ಕನ್ನೈಯ ಕುಮಾರ್ ಮೇಲೆ ಹಲ್ಲೆ ನಡೆದಿರುವುದು ವೈದ್ಯಕೀಯ ವರದಿಯಿಂದ ಸ್ಪಷ್ಟ

ಹೊಸದಿಲ್ಲಿ, ಫೆ.19: ಜೆಎನ್ಯು ವಿದ್ಯಾರ್ಥಿ ನಾಯಕ ಕನ್ನೈಯ ಕುಮಾರ್ ಮೇಲೆ ಹಲ್ಲೆ ನಡೆದಿರುವುದು ವೈದ್ಯಕೀಯ ವರದಿ ಸ್ಪಷ್ಟಪಡಿಸಿದೆ.
ಎರಡು ದಿನಗಳ ಹಿಂದೆ ಕನ್ನೈಯ ಕುಮಾರ‍್ ಅವರನ್ನು ಪಟಿಯಾಲ ಹೌಸ್ ಕೋರ್ಟ್‌ಗೆ ಹಾಜರುಪಡಿಸುವ ಸಂದರ್ಭದಲ್ಲಿ ಅವರಿಗೆ ನ್ಯಾಯಾಲಯದ ಆವರಣದಲ್ಲಿ ವಕೀಲರಿಂದ ಹಲ್ಲೆ ನಡೆದಿತ್ತು. ಆದರೆ ಪೊಲೀಸ್ ಆಯುಕ್ತ ಬಿಎಸ್ ಬಸ್ಸಿ ಹಲ್ಲೆ ನಡೆಸಿರುವುದನ್ನು ನಿರಾಕರಿಸಿದ್ದರು.
ಕನ್ನೈಯಾ ಕುಮಾರ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿರುವ ಡಾ. ರಾಮ್ ಮನೋಹರ್ ಲೋಯಿಯಾ ಆಸ್ಪತ್ರೆಯ ವೈದ್ಯರ ತಂಡ ನೀಡಿರುವ ವರದಿಯಲ್ಲಿ ಕನ್ನೈಯಾ ಕುಮಾರ್ ಅವರ ಮುಖ ಮತ್ತು ಕಾಲಿಗೆ ಗಾಯವಾಗಿರುವುದನ್ನು ಸ್ಪಷ್ಟಪಡಿಸಿದೆ,.
Next Story





