ಧರ್ಮಶಾಲಾ ದಲ್ಲಿ ಪಾಕ್ನೊಂದಿಗೆ ಟಿ-20 ಕ್ರಿಕೆಟ್ ಆಡಲೇಬಾರದು ಎಂದ ಬಿಜೆಪಿಯ ಶಾಂತಾಕುಮಾರ್
ಬಿಸಿಸಿಐ ಮತ್ತು ಕೇಂದ್ರ ಸರಕಾರ ಇಕ್ಕಟ್ಟಿನಲ್ಲಿ!

ಶಿಮ್ಲಾ:ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಶಾಂತಾಕುಮಾರ್‌ಧರ್ಮಶಾಲಾದಲ್ಲಿ ಮಾರ್ಚ್ ಹತ್ತೊಂಬತ್ತರಂದು ನಡೆಯಲಿರುವ ಪಾಕಿಸ್ತಾನ-ಭಾರತ ಟಿ-20ಕ್ರಿಕೆಟ್‌ಮ್ಯಾಚನ್ನು ವಿರೋಧಿಸಿದ್ದಾರೆ. ಇದೀಗ ಶಾಂತಾಕುಮಾರ್‌ರ ವಿರೋಧ ಕೇಂದ್ರಸರಕಾರ, ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಹಾಗೂ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್‌ರಿಗೆ ಸಂಕಷ್ಟವನ್ನು ತಂದೊಡ್ಡಿದೆ. ಹಿಮಾಚಲದ ಕಾಂಗ್ಡಾದ ಸೈನಿಕರು ಪಾಕಿಸ್ತಾನದ ಗಡಿಯಲ್ಲಿ ಹುತಾತ್ಮರಾಗುತ್ತಿದ್ದರೆ ನಾವು ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡುತ್ತಿದ್ದೇವೆ.
ಇದರ ಅರ್ಥವೇನು ಎಂದು ಖಾರವಾಗಿ ಪ್ರಶ್ನಿಸಿದ ಅವರು "ಭಯೋತ್ಪಾದನೆಯನ್ನು ಹರಡುವ ದೇಶವೊಂದರ ಜೊತೆಗೆ ಕ್ರಿಕೆಟ್ ಆಡುವುದನ್ನು ಯಾವನೇ ಪ್ರೇಕ್ಷಕ ಸಹಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ಗುಡುಗಿದ್ದಾರೆ. ನಾವು ಭಯೋತ್ಪಾದನೆಗೆ ಸಂಬಂಧಿಸಿದ ಎರಡು ರಾಷ್ಟ್ರಗಳ ವಿದೇಶ ಸಚಿವ ಮಟ್ಟದ ಮಾತುಕತೆಗಳನ್ನು ರದ್ದು ಪಡಿಸಬಹುದಾದರೆ, ಈ ಕ್ರಿಕೆಟ್ ಮ್ಯಾಚ್‌ನ್ನು ರದ್ದು ಪಡಿಸಲಿಕ್ಕೆ ಏನು ಅಡ್ಡಿಯಿದೆ ಎಂದು ಕೇಂದ್ರ ಸರಕಾರವನ್ನು ಶಾಂತಾಕುಮಾರ್ ಪ್ರಶ್ನಿಸಿದ್ದಾರೆ. ಕಾಂಗ್ಡಾದ ಪ್ರತಿ ಮೂವರಲ್ಲಿ ಒಬ್ಬರು ಸೇನೆಯಲ್ಲಿ ಭರ್ತಿಯಾಗಿದ್ದಾರೆ. ಪಠಾಣ್‌ಕೋಟ್ ದಾಳಿಯಲ್ಲಿಯೂ ಕಾಂಗ್ಡಾದ ಇಬ್ಬರು ಸೈನಿಕರು ಹತರಾಗಿದ್ದಾರೆ.
ಹುತಾತ್ಮರಾ ದಸೈನಿಕರ ಕುಟುಂಬಗಳಿಗೆ ಕ್ರಿಕೆಟ್ ಮ್ಯಾಚ್‌ನಿಂದ ಬರುವ ಆದಾಯದಲ್ಲಿ ನೆರವು ನೀಡಲಾಗುವುದೆಂಬ ಪ್ರಸ್ತಾವವನ್ನು ಸೈನಿಕ ಕುಟುಂಬಗಳೇ ನಿರಾಕರಿಸಿದ್ದು ಕ್ರಿಕೆಟ್ ಮ್ಯಾಚ್‌ನ್ನು ವಿರೋಧಿಸಿ ಹುತಾತ್ಮ ಸೈನಿಕರ ಕುಟುಂಬಗಳು ನಿವೃತ್ತ ಸೈನಿಕರ ಜೊತೆಸೇರಿ ಅನ್ನಸತ್ಯಾಗ್ರಹ ಕುಳಿತುಕೊಳ್ಳಲಿದೆ ಎಂದು ಶಾಂತ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಇದಕ್ಕೂ ಮೊದಲು ಕಾಂಗ್ರೆಸ್ ಮುಖ್ಯಮಂತ್ರಿ ವೀರಭದ್ರಸಿಂಗ್ ಪಾಕಿಸ್ತಾನದೊಂದಿಗೆ ಕ್ರಿಕೆಟ್‌ಆಡುವುದರಿಂದಾಗಿ ಪಠಾಣ್‌ಕೋಟ್ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮ ಸೈನಿಕರ ಕುಟುಂಬಗಳ ಭಾವನೆಗಳಿಗೆ ನೋವು ಆಗಲಿದೆ ಎಂದಿದ್ದು ಈ ಕಾರಣಕ್ಕಾಗಿ ಧರ್ಮಶಾಲಾದ ಪಾಕಿಸ್ತಾನ ಭಾರತ ಟಿ-20 ಪಂದ್ಯವನ್ನು ವಿರೋಧಿಸಿದ್ದರು.







