ದೇಶದಸಂಸ್ಕತಿ, ಪರಂಪರೆ ವಿಶ್ವಮಾನ್ಯವಾಗಿದ್ದು, ಐತಿಹಾಸಿಕ ನಿರ್ಮಾಣಗಳು ಎಂದೆಂದಿಗೂ ಯೋಗ್ಯವಾಗಿವೆ-ರಾಮಾಜೋಯಿಸ್
ಬೆಂಗಳೂರು,ಫೆ.17: ದೇಶದಸಂಸ್ಕತಿ, ಪರಂಪರೆ ವಿಶ್ವಮಾನ್ಯವಾಗಿದ್ದು, ಐತಿಹಾಸಿಕ ನಿರ್ಮಾಣಗಳು ಎಂದೆಂದಿಗೂ ಯೋಗ್ಯವಾಗಿವೆಎಂದು ಸುಪ್ರೀಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ, ಮಾಜಿ ರಾಜ್ಯಪಾಲ ರಾಮಾಜೋಯಿಸ್ಅಭಿಪ್ರಾಯಪಟ್ಟಿದ್ದಾರೆ. ಸದಾಶಿವ ನಗರದಲ್ಲಿ ಆರಂಭಗೊಂಡಿರುವ ಮಹಾವಾಸ್ತು ಶಾಖೆಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸ್ಮಾರಕಗಳು ಜ್ಞಾನ ಬಂಢಾರಗಳು. ಅವುಗಳ ಬಗ್ಗೆ ಸಂಶೋಧನೆ ನಡೆದು ವಿದ್ಯಾರ್ಥಿಗಳಿಗೆ ವಾಸ್ತುಜ್ಞಾನದ ಆಳ ತಿಳಿಯುವಂತಾಗಬೇಕು ಎಂದರು.
ಯಾಂತ್ರಿಕತೆ ಮ್ತು ತಾಂತ್ರಿಕತೆ ಇಲ್ಲದಕಾಲದಲ್ಲಿ, ತಾಂಜಾವೂರಿನ ಬೃಹತ್ ದೇವಾಲಯ ನಿರ್ಮಾಣ, ಬೇಲೂರು-ಹಳೇಬೀಡಿನ ಶಿಲ್ಪಕಲಾಕೌಶಲ್ಯಗಳನ್ನು ನಮ್ಮ ಪೂರ್ವೀಕರು ಅದ್ಭುತವಾಗಿ ನಿರ್ಮಾಣ ಮಾಡಿದ್ದು ಇವು ನಮ್ಮ ಸಂಸ್ಕೃತಿಯ ಹೆಮ್ಮೆಯ ಪ್ರತೀಕಗಳು. ಹೀಗಾಗಿಯೇ ನಮ್ಮ ಇಂದಿನ ವಿದ್ಯಾರ್ಥಿಗಳು ವಾಸ್ತು ಶಿಕ್ಷಣವನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕು ಎಂದು ಹೇಳಿದರು.
ವಾಸ್ತು ಶಾಸ್ತ್ರವು ಪಾರಂಪರಿಕ ವಿಧಾನವೆಂದು ಪರಿಗಣಿಸದೆ ಆಧುನಿಕ, ವೈಜ್ಞಾನಿಕ ದೃಷ್ಠಿಕೋನದಿಂದ ನೋಡುವಂತಾಗಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು. ಮಹಾವಾಸ್ತು ಸಂಸ್ಥಾಪಕ, ಖ್ಯಾತ ವಾಸ್ತು ಶಾಸ್ತ್ರಜ್ಞ ಡಾ.ಕುಷ್‌ದೀಪ್ ಬನ್ಸಾಲ್ ಮಾತನಾಡಿ, ವಿಶ್ವದಾದ್ಯಂತ ಗ್ರಾಹಕರನ್ನು ಹೊಂದಿರುವ ಭಾರತದ ಪ್ರಮುಖ ವಾಸ್ತು ಕನ್ಸಲ್ಟೆನ್ಸಿ ಮಹಾವಾಸ್ತು ಶಾಖೆ ಬೆಂಗಳೂರಿನಲ್ಲಿ ಆರಂಭವಾಗಿರುವುದು ಸಂತಸ ತಂದಿದೆ. ಶರವೇಗದಲ್ಲಿ ಬೆಳೆಯುತ್ತಿರುವ ಬೆಂಗಳೂರಿನ ರಿಯಲ್ ಎಸ್ಟೇಟ್, ಕಾರ್ಪೋರೇಟ್ ಸೆಕ್ಟರ್, ಬೃಹತ್ ವಸತಿ ಸಮುಚ್ಛಯ, ವೈಯಕ್ತಿಕ ಗೃಹ ಖರೀದಿದಾರರು ಸೇರಿದಂತೆ ಇತರೆ ವಸತಿ ಸೌಕರ್ಯಗಳಿಗೆ ಸಂಸ್ಥೆ ವಾಸ್ತು ದೊರಕಿಸಿಕಡಲಿದೆ ಎಂದರು.







