ಪ್ರೊ ಕಬಡ್ಡಿ ಲೀಗ್: ಬೆಂಗಳೂರಿಗೆ ಮತ್ತೊಂದು ಸೋಲು
ಪಾಟ್ನಾ,ಫೆ.18: ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಬುಲ್ಸ್ ತಂಡದ ಸೋಲಿನ ಸರಪಳಿ ಮುಂದುವರಿದಿದೆ. ಮತ್ತೊಂದೆಡೆ ಪಾಟ್ನಾದ ಗೆಲುವಿನ ಓಟ ಅಬಾಧಿತವಾಗಿದೆ.
ಗುರುವಾರ ನಡೆದ 32ನೆ ಪಂದ್ಯದಲ್ಲಿ ಡೆಲ್ಲಿ ತಂಡ ಬೆಂಗಳೂರು ತಂಡವನ್ನು 35-21 ಅಂತರದಿಂದ ಮಣಿಸಿತು. 33ನೆ ಪಂದ್ಯದಲ್ಲಿ ಅಂಕಪಟ್ಟಿಯ ಅಗ್ರ ಸ್ಥಾನಿ ಪಾಟ್ನಾ ಹಾಗೂ ಪುಣೇರಿ ಪಲ್ಟನ್ 28-28 ಅಂಕ ಗಳಿಸಿ ಪಂದ್ಯವನ್ನು ಡ್ರಾಗೊಳಿಸಿದವು.
ಪಂದ್ಯ ಡ್ರಾಗೊಂಡ ಹಿನ್ನೆಲೆಯಲ್ಲಿ ಪಾಟ್ನಾ 10ನೆ ಪಂದ್ಯದಲ್ಲಿ 46 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿ ಮುಂದುವರಿದಿದೆ. ಪಾಟ್ನಾ 8 ಪಂದ್ಯಗಳಲ್ಲಿ ಜಯ, 2ರಲ್ಲಿ ಡ್ರಾ ಸಾಧಿಸಿದೆ.
Next Story





