆ ವಾರ್ಷಿಕ ಗ್ರಾಮಿ ಪ್ರಶಸ್ತಿ ಪ್ರದಾನ
ಲಾಸ್‌ಏಂಜಲಿಸ್, ಫೆ. 16: 58ನೆ ವಾರ್ಷಿಕ ಗ್ರಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಟೇಲರ್ ಸ್ವಿಫ್ಟ್‌ರ ‘1989’ ವರ್ಷದ ಆಲ್ಬಂ ಪ್ರಶಸ್ತಿ ಗಳಿಸಿದರೆ, ಎಡ್ ಶೀರನ್ ಮತ್ತು ಆ್ಯಮಿ ವ್ಯಾಜ್‌ರ ‘ತಿಂಕಿಂಗ್ ಔಟ್ ಲೌಡ್’ ವರ್ಷದ ಹಾಡು ಪ್ರಶಸ್ತಿ ಗಳಿಸಿದೆ ಹಾಗೂ ಮಾರ್ಕ್ ರಾನ್ಸನ್ (ಬ್ರೂನೊ ಮಾರ್ಸ್)ರ ‘ಅಪ್‌ಟೌನ್ ಫಂಕ್’ ವರ್ಷದ ಮುದ್ರಿಕೆ (ರೆಕಾರ್ಡ್) ಪ್ರಶಸ್ತಿ ಗಳಿಸಿದೆ.
ಇಲ್ಲಿನ ಸ್ಟೇಪಲ್ಸ್ ಕಾರ್ಟರ್‌ನಲ್ಲಿ ಸೋಮವಾರ ನಡೆದ ಸಮಾರಂಭವನ್ನು ಸತತ 15ನೆ ಬಾರಿ ಎಲ್.ಎಲ್. ಕೂಲ್ ಜೆ. ನಿರೂಪಿಸಿದರು. ಟೇಲರ್ ಸ್ವಿಫ್ಟ್, ಆ್ಯಡೇಲ್, ಜಸ್ಟಿನ್ ಬೈಬರ್, ಲೇಡಿ ಗಾಗ, ಡೆಮಿ ಲೊವಾಟೊ, ಲ್ಯೂಕ್ ಬ್ರಯಾನ್, ಜೋಯಿ ಅಲೆಕ್ಸಾಂಡರ್ ಹಾಗೂ ಇತರರು ಈ ಸಂದರ್ಭದಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಇತರ ಪ್ರಶಸ್ತಿ ವಿಜೇತರ ವಿವರಗಳು ಇಲ್ಲಿವೆ ಶೇಷ್ಠ ಹೊಸ ಕಲಾವಿದ: ಮೇಘನ್ ಟ್ರೇನರ್
ಶ್ರೇಷ್ಠ ರ್ಯಾಪ್ ಆಲ್ಬಂ: ಕ್ಯಾಂಡ್ರಿಕ್ ಲ್ಯಾಮರ್‌ರ ‘ಟು ಪಿಂಪ್ ಅ ಬಟರ್‌ಫ್ಲೈ’
ಶ್ರೇಷ್ಠ ಪಾಪ್ ಡುಯೋ/ಗ್ರೂಪ್ ಪರ್ಫೋರ್ಮನ್ಸ್: ಮಾರ್ಕ್ ರಾನ್ಸನ್ (ಬ್ರೂನೊ ಮಾರ್ಸ್)
ಶ್ರೇಷ್ಠ ಡ್ಯಾನ್ಸ್ ರೆಕಾರ್ಡಿಂಗ್: ಸ್ಕ್ರಿಲೆಕ್ಸ್, ಡಿಪ್ಲೊ ಮತ್ತು ಜಸ್ಟಿನ್ ಬೈಬರ್ (ವೇರ್ ಆರ್ ಯು ನೌ)
ಶ್ರೇಷ್ಠ ಪಾಪ್ ವೋಕಲ್ ಆಲ್ಬಂ: ಟೇಲರ್ ಸ್ವಿಫ್ಟ್ (1989)
ಶ್ರೇಷ್ಠ ಪಾಪ್ ಸೋಲೊ ಪರ್ಫೋಮನ್ಸ್: ಎಡ್ ಶೀರನ್ (ತಿಂಕಿಂಗ್ ಔಟ್ ಲೌಡ್)
ಶ್ರೇಷ್ಠ ಕಂಟ್ರಿ ಆಲ್ಬಂ: ಕ್ರಿಸ್ ಸ್ಟಾಪಲ್‌ಟನ್ (ಟ್ರಾವೆಲರ್)ಶ್ರೇಷ್ಠ ರಾಕ್ ಆಲ್ಬಂ: ಮ್ಯೂಸ್ (ಡ್ರೋನ್ಸ್)







