ಕಿವೀಸ್ ವಿರುದ್ಧ ಎರಡನೆ ಟೆಸ್ಟ್: ಸಿಡ್ಲ್ ಅಲಭ್ಯ
ಮೆಲ್ಬೋರ್ನ್, ಫೆ.18: ಆಸ್ಟ್ರೇಲಿಯದ ವೇಗದ ಬೌಲರ್ ಪೀಟರ್ ಸಿಡ್ಲ್ ಬೆನ್ನುನೋವಿನ ಕಾರಣದಿಂದ ನ್ಯೂಝಿಲೆಂಡ್ ವಿರುದ್ಧದ ಎರಡನೆ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ.
ವೆಲ್ಲಿಂಗ್ಟನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನ ವೇಳೆ ಸಿಡ್ಲ್‌ಗೆ ಬೆನ್ನುನೋವು ಕಾಣಿಸಿಕೊಂಡಿತ್ತು. ಅವರು ಇದೀಗ ಟೆಸ್ಟ್ ಆಡುವಷ್ಟು ಚೇತರಿಸಿಕೊಂಡಿಲ್ಲ ಎಂದು ಟೀಮ್ ಫಿಸಿಯೋಥೆರಪಿಸ್ಟ್ ಡೇವಿಡ್ ಬೀಕ್ಲೆ ತಿಳಿಸಿದ್ದಾರೆ.
ಸಿಡ್ಲ್ ನ್ಯೂಝಿಲೆಂಡ್ ವಿರುದ್ಧದ ಪ್ರಥಮ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 37 ರನ್‌ಗೆ 3 ವಿಕೆಟ್‌ಗಳನ್ನು ಕಬಳಿಸಿದ್ದರು. ಎರಡನೆ ಇನಿಂಗ್ಸ್‌ನಲ್ಲಿ ಕೇವಲ 8 ಓವರ್ ಬೌಲಿಂಗ್ ಮಾಡಿದ್ದರು.
ಶನಿವಾರದಿಂದ ಕ್ರೈಸ್ಟ್‌ಚರ್ಚ್‌ನಲ್ಲಿ ಆರಂಭವಾಗಲಿರುವ ಎರಡನೆ ಟೆಸ್ಟ್‌ನಲ್ಲಿ ಸಿಡ್ಲ್ ಬದಲಿಗೆ ಜೇಮ್ಸ್ ಪ್ಯಾಟಿನ್ಸನ್ ಆಡುವ ಸಾಧ್ಯತೆಯಿದೆ.
Next Story





