ಕಡಬ : ಕರ್ನಾಟಕ ಪ್ರದೇಶ ಜನತಾದಳ (ಜಾತ್ಯಾತೀತ)ಅಭ್ಯರ್ಥಿಗಳ ಪರ ಕಡಬದಲ್ಲಿ ಚುನಾವಣಾ ಪ್ರಚಾರ ಸಭೆ

ಕಡಬ: ಈ ಹಿಂದೆ ರಾಷ್ಟ್ರ ಹಾಗೂ ರಾಜ್ಯದಲ್ಲಿ ಆಳ್ವಿಕೆ ನಡೆಸಿದ ಜೆಡಿಎಸ್‌ನ ಹಿರಿಯ ನಾಯಕರು ಹಮ್ಮಿಕೊಂಡ ಜನಪರ ಯೋಜನೆಗಳ ಸಾಧನೆ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಚುನಾವಣೆಗೆ ವರದಾನವಾಗಲಿದೆ. ತಳಮಟ್ಟದ ಗೆಲುವು ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಮಾಜಿ ಸಚಿವ , ಕರ್ನಾಟಕ ಪ್ರದೇಶ ಜನತಾದಳ (ಜಾತ್ಯಾತೀತ) ರಾಜ್ಯ ಉಪಾಧ್ಯಕ್ಷ ಅಮರನಾಥ ಶೆಟ್ಟಿ
ಹೇಳಿದರು. ಅವರು ಕಡಬದಲ್ಲಿ ಬುಧವಾರ ಸಾಯಂಕಾಲ ನಡೆದ ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ ) ಪಕ್ಷದ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಅಭ್ಯರ್ಥಿಗಳ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು
ಈ ಹಿಂದೆ ಜಿಲ್ಲಾ ಪರಿಷತ್ ಸದಸ್ಯರಾಗಿದ್ದ ಸಯ್ಯದ್ ಮೀರಾ ಸಾಹೇಬ್ ಪ್ರತಿ ಗ್ರಾಮ ಮಟ್ಟದಲ್ಲಿ ಮೂಲ ಭೂತ ಅವಶ್ಯಕತೆಗಳಿಗೆ ಒತ್ತು ಕೊಟ್ಟು ಸಾಧನೆಯ ಹರಿಕಾರನಾಗಿ ಜನಮನಗೆದ್ದು ಪ್ರಸ್ತುತ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಯಾಗಿ ಸ್ಪರ್ದಿಸುತ್ತರುವ ಇವರಿಗೆ ತಮ್ಮ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿಕೊಂಡರು. ಕಡಬ ಕ್ಷೇತ್ರ ಜಿಲ್ಲಾ ಪಂಚಾಯಿತಿ ಅಭ್ಯರ್ಥಿ ಸಯ್ಯದ್ ಮೀರಾ ಸಾಹೇಬ್ ಮಾತನಾಡಿ , ತನ್ನ ಅವಧಿಯಲ್ಲಿ ಗ್ರಾಮೀಣ ಭಾಗದಲ್ಲಿ ಹಲವಾರು ರಸ್ತೆಗಳಿಗೆ ಡಾಮರಿಕರಣ, ಸೇತುವೆ ನಿರ್ಮಾಣ, ಕುಡಿಯುವ ನೀರಿನ ಯೋಜನೆ, ಅಂಗನವಾಡಿ, ಶಾಲಾ ಕಟ್ಟಡಗಳ ನಿರ್ಮಾಣ , ಕಡಬ ಭಾಗದಲ್ಲಿ ಪ್ರಥಮ ಭಾರಿಗೆ ಮನೆ ಮನೆಗೆ ವಿದ್ಯುತ್‌ಕರಣ ಮಾಡಲಾಗಿದೆ. ತನ್ನ ಅವಧಿಯ ಬಳಿಕ ಈ ಭಾಗದಲ್ಲಿ ಯಾವೂದೆ ಅಭಿವೃದ್ದಿಯಾಗಿಲ್ಲ. ಜೆಡಿಎಸ್ ಪಕ್ಷ ತನಗೆ ಟಿಕೆಟ್ ನೀಡಿ ದೆ. ತನ್ನನ್ನು ತಾವುಗಳು ಗೆಲ್ಲಿಸುವ ಮೂಲಕ ಮತ್ತೊಮ್ಮೆ ಅಭಿವೃದ್ದಿಗೆ ಪಣತೊಡಲಿದ್ದೇನೆ ಎಂದರು. ತಾಲೂಕು ಪಂಚಾಯಿತಿ ಅಭ್ಯರ್ಥಿಗಳಾದ ಚಂದ್ರಶೇಖರ ಕೋಡಿಬೈಲು ಹಾಗೂ ಇ.ಜಿ ಜೋಸೇಫ್ ಮತನೀಡಿ ಗೆಲ್ಲಿಸುವಂತೆ ವಿನಂತಿಸಿಕೊಂಡರು. ಪಕ್ಷದ ದ.ಕ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮ್ಗಣೇಶ್ , ಬೆಳ್ತಂಗಡಿ ತಾಲೂಕು ಹಾಗೂ ಕಡಬ ಉಸ್ತುವಾರಿ ಪ್ರವೀನ್ಚಂದ್ರ ಜೈನ್,ನ್ಯಾಯವಾಧಿ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿಸತೀಶ್,ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಅಜೀರ್ ಕುದ್ರೋಳಿ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಎಂ.ಎಸ್ ನಾಸೀರ್, ರಾಜ್ಯ ಅಲ್ಪಸಂಖ್ಯಾತ ಘಟಕದ ಸದಸ್ಯ ಮುನೀರ್ ಮಕ್ಕೇಚೇರಿ, ಜಿಲ್ಲಾ ಯುವಜನತಾದಳ ಅಧ್ಯಕ್ಷ ಅಕ್ಷಿತ್ ಸುವರ್ಣ ಮಾತನಾಡಿದರು. ಕಡಬ ವಲಯ ಉಪಾಧ್ಯಕ್ಷ ಸುಂದರ ಗೌಡ ಬಳ್ಳೇರಿ, ಮುಖಂಡರಾದ ಉದಯ ಶಂಖರ ರೈ ಕುಬಲಾಡಿ, ಹರಿಪ್ರಸಾದ್ ಎನ್ಕಾಜೆ, ಶುಸಾಂತ್ ರೈ, ಸಲಿಂ ಪೆಲತ್ರಾಣೆ, ಪ್ರಬೀತ್ ಮಂಜೋಳಿ, ವರ್ಗಿಸ್ ಮೀನಾಡಿ ಮೊದಲಾದವರು ಉಪಸ್ಥಿತರಿದ್ದರು. . ಸನು ಕಲ್ಲುಗುಡ್ಡೆ ನಿರೂಪಿಸಿ , ವಂದಿಸಿದರು.







