ಪತ್ನಿ ಬಿಟ್ಟುಹೋದದ್ದಕ್ಕೆ ಉತ್ತರಾಖಂಡ ಮುಖ್ಯಮಂತ್ರಿಯನ್ನೇ ಸ್ಫೋಟಿಸುತ್ತೇನೆಂದ ವ್ಯಕ್ತಿಯ ಬಂದನ!

ಉತ್ತರಾಖಂಡ : ರಾಜ್ಯದ ಮುಖ್ಯಮಂತ್ರಿ ಹರೀಶ್ ರಾವತ್‌ರನ್ನು ಬಾಂಬಿಟ್ಟು ಸಾಯಿಸುವೆ ಎಂದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರಖಂಡದ ಪೌಡಿ ಗಡ್‌ವಾಲ್‌ನ ಶ್ರೀನಗರ್‌ನಿಂದ ಫೊನ್ ಕರೆಮಾಡಿ ಮುಖ್ಯಮಂತ್ರಿಯನ್ನು ಬಾಂಬುಸ್ಫೋಟಿಸಿ ಹತ್ಯೆಮಾಡುವುದಾಗಿ ಬೆದರಿಕೆ ಹಾಕಿದ್ದ. ಫೋನ್‌ನ ಲೋಕೇಶನ್ ಟ್ರೇಸ್ ಮಾಡಿದಾಗ ಆರೋಪಿ ಲುಧಿಯಾನದಿಂದ ಫೋನ್ ಮಾಡಿದ್ದನೆಂದು ತಿಳಿದು ಬಂದಿತ್ತು. ಲುಧಿಯಾನ ಪೊಲೀಸ್‌ರ ನೆರವಿನಿಂದ ಉತ್ತರಖಂಡ ಪೊಲೀಸರು ಆರೋಪಿ ಕೇಶ್ವಾನಂದ ಎಂಬಾತನನ್ನು ಬಂಧಿಸಿದ್ದಾರೆ. ಎಡಿಸಿಪಿ ಶೈಲೇಂದ್ರ ಕುಮಾರ್ ಆರೋಪಿ ಕೇಶ್ವಾನಂದ ಫೋಕಲ್ ಪಾಯಿಂಟ್ ಎಂಬಲ್ಲಿನ ನಿವಾಸಿಯಾಗಿದ್ದು ಮೆಜಿಸ್ಟಿಕ್ ಆಟೊ ಲಿಮಿಟೆಡ್‌ನಲ್ಲಿ ಕೆಲಸಮಾಡುತ್ತಿದ್ದಾನೆಂದು ತಿಳಿಸಿದ್ಧಾರೆ .ಪೌಡಿ ಅತಾಖೋಲಿ ಎಂಬಲ್ಲಿ ಅವನೊಂದು ಮನೆಯನ್ನು ಕಟ್ಟಿಸಿದ್ದ.ದುಷ್ಕರ್ಮಿಗಳು ಬೆಂಕಿಯಿಟ್ಟು ಸುಟ್ಟು ಹಾಕಿದ್ದರು. ಆನಂತರ ಹೆಂಡತಿಯೂ ಅವನನ್ನು ತೊರೆದು ಹೋಗಿದ್ದಳು. ಇದರಿಂದ ಒತ್ತಡಕ್ಕೊಳಗಾಗಿದ್ದ ಆತ ಮುಖ್ಯಮಂತ್ರಿಯನ್ನು ಸಾಯಿಸುತ್ತೇನೆ ಎಂದು ಫೋನ್ ಮೂಲಕ ಬೆದರಿಕೆ ಹಾಕಿದ್ದಾನೆ. ಲುಧಿಯಾನದಲ್ಲಿ ಪಂಜಾಬ್ ಪೊಲೀಸರು ಬಂಧಿಸಿ ಕೇಶ್ವಾನಂದನ್ನು ಬಂಧಿಸಿ ನಂತರ ಉತ್ತರಾಖಂಡ ಪೊಲೀಸರಿಗೊಪ್ಪಿಸಿದ್ದಾರೆ.
ಮನೆಬೆಂಕಿ ಬಿದ್ದುನೊಂದಿದ್ದ ಆತನಿಗೆ ಪತ್ನಿಯೂ ಕೈಕೊಟ್ಟಾಗ ತೀರ ದಿಕ್ಕೆಟ್ಟು ಹೋಗಿದ್ದ. ಪಂಚಾಯತ್‌ಗೆ ಹೋಗಿತನಗೊಂದು ಐಡಿ ಮಾಡಿಸಿಕೊಳ್ಳಲು ಪ್ರಯತ್ನಿಸಿದಾಗ ಅವನ ಮಾತನ್ನು ಅಲ್ಲಿದ್ದವರು ಕೇಳಲು ತಯಾರಾಗಿರಲಿಲ್ಲ.ಆನಂತರ ಪೊಲೀಸ್ ಠಾಣೆಗೆ ಹೋಗಿ ತನ್ನ ಪರಿಚಯ ಪತ್ರ ಮಾಡಿಸಿಕೊಳ್ಳಲು ಪ್ರಯತ್ನಿಸಿದ್ದ. ಅಲ್ಲಿಯವರೂ ಅವನ ಮಾತಿಗೆ ಕಿವಿಕೊಟ್ಟಿರಲಿಲ್ಲ. ಇದರಿಂದ ರೋಷತಪ್ತತನಾಗಿದ್ದ ಆತ ಸೀದಾ ಮುಖ್ಯಮಂತ್ರಿಯನ್ನೇ ಬಾಂಬಿಟ್ಟು ಕೊಲ್ಲುವೆ ಎಂದು ಫೋನ್ ಮಾಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.







