ಜಿ.ಪಂ ಚುನಾವಣಾ ಪ್ರಚಾರ ಸಭೆ ಕನ್ನಭಾಗ್ಯ, ಪುಡಾರಿಗಳ ರಕ್ಷಣೆ ಕಾಂಗ್ರೆಸ್ ಸರಕಾರದ ಸಾಧನೆ : ಸಂಸದ ನಳಿನ್ ಟೀಕೆ

ಮೂಡುಬಿದಿರೆ : ಮನೆಯ ಹಟ್ಟಿಯಿಂದ ಗೋವುಗಳ ಕಳ್ಳತನ, ಹಳ್ಳಗಳ ರಸ್ತೆ ಬದಿಯಿಂದ ಮರಗಳ ಕಳ್ಳತನ, ನದಿಯಿಂದ ಮರಳಿನ ಕಳ್ಳತನ, ತಮ್ಮ ಮನೆಯಲ್ಲಿ ಮಲಗಲು ಹೆದರಬೇಕಾದಂತಹ ಪರಿಸ್ಥಿತಿಯ ಮೂಲಕ ರಾವಣರಾಜ್ಯವನ್ನಾಗಿ ಮಾಡಿದ್ದು ಕಾಂಗ್ರೆಸ್ ಸರಕಾರದ ಆಡಳಿತ. ಕಾಂಗ್ರೆಸ್ ಸರಕಾರದ ಸಾಧನೆಗಳು ಒಂದೆರಡಲ್ಲ. ಕನ್ನಭಾಗ್ಯ, ಮರಗಳ್ಳರಿಗೆ ಜೈಲಿನಿಂದ ಬಿಡುಗಡೆ, ಹೊಗೈ ಕದಿಯುವವರಿಗೆ ಭಕ್ಷಣೆ, ಪುಡಾರಿಗಳ ರಕ್ಷಣೆ ಇದು ಕಾಂಗ್ರೆಸ್ ಸರಕಾರದ ಚಿಂತನೆಯ ಯೋಜನೆ. ಸಿದ್ರಾಮಯ್ಯ ಸರಕಾರದ ಘೋಷಣೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಟೀಕೆ ಮಾಡಿದ ಘಟನೆ ಶಿರ್ತಾಡಿಯಲ್ಲಿ ನಡೆದಿದೆ. ಅವರು ಶಿರ್ತಾಡಿ ಜಿ.ಪಂ ಕ್ಷೇತ್ರದ ಅಭ್ಯರ್ಥಿಗಳ ಪರವಾಗಿ ಅಳಿಯೂರಿನಲ್ಲಿ ನಡೆದ ಮತಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಬ್ಯಾಗ್ ಹಿಡಿದುಕೊಂಡು ದೇಶ ಸುತ್ತುತ್ತಿದ್ದ ಕಾಂಗ್ರೆಸ್, ದೇಶದ ಸ್ವಾಭಿಮಾನವನ್ನು ಜಗತ್ತಿಗೆ ತೋರಿಸಲು ಪ್ರವಾಸಕೈಗೊಂಡು 40 ಲಕ್ಷ ಕೋಟಿ ರೂವನ್ನು ದೇಶಕ್ಕೆ ತಂದಿರುವ ಮೋದಿ ಬಗ್ಗೆ ಟೀಕೆ ಮಾಡುತ್ತಿರುವುದು ಖಂಡನೀಯ.
ಕಳಂಕ ರಹಿತ, ಭ್ರಷ್ಠಾಚಾರ ಮುಕ್ತ ಆಡಳಿತವನ್ನು ನೀಡಿರುವ ದ,ಕ ಜಿ.ಪಂಚಾಯತು ರಾಷ್ಟ್ರದಿಂದ ನಿರ್ಮಲ ಗ್ರಾಮ ಪುರಸ್ಕಾರದ ಮೂಲಕ 50ಲಕ್ಷ ಬಹುಮಾನವನ್ನು ಪಡೆದಿರುವುದು ಬಿಜೆಪಿ ಅಧಿಕಾರದಲ್ಲಿದ್ದಾಗ ಎನ್ನುವುದನ್ನು ತಿಳಿದುಕೊಳ್ಳಬೇಕಾಗಿದೆ. ಬಿಜೆಪಿ ಸರಕಾರವು ಒಂದೊಂದು ಕೋಟಿ ರೂಗಳ ಅನುದಾವನ್ನು ನೀಡಿದೆ ಆದರೆ ಕಾಂಗ್ರೆಸ್ ಒಂದು ರೂಪಾಯಿ ಅನುದಾವನ್ನೂ ನೀಡಿಲ್ಲ ಚುನಾಯಿತ ಪ್ರತಿನಿಧಿಗಳ, ತಾಲೂಕು ಪಂಚಾಯತ್ ಸದಸ್ಯರುಗಳ ಹಕ್ಕನ್ನು ಕಸಿದುಕೊಂಡಿದೆ. ಕೇಂದ್ರ ಸರಕಾರವು 14 ನೇ ಹಣಕಾಸು ಆಯೋಗದಿಂದ ನೀಡಿರುವ ಅನುದಾನವನ್ನು ಬಾಕಿ ಇರುವ ಕರೆಂಟ್ ಬಿಲ್ಲುಗಳಿಗೆ ಪಾವತಿಸುವ ಪಂಚಾಯತ್ ಸದಸ್ಯರುಗಳ ಹಕ್ಕನ್ನು ಮತ್ತು ಗೌರವವನ್ನು ಕಸಿದುಕೊಂಡಿದೆ ಶಾಸಕರುಗಳ ಮೂಲಕ ಸರಕಾರವು ಕಸಿದುಕೊಂಡಿದೆ ಎಂದು ಆರೋಪಿಸಿ ಇಂತಹ ದುರಾಡಳಿ ದುರಂಕಾರವನ್ನು ಹೊಂದಿರುವ ಕಾಂಗ್ರೆಸ್ ಸರಕಾರವನ್ನು ಮತದಾರರು ಒದ್ದೋಡಿಸುವ ಆಸಕ್ತಿಯನ್ನು ಈ ಚುನಾವಣೆಯಲ್ಲಿ ತೋರಬೇಕಾಗಿದೆ ಎಂದರು.
ಕುಮ್ಕಿ ಹಕ್ಕನ್ನು ಕಸಿದುಕೊಂಡವರು ಕಾಂಗ್ರೆಸಿಗರು: ಬಿಜೆಪಿ ಸರಕಾರವು ಕುಮ್ಕಿ ಹಕ್ಕನ್ನು ರೈತರಿಗೆ ನೀಡುವ ತಿರ್ಮಾನವನ್ನು ಕೈಗೊಂಡು ರಾಜ್ಯಪಾಲರಿಗೆ ಮನವಿ ಸಲ್ಲಿಸಿದಾಗ ತಡೆ ಹಿಡಿಯಲಾಗಿತ್ತು. ಅಲ್ಲದೆ ಈ ಬಗ್ಗೆ ಶ್ರೀನಿವಾಸ್ ಎಂಬವರು ಸುಪ್ರಿಂಕೋರ್ಟ್‌ಗೆ ಹೋಗಿ ಈ ಹಕ್ಕನ್ನು ಸರಕಾರವೇ ಕಸಿದುಕೊಳ್ಳಬೇಕೆಂದು ಮನವಿ ಸಲ್ಲಿಸಿದ್ದರಿಂದ ಕುಮ್ಕಿ ಹಕ್ಕನ್ನು ಕಸಿದುಕೊಂಡಿದೆ.
ಬಿಜೆಪಿ ಬೀಡಿ ಕಾರ್ಮಿಕರ ಪರವಾಗಿದೆ : ಬೀಡಿ, ಅಡಿಕೆ ಮತ್ತು ಹೊಗೆಸೊಪ್ಪು ನಿಷೇಧಕ್ಕೆ ಕಾಂಗ್ರೆಸ್ ಒತ್ತಡ ತಂದಿದೆ ಹೊರತು ಬಿಜೆಪಿಯಲ್ಲ. ತಾವು ಬೀಡಿಯನ್ನು, ಬೀಡಿ ಕಾರ್ಮಿಕರನ್ನು ಉಳಿಸಿಯೇ ಉಳಿಸುತ್ತೇವೆ ಎಂದ ಅವರು ಶಿರ್ತಾಡಿ ಜಿ.ಪಂ ಮತ್ತು ತಾ.ಪಂ ಕ್ಷೇತ್ರದ ಅಭ್ಯರ್ಥಿಗಳಿಗೆ ಮತಹಾಕಿ ಗೆಲ್ಲಿಸಿದರೆ ಅವರ ಹಿಂದೆ ನಿಂತು ತಾನು ಅಭಿವೃದ್ಧಿ ಕೆಲಸಗಳನ್ನು ಮಾಡಿಸುತ್ತೇನೆ ಎಂಬ ಭರವಸೆಯನ್ನು ನೀಡಿದರು.
ಬಿಜೆಪಿ ಮುಖಂಡರುಗಳಾದ ಕೆ.ಪಿ ಜಗದೀಶ ಅಧಿಕಾರಿ, ಕೆ.ಆರ್. ಪಂಡಿತ್, ಕೆ.ಕೃಷ್ಣರಾಜ ಹೆಗ್ಡೆ, ಸುದರ್ಶನ್, ಎಂ.ಕೆ.ಹರೀಶ್, ಜಿ.ಪಂ ಅಭ್ಯರ್ಥಿ ಸುಜಾರ, ತಾ.ಪಂ ಸದಸ್ಯರಾದ ನಾಗವೇಣಿ, ರೇಖಾ ಸಾಲ್ಯಾನ್.







