ಜೆಎನ್ ವಿವಿ ವಿದ್ಯಾರ್ಥಿ ಸಂಘದ ನಾಯಕ ಕನ್ಹೇಯಾಗೆ ಮಾ.2ರ ತನಕ ನ್ಯಾಯಾಂಗ ಬಂಧನ

ಹೊಸದಿಲ್ಲಿ, ಫೆ.17: ಜವಾಹರ‍್ಲಾಲ್ ನೆಹರೂ ವಿವಿ ವಿದ್ಯಾರ್ಥಿ ಸಂಘದ ನಾಯಕ ಕನ್ಹೈಯಾ ಕುಮಾರ‍್ ಅವರಿಗೆ ಪಟಿಯಾಲ ಹೌಸ್ ಕೋರ್ಟ್ ಇಂದು ಮಾರ್ಚ್ 2ರ ತನಕ ನ್ಯಾಯಾಂಗ ಬಂಧನ ವಿಧಿಸಿದೆ.
ವಿದ್ಯಾರ್ಥಿ ಸಂಘದ ನಾಯಕ ಕನ್ಹೈಯಾ ಕುಮಾರ‍್ ಅವರನ್ನು ವಿಚಾರಣೆಗೆ ಪಟಿಯಾಲ ಹೌಸ್ ಕೋರ್ಟ್‌ಗೆ ಹಾಜರುಪಡಿಸಿದಾಗ ಅವರಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿ, ತಿಹಾರ್ ಜೈಲ್‌ನಲ್ಲಿ ಸೂಕ್ತ ರಕ್ಷಣೆ ಒದಗಿಸುವಂತೆ ಆದೇಶ ನೀಡಿತು.
ಇದಕ್ಕು ಮೊದಲು ನ್ಯಾಯಾಲಯಕ್ಕೆ ಕನ್ಹೈಯಾ ಕುಮಾರ‍್ ಅವರನ್ನು ಬಿಗು ಭದ್ರತೆಯಲ್ಲಿ ವಿಚಾರಣೆಗೆ ಹಾಜರುಪಡಿಸಲು ಪೊಲೀಸರು ಕರೆ ತರುತ್ತಿದ್ದಾಗ ಅವರ ಮೇಲೆ ವಕೀಲರ ಗುಂಪೊಂದು ಹಲ್ಲೆ ನಡೆಸಿ, ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿತ್ತು ಎನ್ನಲಾಗಿದೆ.
ಸುಮಾರು 400ಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದ್ದರೂ, ಪೊಲೀಸರ ರಕ್ಷಣಾಕೋಟೆಯನ್ನು ಭೇದಿಸಿ ಒಳನುಗ್ಗಿದ ವಕೀಲರ ಗುಂಪು ಕನ್ಹೈಯಾ ಕುಮಾರ‍್ ಅವರೊಂದಿಗೆ ಅನುಚಿತವಾಗಿ ವರ್ತಿಸಿ, . ಇದೇ ವೇಳೆ ಘಟನೆಯ ಬಗ್ಗೆ ವರದಿ ಮಾಡಲು ಬಂದಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೂ ಹಲ್ಲೆ ನಡೆಸಿ ಧಾಂದಲೆ ನಡೆಸಿರುವ ಘಟನೆ ವರದಿಯಾಗಿದೆ.
ಸೋಮವಾರ ಜೆಎನ್ ವಿವಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿ ವಿಕ್ರಮ್ ಚೌಹಾನ್ ನೇತೃತ್ವದ ವಕೀಲರ ತಂಡ ಇಂದು ಕನ್ಹೈಯಾ ಕುಮಾರ‍್ ಹಲ್ಲೆ ನಡೆಸಿದೆ ಎಂದು ವರದಿಯಾಗಿದೆ. ವಿದ್ಯಾರ್ಥಿ ಸಂಘದ ನಾಯಕ ಕನ್ಹೈಯಾ ಕುಮಾರ‍್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಂದರ್ಭದಲ್ಲಿ ಯಾರಿಗೆಲ್ಲ ಅವಕಾಶ ನೀಡಬೇಕೆಂದು ಸುಪ್ರೀಮ್ ಕೋರ್ಟ್ ಸ್ಪಷ್ಟವಾಗಿ ನಿರ್ದೇಶನ ನೀಡಿದ್ದರೂ, ವಕೀಲರ ತಂಡವೊಂದು ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿ, ತ್ರಿವರ್ಣ ಧ್ವಜದೊಂದಿಗೆ ದೇಶದ ಪರ ಘೋಷಣೆ ಕೂಗುತ್ತಾ ಆಗಮಿಸಿದ್ದು., ಮಾಧ್ಯಮಗಳ ಪ್ರತಿನಿಧಿಗಳ ಮೇಲೂ ಹಲ್ಲೆ ನಡೆಸಿದ್ದು, ಗುಂಪೊಂದು ಮಾಧ್ಯಮ ಪ್ರತಿನಿಧಿಗಳ ಮೇಲೆ ಕಲ್ಲು ತೂರಾಟ ನಡೆಸಿತೆಂದು ಮೂಲಗಳು ತಿಳಿಸಿವೆ.
ಬಂಧನ ವಿರೋಧಿಸಿ ಎನ್ ಎಸ್‌ಯುಐ ಪ್ರತಿಭಟನೆ: ವಿದ್ಯಾರ್ಥಿ ನಾಯಕ ಕನ್ಹೇಯ್ ಕುಮಾರ‍್ ಅವರ ಬಂಧನ ವಿರೋಧಿಸಿ ಇಂದು ಎನ್‌ಎಸ್ ಯುಐ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಿದೆ.





