ವಿಕಾಸಸೌಧದಲ್ಲಿ ಸಚಿವಾಲಯ ನೌಕರರ ಪ್ರತಿಭಟನೆ
ಕಳಪೆ ಗುಣಮಟ್ಟದ ತಿಂಡಿ ಪೂರೈಕೆ ಆರೋಪ
ಬೆಂಗಳೂರು, ಫೆ.17: ವಿಕಾಸಸೌಧದ ಒಂದನೆ ಮಹಡಿಯಲ್ಲಿರುವ ಕ್ಯಾಂಟೀನ್‌ನಲ್ಲಿ ಕಳಪೆ ಗುಣಮಟ್ಟದ ತಿಂಡಿ ಹಾಗೂ ಊಟವನ್ನು ನೀಡಲಾಗುತ್ತಿದೆ ಎಂದು ಆರೋಪಿಸಿ ಸಚಿವಾಲಯದ ನೌಕರರು ಬುಧವಾರ ಬೆಳಗ್ಗೆ ಕ್ಯಾಂಟೀನ್ ಮುಚ್ಚಿ ಪ್ರತಿಭಟನೆ ನಡೆಸಿದರು.
ವಿಕಾಸಸೌಧದಲ್ಲಿರುವ ಕ್ಯಾಂಟಿೀನ್‌ನಲ್ಲಿ ಸ್ವಚ್ಛತೆಗೆ ಆದ್ಯತೆ ನೀಡ ಲಾಗುತ್ತಿಲ್ಲ. ಆಹಾರ ಪದಾರ್ಥಗಳಲ್ಲಿ ಕ್ರಿಮಿ ಕೀಟಗಳು, ತಾಮ್ರದ ಉಂಗುರ ಸಿಕ್ಕಂತಹ ಉದಾಹರಣೆಗಳು ಕಣ್ಣಮುಂದಿವೆ. ಹಲವಾರು ಬಾರಿ ಈ ಸಂಬಂಧ ಕ್ಯಾಂಟಿೀನ್ ವ್ಯವಸ್ಥಾಪಕರ ಗಮನ ಸೆಳೆದಿದ್ದರೂ ಯಾವುದೆೀ ಪ್ರಯೋಜನವಾಗಿಲ್ಲ ಎಂದು ರಾಜ್ಯ ಸಚಿವಾಲಯ ನೌಕರರ ಸಂಘದ ಕಾರ್ಯಕಾರಿ ಸದಸ್ಯ ಗುರುಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಗುಣಮಟ್ಟ ಹಾಗೂ ರುಚಿಯಾದ ಆಹಾರವನ್ನು ಪೂರೈಸಲು ಕ್ಯಾಂಟೀನ್ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಕ್ಯಾಂಟೀನ್ ನಡೆಸಲು ಒದಗಿಸಲಾಗಿರುವ ಗುತ್ತಿಗೆಯನ್ನು ರದ್ದುಪಡಿಸುವಂತೆ ಸರಕಾರದ ಗಮನ ಸೆಳೆಯುವುದಾಗಿ ಪ್ರತಿಭಟನೆ ನಡೆಸಿದ ಸಿಬ್ಬಂದಿ ಎಚ್ಚರಿಕೆ ನೀಡಿದರು.
Next Story





