ಅತಿ ಹೆಚ್ಚು ಬಾಲಿವುಡ್ ಗೀತೆ ರಚನೆ : ಸಮೀರ್ ಗಿನ್ನೆಸ್ ದಾಖಲೆ

ಮುಂಬೈ, ಫೆ. ೧೭: ಖ್ಯಾತ ಗೀತ ರಚನೆಕಾರ ಸಮೀರ್ ( ಸಮೀರ್ ಅಂಜಾನ್) ಅತಿ ಹೆಚ್ಚು ಬಾಲಿವುಡ್ ಚಿತ್ರ ಗೀತೆಗಳನ್ನು ಬರೆದ ಗಿನ್ನೆಸ್ ದಾಖಲೆ ಮಾಡಿದ್ದಾರೆ. ಅಧಿಕೃತ ದಾಖಲೆಗಳ ಪ್ರಕಾರ ಡಿಸೆಂಬರ್ ೧೫, ೨೦೧೫ ರವರೆಗೆ ೬೫೦ ಬಾಲಿವುಡ್ ಚಿತ್ರಗಳಿಗೆ ಸಮೀರ್ ೩೫೨೪ ಗೀತೆಗಳನ್ನು ನೀಡಿದ್ದಾರೆ. ಅವರ ತಂದೆ ಅಂಜಾನ್ ( ಲಾಲ್ಜಿ ಪಾಂಡೆ ) ಕೂಡ ಖ್ಯಾತ ಗೀತ ರಚನೆಕಾರರು. ಬಾಲಿವುಡ್ ನ ಬಹುತೇಖ ಎಲ್ಲ ಖ್ಯಾತನಾಮ ನಿರ್ದೇಶಕರು ಹಾಗು ನಟರ ಸೂಪರ್ ಹಿಟ್ ಚಿತ್ರಗಳಿಗೆ ಸಮೀರ್ ಗೀತೆ ರಚಿಸಿದ್ದಾರೆ.
Next Story





