ಸಿರಿಯ: ಅಮೆರಿಕ ವಾಯು ದಾಳಿಗೆ 15 ನಾಗರಿಕರು ಬಲಿ
ಬೆರೂತ್, ಫೆ. 17: ಈಶಾನ್ಯ ಸಿರಿಯದ ಐಸಿಸ್ ಉಗ್ರರ ನಿಯಂತ್ರಣದಲ್ಲಿರುವ ಪಟ್ಟಣವೊಂದರ ಮೇಲೆ ಅಮೆರಿಕ ನೇತೃತ್ವದ ಮಿತ್ರ ಪಡೆಗಳು ನಡೆಸಿದ ವಾಯು ದಾಳಿಯಲ್ಲಿ ಕನಿಷ್ಠ 15 ನಾಗರಿಕರು ಮೃತಪಟ್ಟಿದ್ದಾರೆ ಎಂದು ‘ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ’ ಹೇಳಿದೆ.
‘‘ಅಲ್-ಶದಾದಿ ನಗರದ ಮೇಲೆ ಮಂಗಳವಾರ ಮಿತ್ರ ಪಡೆಗಳು ನಡೆಸಿದ ವಾಯು ದಾಳಿಯಲ್ಲಿ ಕನಿಷ್ಠ 15 ನಾಗರಿಕರು ಮೃತಪಟ್ಟಿದ್ದಾರೆ ಹಾಗೂ 20 ಮಂದಿ ಗಾಯಗೊಂಡಿದ್ದಾರೆ’’ ಎಂದು ಅದು ತಿಳಿಸಿದೆ.
ಸತ್ತವರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ಅದು ಹೇಳಿದೆ.
Next Story





