ಐಎಸ್‌ಎಫ್‌ನಿಂದ ಅನಿವಾಸಿ ಭಾರತೀಯನಿಗೆ ನೆರವು
ಮಸ್ಕತ್(ಒಮನ್), ಫೆ.17: ಅನಿವಾಸಿ ಭಾರತೀಯರು ನೆಲೆಸಿರುವ ಮಸ್ಕತ್‌ನಲ್ಲಿ ಕಂಪೆನಿಯ ಬೇಜವಾಬ್ದಾರಿಯಿಂದ ಜೈಲುಪಾಲಾದ ಉಳ್ಳಾಲದ ಮುಹ ಮ್ಮದ್ ಇಸಾಕ್ ಎಂಬವರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಇಂಡಿಯನ್ ಸೋಶಿಯಲ್ ಫೋರಂ ಸಂಸ್ಥೆಯು ನೆರವಾಗಿದೆ.
ಮುಹಮ್ಮದ್ ಇಸಾಕ್ ಕಾರ ಣಾಂತರಗಳಿಂದ ಜೈಲುಪಾಲಾಗಿದ್ದರು. ಇಸಾಕ್‌ರನ್ನು ಬಿಡುಗಡೆಗೊಳಿಸಲು ಮನೆಯವರು ಸತತ ಪ್ರಯತ್ನ ನಡೆ ಸಿದ್ದರು. 3 ತಿಂಗಳು ಜೈಲಿನಿಂದ ಹೊರ ಬರಲಾರದೆ ಮುಹಮ್ಮದ್ ಇಸಾಕ್ ಕಂಗೆಟ್ಟಿದ್ದರು.
ಈ ನಡುವೆ ಒಮನ್‌ನಲ್ಲಿ ಅನಿವಾಸಿ ಭಾರತೀಯರ ಇಂಡಿಯನ್ ಸೋಶಿಯಲ್ ಫೋರಂ ತಂಡದ ಸಕ್ರಿಯ ಆಡಳಿತ ಕಮಿಟಿಯ ಸದಸ್ಯರಾದ ನಝೀರ್ ಕೊಡಿಂಬಾಡಿ ತನ್ನ ಕಂಪೆನಿಯ ಕೆಲಸದ ನಿಮಿತ್ತ ಜೈಲಿಗೆ ಭೇಟಿ ನೀಡಿದ್ದರು. ಈ ಸಂದರ್ಭ ಮಂಗಳೂರಿನವರು ಇದೇ ಜೈಲಿನಲ್ಲಿ ಸುಮಾರು 3 ತಿಂಗಳಿಂದಲೂ ಇರುವ ಬಗ್ಗೆ ಮಾಹಿತಿ ದೊರಕಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ನಝೀರ್ ಕೊಡಿಂಬಾಡಿ ಸೋಶಿ ಯಲ್ ಫೋರಂನ ಎಲ್ಲಾ ಸದ ಸ್ಯರ ಗಮನಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿದರು.ಜೈಲಿನ ಮೇಲಧಿಕಾರಿಯ ಸಹಾಯ ಪಡೆದು ಮುಹಮ್ಮದ್ ಇಸಾಕ್ ಉಳ್ಳಾಲ್‌ರನ್ನು ಬಿಡುಗಡೆಗೊಳಿಸುವಲ್ಲಿ ಫೋರಂ ಸಫಲವಾಯಿತು.





