ಫಿಲೋಮಿನಾ ಸಾಧನೆಗೈದ ಸಿಬ್ಬಂದಿಗೆ ಸನ್ಮಾನ
ಪುತ್ತೂರು, ಫೆ.17: ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ರ್ಯಾಂಕ್ ವಿಜೇತರು ಮತ್ತು ನೆಟ್-ಕೆಸ್ಲೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಉಪನ್ಯಾಸ ವೃಂದದ ವರನ್ನು ಗುರುತಿಸಿ, ಸನ್ಮಾನಿಸುವ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ರೆ. ಡಾ. ಆ್ಯಂಟನಿ ಪ್ರಕಾಶ್‌ಮೊಂತೆರೊ ಶಿಕ್ಷಣ ಸಂಸ್ಥೆಯ ಬೆಳವಣಿಗೆಯಲ್ಲಿ ಪ್ರತಿಯೊಬ್ಬ ಸಿಬ್ಬಂದಿಯೂ ಪಾಲುದಾರನಾಗಿರುತ್ತಾನೆ. ಶಿಸ್ತು, ಬದ್ಧತೆ ಮತ್ತು ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು. ಪ್ರಾಚಾರ್ಯ ಪ್ರೊ. ಲಿಯೊ ನೊರೊನ್ಹ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಕಠಿಣ ಪರಿಶ್ರಮ ದಿಂದ ಅಧ್ಯಯನ ಮಾಡಿದಾಗ ಸಾಧನೆ ಸುಲಭ ಮತ್ತು ಭವಿಷ್ಯದಲ್ಲಿ ಸಾರ್ಥಕತೆಯನ್ನು ಹೊಂದಬಹುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಮಲಾಕ್ಷಿ ಕೆ., ಪ್ರಸಾದ್ ಎಚ್.ಎಮ್., ಮಹಿತಾ ಕುಮಾರಿ ಎಮ್., ಸುದೀಪ್ ವಾಸ್ ಮತ್ತು ಮಾರಿಯೆಟ್ ಶೆರ್ಲಿ ಡಿಸೋಜ ಇವರನ್ನು ಸನ್ಮಾನಿಸಲಾಯಿತು.





