ಮುಡಿಪು ವ್ಯಾಪ್ತಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಬಿಜೆಪಿ ಪರವಾಗಿ ಮತಯಾಚನೆ

ಮುಡಿಪು: ಸಂಸದ ನಳಿನ್ ಕುಮಾರ್ ಕಟೀಲ್ ಅವರಿಂದ ಮತಪ್ರಚಾರ ಕೊಣಾಜೆ: ಸಮೀಪಿಸುತ್ತಿರುವಂತೆಯೇ ರಾಜಕೀಯ ಪಕ್ಷಗಳ ಪ್ರಚಾರ ಭರಾಟೆ ಕಾವೇರಿದೆ. ಕುರ್ನಾಡು ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಬಿಜೆಪಿ ಮುಖಂಡ ಸಂತೋಷ್ ಕುಮಾರ್ ಬೋಳಿಯಾರ್ ಅವರ ನೇತೃತ್ವದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಬಿಜೆಪಿಯ ವಿವಿದ ಮುಖಂಡರುಗಳೊಂದಿಗೆ ಬುಧವಾರ ಬಿಜೆಪಿ ಪರವಾಗಿ ಭರ್ಜರಿ ಮತ ಪ್ರಚಾರ ನಡೆಸಿದರು. ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಸಂತೋಷ್ ಕುಮಾರ್ ಬೊಳಿಯಾರ್ ಅವರ ನೇತೃತ್ವದಲ್ಲಿ ಬುಧವಾರ ಬೆಳಿಗ್ಗೆಯಿಂದ ಮೊಂಟೆಪದವು, ತೌಡುಗೋಳಿ, ಮೋಂಟುಗೋಳಿ, ವಿದ್ಯಾನಗರ, ಹೂಹಾಕುವ ಕಲ್ಲು, ಕೈರಂಗಳ, ಮುಡಿಪು ಪ್ರದೇಶಗಳಲ್ಲಿ ರೋಡ್ ಶೋ ನಡೆಸಿ ಜಿಲ್ಲಾ ಪಂಚಾಯಿತಿ ಅಭ್ಯರ್ಥಿ ಶಕಿಲಾ ಜನಾರ್ದನ್, ತಾಲೂಕು ಪಂಚಾಯಿತಿ ಅಭ್ಯರ್ಥಿಗಳಾದ ಸಿರಾಜ್, ನವೀನ್ ಪಾದಲ್ಪಾಡಿ ಹಾಗೂ ಪ್ರೇಮಾನಂದ ರೈಅವರ ಪರವಾಗಿ ಮತಯಾಚನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕೆಲವೆಡೆ ಮಹಿಳೆಯರು ಬೆಲ್ಲ ನೀರು ನೀಡಿ ಸಂಸದರನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರುಗಳಾದ ಟಿ.ಜಿ.ರಾಜಾರಾಂ ಭಟ್, ಡಾ.ಮುನೀರ್ ಬಾವ ಹಾಜಿ, ಚಂದ್ರಶೇಖರ್ ಉಚ್ಚಿಲ್, ಚಂದ್ರಹಾಸ್ ಉಳ್ಳಾಲ್, ಬಾಸ್ಕರ ಕೋಟ್ಯಾನ್, ಕೇಶವ ಭಟ್, ಸೇಸಪ್ಪ ಟೈಲರ್, ಜಗದೀಶ್ ಆಳ್ವ, ಗಿರೀಶ್ ಬೆಳ್ಳೇರಿ, ನಿತಿನ್ ಗಟ್ಟಿ, ಚಂದ್ರಹಾಸ ಅಡ್ಯಂತಾಯ, ಶೈಲಜಾ, ದೇವಪ್ಪ ಕುಲಾಲ್, ಸಿದ್ದೀಕ್ ಬಾಳೆಪುಣಿ, ಉದಯಕುಮಾರ್, ವಿಶ್ವನಾಥ ಶೆಟ್ಟಿ, ಸುಲೈಮಾನ್, ಚಂದ್ರಶೇಖರ ಕಲ್ಲಾಪು, ಮಹೇಶ್ ಚೌಟ ಮುಂತಾದವರು ಉಪಸ್ಥಿತರಿದ್ದರು.





