ಬಜ್ಪೆ ವಲಯ ಕೆಎಸ್‌ಟಿಎ ವಾರ್ಷಿಕೋತ್ಸವ

ಬಜ್ಪೆೆ, ಫೆ.17: ಟೈಲರ್‌ಗಳು ತಮ್ಮ ಕೆಲಸದ ಜೊತೆಗೆ ಸಮಾಜದ ಏಳಿಗೆ ಶ್ರಮಿಸುವ ಮೂಲಕ ಜಾಗೃತಿ ಮೂಡಿಸಬೇಕು ಎಂದು ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಘಟಕದ ಪ್ರಮುಖ ಡಾ. ರಾಮಚಂದ್ರ ಭಟ್ ಹೇಳಿದ್ದಾರೆ.
ಬಜ್ಪೆ ನಾರಾಯಣಗುರು ಸಭಾಗೃಹದಲ್ಲಿ ನಡೆದ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ಮಂಗಳೂರು ಕ್ಷೇತ್ರ ಹಾಗೂ ಬಜ್ಪೆ ವಲಯದ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಸಂದರ್ಭ ಡಾ. ರಾಮಚಂದ್ರ ಭಟ್, ಡಾ. ನಾರಾಯಣ್, ರಕ್ತ ನಿಧಿಯ ಮುಖ್ಯಸ್ಥ ಡಾ. ಎಡ್ವರ್ಡ್‌ರ ನೇತೃತ್ವದಲ್ಲಿ ಆರೋಗ್ಯ ಮಾಹಿತಿ, ರಕ್ತದೊತ್ತಡ ಹಾಗೂ ಮಧುಮೇಹ ಸಂಬಂಧ ಉಚಿತ ಆರೋಗ್ಯ ತಪಾಸಣೆ ಜರಗಿತು.
ಬಜ್ಪೆ ವಲಯ ಟೈಲರ್ಸ್ ಅಸೋಸಿಯೇಶನ್ ಅಧ್ಯಕ್ಷ ಶಿವಾನಂದ್ ಅಧ್ಯಕ್ಷತೆ ವಹಿಸಿದ್ಧರು. ಕೆಎಸ್‌ಟಿಎ ರಾಜ್ಯಾಧ್ಯಕ್ಷ ವಸಂತ ಬಿ, ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿಯ ಸದಸ್ಯ ಪ್ರವೀಣ್ ಸಾಲ್ಯಾನ್, ಕೆಎಸ್‌ಟಿಎ ರಾಜ್ಯ ಸಮಿತಿ ಉಪಾಧ್ಯಕ್ಷೆ ವಿದ್ಯಾ ಶೆಟ್ಟಿ, ಜಿಲ್ಲಾಧ್ಯಕ್ಷ ಉದಯ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಶಂಕರ್, ಪದಾಧಿಕಾರಿಗಳಾದ ಜಯ ಕೋಟ್ಯಾನ್, ಸುಜಾತಾ ಜೋಗಿ, ಶೇಖರ ಪಡು, ಪುಷ್ಪಕರ್ಕೇರ, ಬಜ್ಪೆ ವಲಯದ ಮಾಜಿ ಅಧ್ಯಕ್ಷ ಜಯ ಪೂಜಾರಿ, ಹಿರಿಯರಾದ ವಿಠಲ ನಾಯಕ್, ಪ್ರಜ್ವಲ್, ಮುತಾಲಿಕ್ ಮತ್ತಿತರರು ಉಪಸ್ಥಿತರಿದ್ದರು.





