ಶಬರಿಮಲೆಯಲ್ಲಿ ಪ್ಲಾಸ್ಟಿಕ್ ಬಾಟ್ಲಿ ನಿಷೇಧಕ್ಕೆ ಕೇರಳ ಹೈಕೋರ್ಟ್ ಆದೇಶ

ಕೊಚ್ಚಿ, ಫೆ17: ಶಬರಿಮಲೆ ಶ್ರೀ ಅಯ್ಯಪ್ಪ ಕ್ಷೇತ್ರದ ಪರಿಸರವನ್ನು ಇನ್ನಷ್ಟು ಪರಿಸರ ಸ್ನೇಹಿಯನ್ನಾಗಿಸುವ ಉದ್ದೇಶದಿಂದ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆಯನ್ನು ನಿಷೇಧಿಸಿ ಕೇರಳ ಹೈಕೋರ್ಟ್ ಆದೇಶ ನೀಡಿದೆ.
ಶಬರಿಮಲೆ , ಪಂಪಾ, ನಿಲಾಕ್ಕಲ್ ಸೇರಿದಂತೆ ಶ್ರೀ ಕ್ಷೇತ್ರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಬಾಟ್ಲಿಯಲ್ಲಿ ನೀರು ಮಾರಾಟ ಮಾಡುವಂತಿಲ್ಲ. ಅದೇ ರೀತಿ ಇತರ ಉದ್ದೇಶಗಳಿಗಾಗಿ ಪ್ಲಾಸ್ಟಿಕ್ ಬಾಟ್ಲಿ ಅಥವಾ ಇತರ ಯಾವುದೇ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ, ಮಾರಾಟ ನಿಷೇಧಿಸಲಾಗಿದೆ.
ನ್ಯಾಯಮುರ್ತಿ ತೊಟ್ಟಾತ್ತಿಲ್ ಬಿ. ರಾಧಾಕೃಷ್ಣನ್ ಮತ್ತು ಅನುಶ್ರೀರಾಮನ್ ಅವರನ್ನೊಳಗೊಂಡ ರಾಜ್ಯ ಹೈಕೋರ್ಟ್‌ನ ನ್ಯಾಯಪೀಠ ಮಂಗಳವಾರ ಈ ಆದೇಶ ನೀಡಿದ್ದು, ಶ್ರೀ ಅಯ್ಯಪ್ಪ ಸನ್ನಿಧಾನಕ್ಕೆ ಬರುವ ಯಾತ್ರಾರ್ಥಿಗಳು "ಇರುಮುಡಿಕಟ್ಟು "ವಿನಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆಯನ್ನು ಮಾಡುವಂತಿಲ್ಲ ಎಂದು ಹೇಳಿದೆ.
Next Story





