ಅರಣ್ಯ ಇಲಾಖೆಯ ಪುರುಷ ಉದ್ಯೋಗಿಯಿಂದ ಮಹಿಳೆಯರಿಗೆ ಫಿಸಿಕಲ್ ಟೆಸ್ಟ್, ವ್ಯಾಪಕ ಕೋಲಾಹಲ!

ಚಿತ್ತೌಡ್‌ಗಡ: ಅರಣ್ಯ ಇಲಾಖೆಯ ಅರಣ್ಯ ರಕ್ಷಕ ಹುದ್ದೆ ಭರ್ತಿ ಪರೀಕ್ಷೆಯಲ್ಲಿ ತುಂಬ ವಿಷಾದಕರ ಘಟನೆ ನಡೆದಿದೆ. ಚಿತ್ತೌಡ್‌ಗಡದಲ್ಲಿ ಮಹಿಳಾ ಅಭ್ಯರ್ಥಿಯ ಶಾರೀರಿಕ ಪರೀಕ್ಷೆಯನ್ನು ಪುರುಷ ಗಾರ್ಡ್‌ವೊಬ್ಬ ನಡೆಸಿದ್ದಾನೆ. ಈ ಚಿತ್ರಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದರಿಂದ ಕೋಲಾಹಲವಾಗಿದ್ದು ಫಾರೆಸ್ಟ್‌ಗಾರ್ಡ್‌ನನ್ನು ಅಮಾನತುಗೊಳಿಸಲಾಗಿದೆ. ಕರುಣ್‌ಪಾಲ್ ಎಂಬ ಗಾರ್ಡ್ ಕೆಲವರ ಉಪಸ್ಥಿತಿಯಲ್ಲಿ ಮಹಿಳಾ ಅಭ್ಯರ್ಥಿಗಳ ಎದೆಯಳತೆ ತೆಗೆದಿದ್ದಾನೆ.
57ಹುದ್ದೆಗಳಿಗೆ ಜನವರಿ ಹತ್ತರಂದು ಲಿಖಿತ ಪರೀಕ್ಷೆ ನಡೆದಿತ್ತು. 1512 ಮಂದಿ ಪಾಸಾಗಿದ್ದರು.
ಇವರನ್ನು ಫೆ1ರಿಂದ ಮಾರ್ಚ್ 1ರವರೆಗೆ ಶಾರೀರಿಕ ಪರೀಕ್ಷೆ ನಡೆಸಲಾಗುತ್ತಿದೆ. ಮೊದಲ ದಿನ 250 ಅಭ್ಯರ್ಥಿಗಳ ಶಾರೀರಿಕ ಪರೀಕ್ಷೆ ನಡೆಸಲಾಯಿತು. ಇವರಲ್ಲಿ ಹದಿನೆಂಟು ಮಹಿಳಾ ಅಭ್ಯರ್ಥಿಗಳಿದ್ದರು. ಈ ಸಂದರ್ಭದಲ್ಲಿ ಮಹಿಳಾ ವೈದ್ಯೆಯೊಬ್ಬಳನ್ನು ಕರೆಸಿಕೊಳ್ಳಲಾಗಿತ್ತು.
ಜೊತೆಗೆ ಅರಣ್ಯ ಇಲಾಖೆಯ ಮಹಿಳಾ ಉದ್ಯೋಗಿಗಳಿದ್ದರೂ ಆತನಿಂದ ಎದೆ ಅಳತೆ ತೆಗೆಸಲಾಗಿದೆ.
ಉಪಅರಣ್ಯ ಸಹಾಯಕ ಎಸ್ ಖಾನ್ ರನ್ನು ಕೇಳಿದಾಗ ಹೀಗೆ ನಡೆಯಲು ಸಾಧ್ಯವಿಲ್ಲ ಎಂದಿದ್ದರು.ಆದರೆ ಅವರಿಗೆ ಚಿತ್ರಗಳನ್ನು ತೋರಿಸಿದಾಗ ಒಪ್ಪಿಕೊಂಡ ಅವರು ಮಹಿಳೆಯರ ಅಳತೆಯನ್ನು ಮಹಿಳಾ ಗಾರ್ಡ್‌ಗಳಿಂದ ಮಾಡಿಸಬೇಕಿತ್ತು ಇದು ಇಲಾಖೆಯ ನಿರ್ಲಕ್ಷ್ಯವಾಗಿದೆ ಎಂದು ಹೇಳಿದರು.







