ಜೆಎನ್‌ಯುಗೆ ಆಕ್ಸ್‌ಫರ್ಡ್, ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯಗಳ ಬೆಂಬಲ

ಲಂಡನ್: ಬ್ರಿಟನ್‌ನ ಆಕ್ಸ್‌ಫರ್ಡ್ ಮತ್ತು ಕೇಂಬ್ರಿಡ್ಜ್ ಸಹಿತ ಎಂಟು ವಿಶ್ವವಿದ್ಯಾನಿಲಯಗಳು ಜೆಎನ್‌ಯುಬೆಂಬಲಕ್ಕೆ ನಿಂತಿವೆ. ಪೊಲೀಸ್ ಕಾರ್ಯಾಚರಣೆಯನ್ನು ಟೀಕಿಸಿವೆ. ವಿರೋಧ ಮತ್ತು ಚರ್ಚೆಯ ಮೇಲಿನ ನೇರ ಹಲ್ಲೆ ಎಂದು ಅವು ಉಲ್ಲೇಖಿಸಿವೆ. ಪ್ರಮುಖ ವಿಶ್ವವಿದ್ಯಾನಿಲಯಗಳ ದಕ್ಷಿಣ ಏಷ್ಯಾದ ಶೋಧ ಕೇಂದ್ರವು ಒಂದು ಹೇಳಿಕೆಯಲ್ಲಿ ಫೆಬ್ರವರಿ ಹನ್ನೆರಡರಂದು ಜೆಎನ್‌ಯುನಲ್ಲಿ ಪೊಲೀಸ್‌ರ ಕಾರ್ಯಾಚರಣೆ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವವಿರೋಧಿಯಾಗಿದ್ದು ಅಪಾಯಕಾರಿಯಾಗಿದೆ ಎಂದು ಹೇಳಿದ್ದು ಜೆಎನ್‌ಯುಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿರುವ ಪ್ರತಿಷ್ಠೆಯನ್ನು ಅದರಲ್ಲಿ ಉಲ್ಲೇಖಿಸಲಾಗಿದೆ.
ವಿಶ್ವವಿದ್ಯಾನಿಲಯ ಸಮುದಾಯ ಮತ್ತು ಸದಸ್ಯರುಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಬೇಕೆಂದು ಜೆಎನ್ಯು ವಿಶ್ವವಿದ್ಯಾನಿಲಯದ ಕುಲಪತಿಯೊಡನೆ ತನ್ನ ಹೇಳಿಕೆಯಲ್ಲಿ ವಿನಂತಿಸಿಕೊಂಡಿದೆ.
Next Story





