ಭಟ್ಕಳ : ಖ್ಯಾತ ವಿದ್ವಾಂಸ 'ಮೌಲಾನ ಬಾರಿ' ನಿಧನ

ಭಟ್ಕಳ, ಫೆ.17: ಭಟ್ಕಳದ ಖ್ಯಾತ ವಿದ್ವಾಂಸ, ಜಾಮಿಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಹಾಗೂ ಚಿನ್ನದಪಳ್ಳಿ ಜಾಮಿಯಾ ಮಸೀದಿಯ ಖತೀಬ್ ಇಮಾಮ್ ಮೌಲಾನ ಅಬ್ದುಲ್ ಬಾರಿ ನದ್ವಿ ಫರ್ಕದೆ (54) ಬುಧವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ ಎರಡು ತಿಂಗಳಿಂದ ಅನಾ ರೋಗ್ಯ ದಿಂದಿದ್ದ ಅವರು, ಇಂದು ತಮ್ಮ ಇಹಲೋಕ ಯಾತ್ರೆಯನ್ನು ತ್ಯಜಿಸಿದರು. ಇವರು ಓರ್ವ ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ದೇಶದ ಖ್ಯಾತ ಧಾರ್ಮಿಕ ಶಿಕ್ಷಣ ಸಂಸ್ಥೆಯಾಗಿರುವ ನದ್ವತುಲ್‌ಉಲೇಮಾ ಲಕ್ನ್ನೋದಲ್ಲಿ ಧಾರ್ಮಿಕ ಶಿಕ್ಷಣ ಪೂರೈಸಿದ ಇವರು, 1983ರಿಂದ ಇಲ್ಲಿನ ಜಾಮಿಯಾ ಇಸ್ಲಾಮಿಯಾ ಧಾರ್ಮಿಕ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ನೀಡುತ್ತಿದ್ದರು. ಕಳೆದ 15 ವರ್ಷಗಳಿಂದ ಜಾಮಿಯಾ ಇಸ್ಲಾಮಿಯಾ ಸಂಸ್ಥೆಯ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದ ಇವರು ಜಾಮಿಯಾ ಸಂಸ್ಥೆಯನ್ನು ದೇಶದ ಉನ್ನತ ಧಾರ್ಮಿಕ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆ ಪಾತ್ರ ವಾಗುವಂತೆ ಮಾಡಿದ್ದರು.
ಇವರು ಕಳೆದ 35 ವರ್ಷಗಳಿಂದ ಚಿನ್ನದ ಪಳ್ಳಿ (ಜಾಮಿಯಾ ಮಸೀದಿ)ಯಲ್ಲಿ ಖತೀಬ್ ಹಾಗೂ ಇಮಾಮ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಎಲ್ಲರ ಮೆಚ್ಚಿನ ಬಾರಿ ಮೌಲಾನ ಎಂದೇ ಗುರುತಿಸಿಕೊಂಡಿದ್ದರು. ಕೇವಲ ಮುಸ್ಲಿಮ್ ಸಮುದಾಯಕ್ಕೆ ಮಾತ್ರವಲ್ಲದೆ ಭಟ್ಕಳದ ಎಲ್ಲರಿಗೂ ಅತ್ಯಂತ ಚಿರಪರಿತರಾಗಿದ್ದ ಇವರ ಪ್ರತಿಯೊಂದು ಸಮುದಾಯದೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡಿದ್ದರು. ಇವರ ನಿಧನದಿಂದ ಭಟ್ಕಳವು ಓರ್ವಚಿಂತಕ, ವಾಗ್ಮಿಯನ್ನು ಕಳೆದುಕೊಂಡಂತಾಗಿದೆ.
ಕಂಬನಿ ಮಿಡಿದ ಭಟ್ಕಳ
ಬುಧವಾರ ಸಂಜೆ 5ಗಂಟೆಗೆ ಬಾರಿ ಮೌಲಾನ ನಿಧನ ವಾರ್ತೆ ತಿಳಿಯುತ್ತಿದ್ದಂತೆ ಇಲ್ಲಿನ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯು ತಂಝೀಮ್ ಕಾರ್ಯಾಲಯದಲ್ಲಿ ಸಭೆ ಸೇರಿ ಗುರುವಾರದಂದು ಭಟ್ಕಳದ ಮುಸ್ಲಿಮ್ ಸಮುದಾಯಕ್ಕೆ ಸೇರಿದ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ರಜೆ ಸಾರುವುದಾಗಿ ಘೋಷಿಸಿದರು. ಭಟ್ಕಳದ ಜನ ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ತಮ್ಮ ಎಲ್ಲರೀತಿಯ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿದರು. ತಂಡೋಪತಂಡವಾಗಿ ನೂರಾರು ಸಂಖ್ಯೆಯಲ್ಲಿಅವರ ಮನೆಗೆ ತೆರಳಿದ ಜನರು ಕುಟುಂಬದವರಿಗೆ ಸಾಂತ್ವನ ನೀಡಿದರು.
ಗುರುವಾರ ಅಂತ್ಯಸಂಸ್ಕಾರ: ಇಂದು ಬೆಳಗ್ಗೆ 10 ಗಂಟೆಗೆ ಚಿನ್ನದ ಪಳ್ಳಿಯಲ್ಲಿ ಜನಾಝ ನಮಾಝ್ ನಿರ್ವಸಿದ ಬಳಿಕ ಮಯ್ಯತ್ ಧಪನ ಮಾಡಲಾಗುವುದು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಇಂದು ಭಟ್ಕಳ ಶಾಲಾ ಕಾಲೇಜು ಬಂದ್
ಮೌಲಾನ ನಿಧನಕ್ಕಾಗಿ ಇಲ್ಲಿನ ಮುಸ್ಲಿಮ್ ಸಮುದಾಯದ ಎಲ್ಲ ಶಿಕ್ಷಣ ಸಂಸ್ಥೆಗಳು ರಜೆಯನ್ನು ನೀಡಿದ್ದು, ಅವರ ಮಯ್ಯತ್ ನಮಾಝ್‌ನಲ್ಲಿ ಪಾಲ್ಗೊಳ್ಳುವಂತೆ ಕೋರಿದ್ದಾರೆ. ಅಂಜುಮನ್ ಹಾಮಿಯೆ ಮುಸ್ಲಿಮೀನ್, ಜಾಮಿಯಾ ಇಸ್ಲಾಮಿಯಾ, ಮಜ್ಲಿಸೆ ಇಸ್ಲಾಹ್-ವ-ತಂಝೀಮ್, ಜಮಾಅತುಲ್ ಮುಸ್ಲಿಮೀನ್, ಮರ್ಕಝಿ ಖಲಿಫಾ ಜಮಾತುಲ್ ಮುಸ್ಲಿಮೀನ್, ತರಬಿಯತ್‌ಎಜುಕೇಶನ್ ಸೂಸೈಟಿ, ಜಮಾಅತೆ ಇಸ್ಲಾಮಿ ಹಿಂದ್, ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್, ಅಲಿ ಪಬ್ಲಿಕ್ ಸ್ಕೂಲ್, ಅಲಿಮಿಯಾ ಅಕಾಡೆಮಿ, ಇಸ್ಲಾಮಿಕ್ ವೆಲ್ಫೇರ್ ಸೂಸೈಟಿ, ಇದಾರೆ ಅದಬೆ ಇಸ್ಲಾಮಿ, ಭಟ್ಕಳ ಮುಸ್ಲಿಮ್ ಯೂತ್ ಫೆಡರೇಶನ್, ಸೇರಿದಂತೆ ನಗರದ ವಿವಿಧ ಸಂಘ ಸಂಸ್ಥೆಗಳು ಮೌಲಾನರ ನಿಧನಕ್ಕಾಗಿ ಸಂತಾಪ ಸೂಚಿಸಿದ್ದು, ಇವರಿಗೆ ಅಲ್ಲಾಹನು ಮಗ್ಫಿರತ್ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಕಂಬನಿ: ಶಾಸಕ ಮಾಂಕಾಳ್ ವೈದ್ಯ ಹಾಗೂ ಸೇವಾವಾಹಿನಿ ಅಧ್ಯಕ್ಷ ಸುರೇಂದ್ರ ಶಾನುಭಾಗ ಬಾರಿ ಮೌಲಾನ ನಿಧನವು ಇಲ್ಲಿನ ಎಲ್ಲ ಸಮುದಾಯಕ್ಕೆ ಆಗಿರುವ ನಷ್ಟ ಎಂದು ಬಣ್ಣಿಸಿದ್ದಾರೆ. ಕಾಂಗ್ರೆಸ್ ಮುಖಂಡ ಎಫ್.ಕೆ.ಮೊಗೇರ್, ಭಟ್ಕಳ ತಾಪಂ ಮಾಜಿ ಅಧ್ಯಕ್ಷ ಪರಮೇಶ್ವರ ದೇವಾಡಿಗ ಸೇರಿದಂತೆ ಹಲವು ಪ್ರಮುಖರು ಇವರ ನಿಧನಕ್ಕಾಗಿ ಕಂಬನಿ ಮಿಡಿದಿದ್ದಾರೆ.ಮ್ಮ ಇಹಲೋಕ ಯಾತ್ರೆಯನ್ನು ತ್ಯಜಿಸಿದರು. ಇವರು ಓರ್ವ ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ದೇಶದ ಖ್ಯಾತ ಧಾರ್ಮಿಕ ಶಿಕ್ಷಣ ಸಂಸ್ಥೆಯಾಗಿರುವ ನದ್ವತುಲ್‌ಉಲೇಮಾ ಲಕ್ನ್ನೋದಲ್ಲಿ ಧಾರ್ಮಿಕ ಶಿಕ್ಷಣ ಪೂರೈಸಿದ ಇವರು, 1983ರಿಂದ ಇಲ್ಲಿನ ಜಾಮಿಯಾ ಇಸ್ಲಾಮಿಯಾ ಧಾರ್ಮಿಕ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ನೀಡುತ್ತಿದ್ದರು. ಕಳೆದ 15 ವರ್ಷಗಳಿಂದ ಜಾಮಿಯಾ ಇಸ್ಲಾಮಿಯಾ ಸಂಸ್ಥೆಯ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದ ಇವರು ಜಾಮಿಯಾ ಸಂಸ್ಥೆಯನ್ನು ದೇಶದ ಉನ್ನತ ಧಾರ್ಮಿಕ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆ ಪಾತ್ರ ವಾಗುವಂತೆ ಮಾಡಿದ್ದರು.
ಇವರು ಕಳೆದ 35 ವರ್ಷಗಳಿಂದ ಚಿನ್ನದ ಪಳ್ಳಿ (ಜಾಮಿಯಾ ಮಸೀದಿ)ಯಲ್ಲಿ ಖತೀಬ್ ಹಾಗೂ ಇಮಾಮ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಎಲ್ಲರ ಮೆಚ್ಚಿನ ಬಾರಿ ಮೌಲಾನ ಎಂದೇ ಗುರುತಿಸಿಕೊಂಡಿದ್ದರು. ಕೇವಲ ಮುಸ್ಲಿಮ್ ಸಮುದಾಯಕ್ಕೆ ಮಾತ್ರವಲ್ಲದೆ ಭಟ್ಕಳದ ಎಲ್ಲರಿಗೂ ಅತ್ಯಂತ ಚಿರಪರಿತರಾಗಿದ್ದ ಇವರ ಪ್ರತಿಯೊಂದು ಸಮುದಾಯದೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡಿದ್ದರು. ಇವರ ನಿಧನದಿಂದ ಭಟ್ಕಳವು ಓರ್ವಚಿಂತಕ, ವಾಗ್ಮಿಯನ್ನು ಕಳೆದುಕೊಂಡಂತಾಗಿದೆ







