Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಕೆಲವು ಜನಪರ ಹೋರಾಟಗಳು

ಕೆಲವು ಜನಪರ ಹೋರಾಟಗಳು

ಡಾ. ಆರ್ಕೆೆ, ಮಣಿಪಾಲಡಾ. ಆರ್ಕೆೆ, ಮಣಿಪಾಲ18 Feb 2016 11:58 PM IST
share
ಕೆಲವು ಜನಪರ ಹೋರಾಟಗಳು

1990ರ ಕೊನೆಯಲ್ಲಿ ಪ್ರಗತಿಪರ ಲೇಖಕರು ಮತ್ತು ಎಡಪಂಥೀಯ ಕಾರ್ಮಿಕ ಸಂಘಗಳ ನೇತೃತ್ವದಲ್ಲಿ ‘ಕೋಮುವಾದ ವಿರೋಧಿ ವೇದಿಕೆ’ ಹುಟ್ಟಿಕೊಂಡಿತು. ಕಾರ್ಮಿಕ ಮುಖಂಡರಾದ ವಿಶ್ವನಾಥ ರೈ, ವಾದಿರಾಜ ಬುದ್ಯ, ಎ.ಎಸ್. ಆಚಾರ್ಯ, ಸಾಹಿತಿಗಳಾದ ಬೊಳುವಾರು ಮಹಮದ್ ಕುಞಿ, ಡಿಅ.ನಿ. ಮುರಾರಿ ಬಲ್ಲಾಳ, ಜಿ. ರಾಜಶೇಖರ್ ಮುಂತಾದವರು ಈ ವೇದಿಕೆಯ ಲ್ಲಿದ್ದರು. ಮುಲಾಯಂ ಸಿಂಗ್ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕಾಲ. ಬಾಬರಿ ಮಸೀದಿಯ ನಾಶಮಾಡುವ ಉದ್ದೇಶದಿಂದ ಕೇಸರಿ ಪರಿವಾರ ಕರಸೇವೆ ಯನ್ನು ಹಮ್ಮಿಕೊಂಡಿತ್ತು. ಇದನ್ನು ಪ್ರತಿಭಟಿಸಿ, ಕೋಮು ಸಾಮರಸ್ಯ ಕಾಪಾ ಡುವ ಉದ್ದೇಶದಿಂದ ನಾವು ಉಡುಪಿಯ ರಥಬೀಧಿಯಲ್ಲಿ ಸಾರ್ವಜನಿಕ ಸಭೆ ನಡೆಸಿದೆವು. ಕಾರ್ಯಕ್ರಮದ ಅಧ್ಯಕ್ಷ ರಂಗಕರ್ಮಿ, ಸಾಹಿತಿ ಕೆ.ವಿ. ಸುಬ್ಬಣ್ಣ, ಬನ್ನಂಜೆ ರಾಮಾಚಾರ್ಯ, ಕೂರಾಡಿ ಸದಾಶಿವ ಕಲ್ಕೂರ ಮುಂತಾದವರು ವೇದಿಕೆಯಲ್ಲಿದ್ದರು. ತಾವಾಗಿ ಕೋಮು ಸಂಘರ್ಷದ ವಿರುದ್ಧ ಕಾರ್ಯಾಚರಣೆ ಮಾಡಬೇಕಿದ್ದ ಕಾಂಗ್ರೆಸ್ಸಿಗರು ಮೂಕ ಪ್ರೇಕ್ಷಕರಾಗಿದ್ದರು. ಆದರೂ, ಕಾಂಗೈ ಕಾರ್ಯದರ್ಶಿ ಆಸ್ಕರ್ ಫೆರ್ನಾಂಡಿಸ್ ಸಭಿಕರ ನಡುವೆ ವಿರಾಜಮಾನರಾ ಗಿದ್ದರು. ಯು.ಆರ್. ಜಯವಂತ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಿಸಿದರು.

ಆಗ ಉಡುಪಿ ನಗರಸಭೆ ಬಿಜೆಪಿ ಆಡಳಿತದಲ್ಲಿತ್ತು. ವೇದಿಕೆಯ ನೂರಡಿ ಅಂತರದಲ್ಲಿ ಎರಡು ದಿನ ಮೊದಲಷ್ಟೇ ಜಲ್ಲಿಕಲ್ಲು ಬಂದು ಬಿದ್ದಿತ್ತು. ಕಾರ್ಯಕ್ರಮದ ಕೊನೆಯಲ್ಲಿ ಸುಬ್ಬಣ್ಣ ಅಧ್ಯಕ್ಷ ಭಾಷಣ ಮಾಡುವಷ್ಟರಲ್ಲಿ 400 ಜನ ಕೇಸರಿಗಣ ಮಂಗಳೂರಿಂದ ಬಂದು ‘ಹಿಂದೂ ವಿರೋಧಿಗಳಿಗೆ ಧಿಕ್ಕಾರ’ ಎಂದು ಘೋಷಿಸುತ್ತ ವೇದಿಕೆಯ ಬಳಿ ನುಗ್ಗಿತು. ಆ ವೇಳೆ ಸುಬ್ಬಣ್ಣ ‘ನಾನು ಹಿಂದೂ; ನೀವಲ್ಲ. ನಾವು ಹೇಳಬೇಕಾದುದನ್ನು ಹೇಳಿಯೇ ಸಿದ್ಧ’ ಎಂದು ಗುಡುಗಿದರು. ಪೊಲೀಸರ ಮಧ್ಯಪ್ರವೇಶದ ನಂತರ ಕೇಸರಿಗಣ ಪೇಜಾವರ ಮಠದ ಒಳಗೆ ಪ್ರವೇಶಿಸಿದ್ದು ನನಗಂತೂ ಆಕಸ್ಮಿಕವೆನಿಸಲಿಲ್ಲ.
6.12.1992. ಬಾಬರಿ ಮಸೀದಿ ನಾಶಮಾಡಲು ಎಲ್ಲಾ ಸಿದ್ಧತೆ ನಡೆಸಿತ್ತು ಸಂಘ ಪರಿವಾರ. 1990ರಲ್ಲಿ ಕರಸೇವಕರನ್ನು ಮಸೀದಿ ಬಳಿ ನುಗ್ಗದಂತೆ ಮುಲಾಯಂ ಸರಕಾರ ಭಾರೀ ಎಚ್ಚರವಹಿಸಿ ಭದ್ರತೆಯ ಕ್ರಮವನ್ನು ಚೆನ್ನಾಗಿಯೇ ಮಾಡಿತ್ತು. ಆದರೆ, 1992ರಲ್ಲಿ ಪಿ.ವಿ. ನರಸಿಂಹ ರಾವ್ ಪ್ರಧಾನಮಂತ್ರಿಯಾಗಿದ್ದು, ಮಸೀದಿ ನಾಶವಾಗದಂತೆ ಸೂಕ್ತಕ್ರಮ ಕೈಗೊಳ್ಳಲಿಲ್ಲ. ಪ್ರಧಾನಿಯ ಮನಸ್ಸಿನಲ್ಲಿದ್ದುದು ಇಷ್ಟೇ: ಕರಸೇವಕರು ಬಾಬರಿಮಸೀದಿ ನಾಶಮಾಡಿದರೆ ಅವರೇ ಕೆಟ್ಟವರೆನಿಸಿಕೊಳ್ಳುತ್ತಾರೆ. ಮುಂದಿನ ಚುನಾವಣೆಯಲ್ಲಿ ಇದರಿಂದ ಕಾಂಗ್ರೆಸ್ಸಿಗೆ ಪ್ರಯೋಜನವಾಗುತ್ತದೆ ಎಂಬುದು. ಆಗಿನ ಮಹಾಲೆಕ್ಕ ಪರಿಶೋಧಕರು ತಾನು ದೈವಭಕ್ತನಾಗಿದ್ದರೂ ಬಾಬರಿ ಮಸೀದಿಯ ನಾಶದ ಮೂಲಕ ದೇಶದಲ್ಲಿ ನೂರಾರು ವರ್ಷ ಕೋಮು ಹಿಂಸೆ ಅನುಸ್ಯೂತವಾಗಿ ನಡೆಯಲಿಕ್ಕಿದೆ; ಕೇಂದ್ರ ಸರಕಾರ ಮಧ್ಯಪ್ರವೇಶ ಮಾಡದಿದ್ದಲ್ಲಿ ದೇಶಕ್ಕೆ ಭಾರೀ ಅನಾಹುತ ಕಾದಿದೆ ಎಂದು ಮುನ್ನೆಚ್ಚರಿಕೆ ನೀಡಿದ್ದರು. ಆಗ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಯಾಗಿದ್ದ ವೆಂಕಟಾಚಲಯ್ಯ, ಕರಸೇವಕರಿಗೆ ಸೂಕ್ತ ಶೌಚ ವ್ಯವಸ್ಥೆಯಾಗಿಲ್ಲ ಎಂದು ಆಕ್ಷೇಪಿಸಿದ್ದರು. ವಾಜಪೇಯಿ ಪ್ರಧಾನಿಯಾಗಿದ್ದ ವೇಳೆ ಸಂವಿಧಾನ ತಿದ್ದುಪಡಿಯೋಜನೆಗೆ ಅಧ್ಯಕ್ಷರಾಗಿ ನೇಮಕಗೊಂಡವರು ಇವರೇ ಎಂಬುದನ್ನು ನಾವು ಮರೆಯುವಂತಿಲ್ಲ.
6.12.1992. ಅಂಬೇಡ್ಕರ್ ಪರಿನಿರ್ವಾಣ ದಿನ. ಬಾಬರಿಮಸೀದಿ ನಾಶಮಾಡಲು ಕೇಸರಿಗಳು ಇದೇ ದಿನವನ್ನು ಯಾಕೆ ಆರಿಸಿಕೊಂಡರು? ಈ ದಿನವನ್ನು ಅವರು ‘ಕ್ರಾಂತಿ ದಿವಸ’ ಎಂದೇ ಕರೆದರು. ಹಿಂದೂ ಧರ್ಮದ ಕೋಶವನ್ನು ಸಿದ್ಧಪಡಿಸಬೇಕೆಂದಿದ್ದ ಕೇಸರಿಗಳು ಕೋಶದ ಮೊದಲ ನಮೂದು ‘ಅಯೋಧ್ಯೆ’ ಎಂದು ಘೋಷಿಸಿದ್ದರು. ಅದೇ ವೇಳೆ ನಾನು ಮುಂಬೈಯ ಕನ್ನಡ ದೈನಿಕದಲ್ಲಿ ಅಂಕಣ ಪ್ರಾರಂಭಿಸಿದೆ. ಮೊದಲ ಅಂಕಣದ ಶೀರ್ಷಿಕೆ ‘ಅನ್ನವೋ.....? ಅಯೋಧ್ಯೆಯೋ? ಏಕೆಂದರೆ, ಅಕಾರಾದಿ ನಿಯಮಾನುಸಾರ ಅಯೋಧ್ಯೆಗಿಂತ ಅನ್ನವೇ ಮೊದಲು ಬರಬೇಕು. ಅಲ್ಲಿದೆ, ಭಾರತೀಯ ದರ್ಶನಶಾಸ್ತ್ರ ಪ್ರಕಾರ ‘ಅನ್ನ’ ಕ್ಕೆ ಭೌತಿಕ ಮತ್ತು ಆಧ್ಯಾತ್ಮಿಕವಾಗಿ ಹಲವಾರು ಅರ್ಥದ ಆಯಾಮಗಳಿವೆ.
ಬಾಬರಿ ಮಸೀದಿಯ ದೊಡ್ಡ ಗುಮ್ಮಟವನ್ನು 4:25ಕ್ಕೆ ಸರಿಯಾಗಿ ಕೆಡಹಲಾಯಿತು. ಉ.ಪ್ರ.ದ ಮುಖ್ಯಮಂತ್ರಿ ಕಲ್ಯಾಣ್‌ಸಿಂಗ ಆ ‘ದಿವ್ಯಮುಹೂರ್ತ’ಕ್ಕಾಗಿ ಕಾದಿದ್ದರು; ಕೂಡಲೇ ರಾಜೀನಾಮೆ ನೀಡಿದರು.
ಆಗ ಕರ್ನಾಟಕದ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಹಿಂಸೆಯಾಗುವ ಆತಂಕದಿಂದ ಶಾಲೆಕಾಲೇಜುಗಳಿಗೆ ಎರಡು ವಾರ ರಜೆ ಘೋಷಿಸಿದರು. ಮಹಾವೌನಿಯಾಗಿದ್ದ ಪ್ರಧಾನಿ ನರಸಿಂಹರಾಯರು ಒಂದು ವಾರದ ನಂತರ ಕನ್ಯಾಕುಮಾರಿಯಲ್ಲಿ ದಾಲ್ಮಿಯಾ ಪ್ರಾಯೋಜಿತ ವಿವೇಕಾನಂದರ ಕುರಿತಾದ ಗ್ರಂಥದ ಬಿಡುಗಡೆ ಮಾಡಿ ಸಂತರಂತೆ ಮಾತಾಡಿದರು. ಬಾಬರಿಮಸೀದಿ ನಾಶದ ಪರಿಣಾಮದ ಬಗ್ಗೆ ಚಿಂತಿಸಿದ ನಾನು ಸಾಮಾಜಿಕ ಕಾರ್ಯಕರ್ತರನ್ನೂ, ಕಾಂಗ್ರೆಸ್ ನಾಯಕರನ್ನೂ ಪ್ರತಿಭಟನಾ ಕಾರ್ಯಕ್ರಮ ನಡೆಸಲು ಉದ್ದೇಶಿಸಿ ತರಾಟೆಗೆ ತೆಗೆದುಕೊಂಡೆ. ನಿಶ್ಚೇಷ್ಟಿತರೂ ಅಪ್ರತಿಭರೂ ಆಗಿದ್ದ ಅವರಿಂದ ಏನೂ ನಿರೀಕ್ಷಿಸುವಂತಿರಲಿಲ್ಲ. ಕೊನೆಗೆ ಮಂಗಳೂರಿನ ಎಡಪಂಥೀಯ ಪ್ರಜ್ಞಾವಂತ ಕಾರ್ಯಕರ್ತರನ್ನೂ ಸಂಘಟನಾಶೀಲರನ್ನೂ ಚುಚ್ಚಿ ಒಂದು ಬೃಹತ್ ಕೋಮು ವೈಷಮ್ಯ ವಿರೋಧಿ ಕಾರ್ಯಕ್ರಮ ಮಾಡಲು ಕರೆಯಿತ್ತೆ. ನಾನು ಯಾವುದೇ ರಾಜಕೀಯ ಪಕ್ಷದ ಸದಸ್ಯನಾಗಿರಲಿಲ್ಲ. ಹಾಗಾಗಿ, ಸಿದ್ಧತಾ ಸಮಾರಂಭದ ಅಧ್ಯಕ್ಷತೆಯ ಜವಾಬ್ದಾರಿ ಹೊರಬೇಕಾಯಿತು. ನನಗೆ ಸಂಕೋಚವಾಯಿತು. ಏಕೆಂದರೆ, ಸಭೆಯಲ್ಲಿ ಹಾಜರಿದ್ದವರಲ್ಲಿ ಐಕಳ ಸಂಜೀವನಾಥ ಶೆಟ್ಟರು, ಅವರಂಥ ಇನ್ನೆಷ್ಟೋ ಹಿರಿಯರು, ಹೋರಾಟಗಾರರು ಭಾಗಿಗಳಾಗಿದ್ದರು. 30-1-1993ರಂದು ಬೃಹತ್ ಪ್ರತಿಭಟನಾ ರ್ಯಾಲಿ ಬಾವುಟಗುಡ್ಡೆಯಿಂದ ಪ್ರಾರಂಭವಾಗಿ ನೆಹರೂ ಮೈದಾನದವರೆಗೆ ಸಾಗಿ, ಅಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಈ ಕಾರ್ಯಕ್ರಮಕ್ಕೆ ಮೊದಲು ನನ್ನ ಮೂರು ಕಿರುಹೊತ್ತಿಗೆಗಳು- ಕೋಮುವಾದ: ಸ್ವರೂಪ-ಸಮಸ್ಯೆ, ಸಂಘರ್ಷವೋ ಸೌಹಾರ್ದವೋ ಮತ್ತು ಜಾತಿ, ರಾಜಕೀಯ ಪಕ್ಷಗಳು ಮತ್ತು ಕೋಮುವಾದ-ಪ್ರಕಟವಾಗಿ ಜನಜಾಗೃತಿಗೆ ಪೂರಕವಾದ ಕೆಲಸ ಮಾಡುವಂತಾಯಿತು.
ಬಾಬರಿಮಸೀದಿ ಬೀಳಿಸುವ ಮಹತ್ಕಾರ್ಯದಲ್ಲಿ ರಾಷ್ಟ್ರೀಯ ವಿಹಿಂಪ ಉಪಾಧ್ಯಕ್ಷರಾದ ಪೇಜಾವರ ಶ್ರೀ ಅವರದ್ದೂ ಪಾಲಿತ್ತು. 1990ರಲ್ಲಿ ‘ತರಂಗ’ದಲ್ಲಿ ಮಸೀದಿ ನಾಶ ಮಾಡದೆ ರಾಮ ಮಂದಿರ ನಿರ್ಮಾಣ ಮಾಡಬೇಕೆಂದು ಅವರು ಅಭಿಪ್ರಾಯಪಟ್ಟಿದ್ದರು. ಅವರ ಆ ನಿಲುವಿಗಾಗಿ ನಾನು ದೂರವಾಣಿ ಮೂಲಕ ಅಭಿನಂದಿಸಿದ್ದಲ್ಲದೆ, ನೀವು ಕೊನೆಯವರೆಗೂ ಈ ನಿಲುವಿಗೆ ಬದ್ಧರಾಗಿ ಉಳಿದರೆ ಸಂತೋಷ ಅಂದಿದ್ದೆ. ‘ನೋಡೋಣ’ ಅಂದಿದ್ದರು, ಅವರು. ಆದರೆ, ಬಾಬರಿಧ್ವಂಸದ ನಂತರ ಬೆಂಗಳೂರಲ್ಲಿ, ಮಸೀದಿ ನಾಶ ಮಾಡಿದಾಗ ಅಡಿಯಲ್ಲಿ ರಾಮ, ಸೀತಾ, ಲಕ್ಷ್ಮಣರ ಮತ್ತು ಗಣೇಶನ ವಿಗ್ರಹ ಸಿಕ್ಕಿತ್ತು ಎಂದು ಹೇಳಿದರು. ಅವರ ನಿಜ ಬಣ್ಣ ತಿಳಿದಿದ್ದು, ಮೂರು ಬಾರಿ ಅದನ್ನು ಬಯಲು ಮಾಡಿದ್ದ ನಾನು, ಉಡುಪಿಯ ಮಠಕ್ಕೆ ಹಿಂದಿರುಗುತ್ತಲೇ ದೂರವಾಣಿ ಮೂಲಕ ಸಂಪರ್ಕಿಸಿದೆ. ‘ನೀವು ಮಾತ್ರ ಮಸೀದಿ ನಾಶ ಮಾಡುವಾಗ ಪಾಯದಲ್ಲಿ ವಿಗ್ರಹಗಳು ಸಿಕ್ಕಿತೆನ್ನುತ್ತೀರಿ. ಬೇರೆ ಯಾರೂ ಹೇಳಿಲ್ಲ. ಆ ವಿಗ್ರಹಗಳು ಎಲ್ಲಿ ಹೋದವು? ಎಂದು ಪ್ರಶ್ನಿಸಿದೆ. ಸಿಡಿಮಿಡಿಗೊಂಡ ಸ್ವಾಮಿಜಿ ‘ಅವುಗಳನ್ನು ರಾಮ ಮಂದಿರದ ಅಡಿಪಾಯಕ್ಕೆ ಹಾಕಲಾಗಿದೆ’ ಎಂದರು. ದೇವಾಲಯದ ಪಂಚಾಂಗದಲ್ಲಿ ವಿಗ್ರಹಗಳನ್ನು ಹಾಕುವುದು ವಾಸ್ತುಶಾಸ್ತ್ರ ಪ್ರಕಾರ ಸರಿಯಾದುದೇ? ಎಂದುದಕ್ಕೆ ‘ಬಾಬರನ ಹತ್ತಿರ ಕೇಳಿ’ ಎಂದರು. 28-3-1993ರ ‘ಕೆಂಬಾವುಟ’ ವಾರ ಪತ್ರಿಕೆಯ ಮುಖಪುಟದಲ್ಲಿ ಈ ದೂರವಾಣಿ ಸಂದರ್ಶನದ ಪೂರ್ಣಪಾಠ ಪ್ರಕಟವಾಯಿತು. ಈ ಘಟನೆಯ ಮೊದಲೇ ಈ ಸ್ವಾಮಿ ಪ್ರಚಾರಪ್ರಿಯ, ಮನಸ್ಸಾಕ್ಷಿ ಇಲ್ಲದ, ಆಷಾಢಭೂತಿ ಎಂಬುದು ಮನವರಿಕೆಯಾಗಿತ್ತು. (ಹೆಚ್ಚಿನ ವಿವರಕ್ಕೆ ‘ಮುಂಗಾರು’ ಸ್ವಾತಂತ್ರ ವಿಶೇಷಾಂಕ (1985) ಮತ್ತು ‘ಕೆಂಬಾವುಟ’ ಸ್ವಾತಂತ್ರ ವಿಶೇಷಾಂಕ (2000)ವನ್ನು ಪರಿಶೀಲಿಸಬಹುದು). ಏಕೆಂದರೆ, ತಾನೇ ಗೆಳೆಯರೊಬ್ಬರನ್ನು ಕಳಿಸಿ 1985ರಲ್ಲಿ ನನ್ನೊಂದಿಗೆ ಸಂದರ್ಶನ ನಡೆಸಿದ ಈ ಸ್ವಾಮಿ, ಸಂದರ್ಶನದ ಧ್ವನಿಮುದ್ರಿಕೆ ಕೊಡಿ ಎಂದು ಹೇಳುತ್ತಾರೆಂದರೆ ಇನ್ನೇನು ಹೇಳಬಹುದು?
ಜಯಪ್ರಕಾಶ್ ಹೆಗ್ಡೆ ರಾಜ್ಯ ಸಚಿವರಾಗಿದ್ದ ಕಾಲ. ಬ್ರಹ್ಮಾವರದ ಎಸ್.ಎಂ.ಎಸ್.ಪ.ಪೂ. ಕಾಲೇಜಿನ ಬ್ರಾಹ್ಮಣ ಪ್ರಾಂಶುಪಾಲರೊಬ್ಬರು ಉಪನ್ಯಾಸಕರು ಮತ್ತು ಆಡಳಿತದೊಂದಿಗೆ ಘರ್ಷಣೆ ನಡೆಸುತ್ತಾ ಹೋಗಿ ಕೊನೆಗೆ ರಾಜೀನಾಮೆಯ ನಾಟಕವಾಡಿದರು. ಸಂಜೆಯಾಗುತ್ತಲೇ ಸಂಘ ಪರಿವಾರ ಪ್ರಾಂಶುಪಾಲರ ಪರವಾಗಿ ಘೋಷಣೆ ಮಾಡುವುದರೊಂದಿಗೆ ಆಡಳಿತದ ವಿರುದ್ಧ ಆಕ್ರೋಶವೆಬ್ಬಿಸಿತು. ಸಂಘ ಪರಿವಾರ ಹೀಗೆಲ್ಲಾ ರಣನೀತಿ ರೂಪಿಸುತ್ತದೆಂಬುದು ನನಗೆ ಚೂಲಮೂಲ ಗೊತ್ತಿದೆ. ಸಿರಿಯನ್ ಕ್ರಿಶ್ಚಿಯನ್‌ಗಳ ಆಡಳಿತದ ಅನುದಾನಿತ ಮತ್ತು ಪ್ರತಿಷ್ಠಿತ ಹಳೆಯ ಕಾಲೇಜಿದು. ಸಂಘ ಪರಿವಾರ ಈ ಪ್ರಕರಣದಲ್ಲಿ ಮತೀಯವಾಗಿ ಘರ್ಷಣೆಗಿಳಿದಿತ್ತು. ಮರುದಿನ ಮುಂಜಾನೆ ಮಣಿಪಾಲದ ನನ್ನ ಮನೆಗೆ ಉಪನ್ಯಾಸಕರು ಮತ್ತು ಆಡಳಿತ ಮಂಡಳಿಯವರು ಧಾವಿಸಿ ನನ್ನ ಮಧ್ಯಪ್ರವೇಶವನ್ನು ಕೋರಿದರು. (ಆಗ ನಾನು ಅವಿಭಜಿತ ದಕ ಜಿಲ್ಲಾ ಅನುದಾನಿತ ಪ.ಪೂ. ಕಾಲೇಜು ಉಪನ್ಯಾಸಕರ ಸಂಘದ ಸಂಘಟನಾ ಕಾರ್ಯದರ್ಶಿ ಮತ್ತು ದೂರು ವಿಭಾಗದ ಸಂಚಾಲಕನಾಗಿದ್ದೆ.) ಅವರನ್ನು ಸಮಾಧಾನ ಮಾಡಿ ಕಳುಹಿಸಿದೆ. ನಂತರ ಸಂಘದ ಅಧ್ಯಕ್ಷರೊಂದಿಗೆ ಜ್ಞಾನವಸಂತರ ಮೂಲಕ ಸಚಿವ ಹೆಗ್ಡೆ ಅವರನ್ನು ಭೇಟಿ ಮಾಡಿ ಮನವಿ ನೀಡಿದೆ. ಹೆಗ್ಡೆ ಅವರಿಗೂ ಇದು ನಾಜೂಕಿನ ಪ್ರಶ್ನೆಯಾಗಿತ್ತು. ನಂತರ ಉಪನ್ಯಾಸಕರ ಜೊತೆ ಚರ್ಚಿಸಿ ಸಮಸ್ಯೆಯ ಹಿನ್ನೆಲೆ ಮತ್ತು ಪರಿಹಾರದ ಮಾರ್ಗಗಳನ್ನು ಸೂಚಿಸಿ ಪತ್ರಿಕಾ ಹೇಳಿಕೆ ಸಿದ್ಧಪಡಿಸಿ ‘ಮುಂಗಾರು’ ದೈನಿಕಕ್ಕೆ ತಲುಪಿಸುವ ವ್ಯವಸ್ಥೆ ಮಾಡಿದೆ. ಸಮಸ್ಯೆಯ ನೈಜ ಚಿತ್ರ ಅನಾವರಣವಾದಂತಾಯಿತು; ಕಾಲೇಜಿನ ಸಮಸ್ಯೆ ಇತ್ಯರ್ಥವಾಯಿತು.

share
ಡಾ. ಆರ್ಕೆೆ, ಮಣಿಪಾಲ
ಡಾ. ಆರ್ಕೆೆ, ಮಣಿಪಾಲ
Next Story
X