ಕನ್ಹಯ್ಯಾ ಕುಮಾರ್ ಜಾಮೀನು ಕೋರಿ ದಿಲ್ಲಿ ಹೈಕೋರ್ಟ್‌ಗೆ; ಇಂಡಿಯಾ ಗೇಟ್‌ನಲ್ಲಿ ವಕೀಲರ ಪ್ರತಿಭಟನೆ

ಹೊಸದಿಲ್ಲಿ, ಫೆ.19: ಜೆಎನ್ ವಿವಿಯಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿ ವಿದ್ಯಾರ್ಥಿ ಸಂಘದ ನಾಯಕ ಕನ್ಹಯ್ಯಾ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ನಡೆಸಲು ಇಂದು ಸುಪ್ರೀಮ್ ಕೋರ್ಟ್ ನಿರಾಕರಿಸಿದ ಬಳಿಕ ಅವರು ದಿಲ್ಲಿ ಹೈಕೋರ್ಟ್ ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿದರು.
ಸುಪ್ರೀಮ್ ಕೋರ್ಟ್‌ನ ನಿರ್ದೇಶನದ ಮೇರೆಗೆ ಕನ್ಹಯ್ಯಾ ಕುಮಾರ್ ವಕೀಲರು ಹೈಕೋರ್ಟ್‌ನ ಮೊರೆ ಹೋಗಿರುವ ಬೆನ್ನೆಲ್ಲೆ ಕೆಲವು ವಕೀಲರು ಇಂಡಿಯಾ ಗೇಟ್‌ನಲ್ಲಿ ಪ್ರತಿಭಟನೆ ನಡೆಸಿ, ಜೆಎನ್ ವಿವಿ ವಿದ್ಯಾರ್ಥಿಗಳ ವಿರುದ್ಧ ಘೋಷಣೆ ಕೂಗಿದರು.
.ಇಂದು ಬೆಳಗ್ಗೆ ಸುಪ್ರೀಮ್ ಕೋರ್ಟ್ ಕನ್ಹಯ್ಯಾ ಕುಮಾರ್ ಅವರ ಜಾಮೀನು ಅರ್ಜಿಯ ಪರಿಶೀಲನೆ ನಡೆಸಿತು. ಆದರೆ ವಿಚಾರಣೆಗೆ ನಿರಾಕರಿಸಿದ ಸುಪ್ರೀಮ್ ಕೋರ್ಟ್. ಜಾಮೀನು ವಿಚಾರ ಸುಪ್ರೀಮ್ ಕೋರ್ಟ್‌ಗೆ ಸಂಬಂಧಿಸಿದ್ದಲ್ಲ. ಅರ್ಜಿಯ ವಿಚಾರಣೆಯನ್ನು ದಿಲ್ಲಿ ಹೈಕೋರ್ಟ್‌ನಲ್ಲಿ ನಡೆಸಬಹುದಾಗಿದೆ. ನಾವು ಇಲ್ಲಿ ವಿಚಾರಣೆ ನಡೆಸಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಹೇಳಿತ್ತು.
ಪಟಿಯಾಲ ಕೋರ್ಟ್‌ನಲ್ಲಿ ಭದ್ರತೆಯ ಕಾರಣಕ್ಕಾಗಿ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ನಾವು ಸುಪ್ರೀಮ್ ಕೋರ್ಟ್‌ಗೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದೇವೆ ಎಂದು ಕನ್ಹಯ್ಯಾ ಕುಮಾರ್ ಪರ ವಕೀಲರು ವಾದ ಮಂಡಿಸಿದಾಗ, ಸುಪ್ರೀಮ್ ಕೋರ್ಟ್‌ಗೆ ಜಾಮೀನು ಅರ್ಜಿಯ ವಿಚಾರಣೆ ನಡೆಸಲು ಒಪ್ಪಲಿಲ್ಲ. ಇಲ್ಲಿ ವಿಚಾರಣೆ ನಡೆಸಿದರೆ ಬೇರೆ ಕೋರ್ಟ್‌ಗಳು ಅಸಮರ್ಥ ಎಂಬ ತಪ್ಪು ಸಂದೇಶ ರವಾನೆಯಾಗುತ್ತದೆ , ಸೂಕ್ತ ಸ್ಥಳದಲ್ಲೀ ಜಾಮೀನಿಗೆ ಅರ್ಜಿ ಸಲ್ಲಿಸುವಂತೆ ಸುಪ್ರೀಮ್ ಕೋರ್ಟ್ ಸಲಹೆ ನೀಡಿತ್ತು. .
ದಿಲ್ಲಿ ಹೈಕೋರ್ಟ್‌ಗೆ ವರ್ಗಾವಣೆ: ಇದೇ ವೇಳೆ ಕನ್ಹಯ್ಯಾ ಕುಮಾರ್ ಜಾಮೀನು ಅರ್ಜಿಯನ್ನು ದಿಲ್ಲಿ ಹೈಕೋರ್ಟ್‌ಗೆ ವರ್ಗಾಯಿಸಿರುವ ಸುಪ್ರೀಂ ಕೋರ್ಟ್, ಅರ್ಜಿಯ ತ್ವರಿತವಾಗಿ ವಿಚಾರಣೆ ನಡೆಸಲು ಸೂಚಿಸಿದೆ.





