ದೇರಳಕಟ್ಟೆ : ಸುನ್ನೀ ಸಮ್ಮೇಳನ ಸ್ವಾಗತ ಸಮಿತಿ ಕಾರ್ಯಲಯದ ಕಚೇರಿ ಉದ್ಘಾಟನೆ

ಉಳ್ಳಾಲ. ಫೆ, 17: ಸಿರಾಜುಲ್ ಮುನೀರ್ ಅಲ್-ಮದೀನಾ ಸುನ್ನೀ ಕೋ-ಆರ್ಡಿನೇಶನ್ ಇದರ ವತಿಯಿಂದ ಫೆ,28ರಂದು ದೇರಳಕಟ್ಟೆಯಲ್ಲಿ ಸುನ್ನೀ ಸಮ್ಮೇಳನ ನಡೆಯಲಿದ್ದು ಇದರ ಸ್ವಾಗತ ಸಮಿತಿ ಕಾರ್ಯಲಯದ ಕಚೇರಿ ದೇರಳಕಟ್ಟೆಯ ನವಾರ್ ಕಾಂಪ್ಲೆಕ್ಸ್‌ನಲ್ಲಿ ಬುಧವಾರ ಸಂಜೆ ಮಂಜನಾಡಿ ಅಲ್-ಮದೀನಾ ಇಸ್ಲಾಮಿಕ್‌ನ ಅಧ್ಯಕ್ಷ ಅಬ್ಬಾಸ್ ಉಸ್ತಾದ್ ಉದ್ಘಾಟಿಸಿ ಶುಭ ಹಾರೈಸಿದರು.
ಸ್ವಾಗತ ಸಮಿತಿ ಕನ್ವೀನರ್ ಕೆ.ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಪ್ರಚಾರ ಸಮಿತಿ ಅಧ್ಯಕ್ಷ ಕೆ.ಎಚ್ ಇಸ್ಮಾಯಿಲ್ ಸಅದಿ ಕಿನ್ಯ, ಪ್ರಚಾರ ಸಮಿತಿ ಕನ್ವೀನರ್ ಇಸ್ಹಾಕ್ ಝುಹುರಿ, ಎಸ್‌ಜೆಎಂ ದೇರಳಕಟ್ಟೆಯ ಅಧ್ಯಕ್ಷ ಇಸ್ಮಾಯಿಲ್ ಸಅದಿ ಉರುಮಣೆ, ಎಸ್‌ವೈಎಸ್ ದೇರಳಕಟ್ಟೆ ಅಧ್ಯಕ್ಷ ಏಷ್ಯನ್ ಬಾವ ಹಾಜಿ, ಸ್ವಾಗತ ಸಮಿತಿ ಉಪಾಧ್ಯಕ್ಷ ಹಾಜಿ ಅಲಿ ಕುಂಞ ಪಾರೆ, ಸಿರಾಜುಲ್ ಮುನೀರ್ ಅಲ್-ಮದೀನಾ ಸುನ್ನೀ ಕೋ-ಆರ್ಡಿನೇಶನ ಕಾರ್ಯದರ್ಶಿ ಉಮರ್ ಸಖಾಫಿ ಕಲ್ಮಂಜ, ಸ್ವಾಗತ ಸಮಿತಿ ಕಾರ್ಯದಶಿರ್ ಮುಹಮ್ಮದ್ ಹಾಜಿ ಖಂಡಿಕ, ಬೆಳ್ಮ ಗ್ರಾ.ಪಂ ಸದಸ್ಯ ಕಬೀರ್ ಡಿ, ಕರೀಂ ಕಲ್ಪಾದೆ, ಹುಸೈನ್ ಉದ್ಯಾವರ, ಶೌಕತ್ ಹಾಜಿ ದೇರಳಕಟ್ಟೆ, ಕೆ.ಇ ಸಾಲೆತ್ತೂರು, ಯುಸಫ್ ರಝ್ವಿ, ಮುಹಮ್ಮದ್ ಮಾಸ್ಟರ್ ಕಲ್ಕಟ್ಟ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.







