ಮೂಡುಬಿದಿರೆ: ಕಾಂಗ್ರೆಸ್ ಸರಕಾರ ದುರಾಡಳಿತ ನಡೆಸಿಲ್ಲ : ಅಭಯಚಂದ್ರ ಜೈನ್
 copy.jpg)
ಬೆಳುವಾಯಿ ಪೇಟೆಯಲ್ಲಿ ಸಚಿವ ಕೆ.ಅಭಯಚಂದ್ರ ಜೈನ್ ಮತಯಾಚಿಸಿದರು
ಮೂಡುಬಿದಿರೆ: ಈ ಬಾರಿಯ ಜಿ.ಪಂ, ತಾ.ಪಂ ಚುನಾವಣೆಯ ಪ್ರಚಾರದಲ್ಲಿ ಕಾರ್ಯಕರ್ತರು ಹುಮ್ಮಸ್ಸಿನಿಂದ ಭಾಗವಹಿಸಿದಲ್ಲದೆ, ಮತದಾರರ ಒಲವು ಕೂಡಾ ಕಾಂಗ್ರೆಸ್ ಕಡೆಗಿರುವುದರಿಂದ ಫಲಿತಾಂಶ ಕಾಂಗ್ರೆಸ್ ಪರವಾಗಿರುವುದು ಸ್ಪಷ್ಟ. ಜನರು ನಮ್ಮನ್ನು ಒಪ್ಪಿಕೊಳ್ಳುವ ಪ್ರಕಾರ ನಾವು ಯಾವುದೇ ದುರಾಡಳಿತ ಮಾಡಿಲ್ಲವೆನ್ನುವುದು ಖಾತ್ರಿಯಾಗುತ್ತದೆ ಎಂದು ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್ ಅಭಿಪ್ರಾಯಪಟ್ಟರು. ಶಿರ್ತಾಡಿ ಜಿ.ಪಂ, ಬೆಳುವಾಯಿ ತಾ.ಪಂ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪರ ಬುಧವಾರ ಸಂಜೆ ಬೆಳುವಾಯಿ ಪೇಟೆಯಲ್ಲಿ ಮತಯಾಚಿಸಿ ಸುದ್ದಿಗಾರರೊಡನೆ ಮಾತನಾಡಿದರು. ಕಾಂಗ್ರೆಸ್ ಸರಕಾರವು ಈಗಾಗಲೇ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಜಿಲ್ಲೆಯಲ್ಲಿ ಮತ್ತೆ ಕಾಂಗ್ರೆಸ್ ಆಡಳಿತ ನಡೆಸಲಿದ್ದು, ಜನಪರ ಕೆಲಸಗಳನ್ನು ಮಾಡಲಿದೆ ಎಂದರು.
ಶಿರ್ತಾಡಿ ಜಿ.ಪಂ. ಕಾಂಗ್ರೆಸ್ ಅಭ್ಯರ್ಥಿ ಸುಮಿತ್ರಾ, ಬೆಳುವಾಯಿ ತಾ.ಪಂ ಅಭ್ಯರ್ಥಿ ವಿಜಯ, ಬೆಳುವಾಯಿ ಗ್ರಾ.ಪಂ ಮಾಜಿ ಅಧ್ಯಕ್ಷ ರಾಘು ಕೋಟ್ಯಾನ್, ಕಾಂಗ್ರೆಸ್ ಮುಖಂಡ ಶಿವಾನಂದ ಪಾಂಡ್ರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದರು.





