ಗಲ್ಲುಶಿಕ್ಷೆ ತಪ್ಪಿಸಿಕೊಳ್ಳುವುದಕ್ಕಾಗಿ ಜೈಲೊಳಗೆ ಗರ್ಭಿಣಿಯಾದ ಮಹಿಳಾ ಕೈದಿ!

ವಿಯೆಟ್ನಾಂ: ಗಲ್ಲು ಶಿಕ್ಷೆಗೊಳಗಾಗಿ ಜೈಲಿನಲ್ಲಿದ್ದ ಮಹಿಳೆಯೊಬ್ಬಳು ಗರ್ಭಧರಿಸಿದ ಘಟನೆ ನಡೆದಿದ್ದು ನಾಲ್ವರು ಜೈಲು ಗಾರ್ಡ್‌ಗಳನ್ನು ಅಮಾನತುಗೊಳಿಸಲಾಗಿದೆ. ಪುರುಷ ಕೈದಿಗೆ ಹಣನೀಡಿ ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಹೆನ್ ತಿ ಹ್ಯೂ (42) ಎಂಬ ಮಹಿಳೆ ಗರ್ಭಿಣಿಯಾಗಿದ್ದಾಳೆ. 2014ರಲ್ಲಿ ಅವಳಿಗೆ ಗಲ್ಲು ಶಿಕ್ಷೆ ನೀಡಲಾಗಿತ್ತು. ಒಬ್ಬ ಕೈದಿಗೆ 2300 ಡಾಲರ್(157802ರೂ.) ನೀಡಿ ಆತನಿಂದ ಆಕೆ ಜೀವ ಉಳಿಸಿಕೊಳ್ಳುವುದಕ್ಕಾಗಿ ಗರ್ಭಧರಿಸಿದ್ದಳು.
ಮೂರು ವರ್ಷಕ್ಕಿಂತ ಕೆಳಗಿನ ಪ್ರಾಯದ ಮಕ್ಕಳಿರುವ ತಾಯಂದಿರಿಗೆ ಗಲ್ಲುಶಿಕ್ಷೆ ವಿಧಿಸುವಂತಿಲ್ಲ ಎಂದು ವಿಯೆಟ್ನಾಂ ಕಾನೂನಲ್ಲಿದೆ. ಇದರ ಲಾಭವೆತ್ತಲು ಆಕೆ ಈ ರೀತಿ ಗರ್ಭಿಣಿಯಾದಳು. ಕೈದಿ ವೀರ್ಯವನ್ನು ಒಂದುಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿ ಎರಡು ಬಾರಿ ಹ್ಯೂಳಿಗೆ ನೀಡಿದ್ದ. ಇದನ್ನು ಹ್ಯೂ ಸಿಂರಿಂಜ್ ಬಳಸಿ ಸ್ವತಃ ಇಂಜೆಕ್ಟ್ ಮಾಡಿಕೊಂಡಿದ್ದಳು. 2015 ಆಗಸ್ಟ್‌ನಲ್ಲಿ 27ವರ್ಷ ವಯಸ್ಸಿನ ಕೈದಿಯೊಬ್ಬನಿಂದ ಹ್ಯೂ ಹಣಕೊಟ್ಟು ವೀರ್ಯ ಖರೀದಿಸಿದ್ದಳು.
Next Story





