ಉಪ್ಪಳ : ಪಾಪ್ಯುಲರ್ ಫ್ರಂಟ್ ನಿಂದ ಯೂನಿಟಿ ಮಾರ್ಚ್ ಹಾಗೂ ಸಾರ್ವಜನಿಕ ಸಭೆ
 copy.jpg)
ಮಂಜೇಶ್ವರ : ವಿವಿಧತೆಯಲ್ಲಿ ಏಕತೆಯನ್ನು ಎತ್ತಿ ಹಿಡಿಯಿರಿ ಎಂಬ ಘೋಷ ವಾಕ್ಯದೊಂದಿಗೆ ಪಾಪ್ಯುಲರ್ ಫ್ರಂಟ್ ಡೇ ದಿನದಂಗವಾಗಿ ಉಪ್ಪಳದಲ್ಲಿ ಯೂನಿಟ್ ಮಾರ್ಚ್ ಹಾಗೂ ಸಾರ್ವಜನಿಕ ಸಭೆ ನಡೆಯಿತು. ಉಪ್ಪಳ ನಯಾಬಝಾರ್ ನಿಂದ ಪ್ರಾರಂಭಗೊಂಡ ಯೂನಿಟ್ ಮಾರ್ಚ್ ನಲ್ಲಿ ನೂರಾರು ಕಾರ್ಯಕರ್ತರು ಪರೇಡ್ ನಡೆಸಿದರು. ಬಳಿಕ ಉಪ್ಪಳದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಪಾಪ್ಯುಲರ್ ಫ್ರಂಟ್ ರಾಜ್ಯ ಸಮಿತಿ ಸದಸ್ಯ ಪಿ.ವಿ ರಶೀದ್ ಪುಳಿಕ್ಕಲ್ ಉದ್ಗಾಟಿಸಿದರು. ಬಳಿಕ ಮಾತನಾಡಿದ ಅವರು ದೇಶದಲ್ಲಿ ಆರ್.ಎಸ್.ಎಸ್ ಜನ್ಮತಾಳಿದ್ದು ದೇಶದ ಜನತೆಯ ಬೆಲವಣಿಗೆಗಲ್ಲ ಬದಲಾಗಿ ದೇಶದಲ್ಲಿ ಹಿಂದುತ್ವ ರಾಷ್ಟ್ರದ ಕಲ್ಪನೆಯೊಂದಿಗೆ ಜನ್ಮ ತಾಳಿದೆ.ಆರ್.ಎಸ್.ಎಸ್ ದೇಶಕ್ಕೆ ಅಪಾಯ ಎಂದು ಅವರು ಹೇಳಿದರು.
ಮೌಲಾನಾ ಮುಹಸ್ಸಂ ಖಾಸಿಮಿ , ಮುಹಮ್ಮದ್ ಸಲೀಂ ರಷಾದಿ , ಎನ್.ಯು ಅಬ್ದುಲ್ ಸಲಾಂ , ನಜ್ಮುನ್ನಿಸಾ , ಹಸೀನಾ , ಸಂಶುದ್ದೀನ್ , ಇಕ್ಬಾಲ್ ಹೊಸಂಗಡಿ ಮೊದಲಾದವರು ಮಾತನಾಡಿದರು. ಸವಾದ್ , ಅಬ್ದುಲ್ ರಶೀದ್ , ಉಸಾಮ , ಅಬ್ದುಲ್ ಲತೀಫ್ ವೇದಿಕೆಯಲ್ಲಿ ಉಪಸ್ತಿತರಿದ್ದರು. ಪಾಪ್ಯುಲರ್ ಫ್ರಂಟ್ ಜಿಲ್ಲಾಧ್ಯಕ್ಷ ಸಯ್ಯದ್ ಮೊಹಮ್ಮದ್ ರಾಫಿ ತಂಘಳ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾರ್ಯದರ್ಶಿ ಕೆ.ಕೆ ಮುಹಮ್ಮದ್ ಹನೀಫ್ ಸ್ವಾಗತಿಸಿದರು. ಮುಸ್ತಫಾ ಮಚ್ಚಂಪಾಡಿ ವಂದಿಸಿದರು.
 copy.jpg)
 copy.jpg)
 copy.jpg)
 copy.jpg)







