ಕಿನ್ನಿಗೋಳಿ : ಮಾಹಾನ್ ಕವಿಗಳು, ಸಾಹಿತಿಗಳನ್ನು ಜಾತಿವಾದದ ಸಂಕೋಲೆಲೆಗಳಲ್ಲಿ ವಿಭಜಿಸಲಾಗುತ್ತಿದೆ - ಬಾಲಕೃಷ್ಣ ಶೆಟ್ಟಿ

ಕಿನ್ನಿಗೋಳಿ, ಫೆ.19: ನಾಡಿನ ಮಾಹಾನ್ ಕವಿಗಳು, ಸಾಹಿತಿಗಳನ್ನು ಜಾತಿವಾದದ ಸಂಕೋಲೆಲೆಗಳಲ್ಲಿ ವಿಭಜಿಸಲಾಗುತ್ತಿದೆ ಇದು ಸಾಹಿತ್ಯ ಕ್ಷೇತ್ರದ ಅಪಾಯಕಾರಿ ಬೆಳವಣಿಗೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಾಲಕೃಷ್ಣ ಶೆಟ್ಟಿ ಆತಂಕ ವ್ಯಕ್ತಪಡಿಸಿದರು.
ಮಂಗಲೂರಿನ ಕಲ್ಕೂರ ಪ್ರತಿಷ್ಠಾನದ ಆಶ್ರಯದಲ್ಲಿ ಐಕಳ ಪೊಂಪೈ ಕಾಲೇಜಿನ ಭಾಆ ಸಂಘದ ಸಹಯೋಗದೊಂದಿಗೆ ಪೊಂಪೈ ಕಾಲೇಜಿನ ಸಭಾಭವನದಲ್ಲಿ ಆಯೋಜಿಸಿದ್ದ ಕೆ.ಎಸ್. ನರಸಿಂಗ ಸ್ವಾಮಿ ಕಾವ್ಯಾನುಸಂಧಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಡುತ್ತಿದ್ದರು.
ಕಾರ್ಯಕ್ರಮದಲ್ಲಿ ಪೊಂಪೈ ಕಾಲೇಜು ವಿಧ್ಯಾರ್ಥಿಗಳಿಂದ ಕೆ.ಎಸ್. ನರಸಂಹ ಸ್ವಾಮಿಯವರ ಭಾವಗೀತಗಾಯನ ನಡೆಯಿತು. ಕಾರ್ಯಕ್ರಮವನ್ನು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಉದ್ಘಾಟಿಸಿದರು. ಪೊಂಪೈ ಕಾಲೇಜಿನ್ ನಿರ್ದೇಶಕ ಡಾ. ಜೋನ್ ಕ್ಲಾರೆನ್ಸ್ ಮಿರಾಂದ ಅಧ್ಯಕ್ಷತೆ ವಹಿಸಿದ್ದದರು. ಐಕಲ ಪೊಂಪೈ ಕಾಲೇಜಿನ ಭಾಷಾ ಸಂಗದ ನಿರ್ದೇಶಕಿ ಡಾ. ಪ್ರಡಾ ಡಿಸೀಜಾ, ಕಲ್ಕೂರ ಪ್ರತಿಷ್ಠಾನದ ನಿರ್ದೇಶಕಿ ವಿಜಯಲಕ್ಷ್ಮಿ ಬಿ. ಶೆಟ್ಟಿ, ಜನಾರ್ಧನ ಹಂದೆ ಮೊದಲದವರು ಉಪಸ್ಥಿತರಿದ್ದರು.





