ಕಾಸರಗೋಡು : ಭಯಮುಕ್ತ ಸಮಾಜ ಯುವಕರ ಕೈ ಯಲ್ಲಿ, ಮಾನವೀಯ ಐಕ್ಯ ಸಂದೇಶ ಯಾತ್ರೆ

ಕಾಸರಗೋಡು : ಭಯಮುಕ್ತ ಸಮಾಜ ಯುವಕರ ಕೈ ಯಲ್ಲಿ ಎಂಬ ಘೋಷಣೆ ಯೊಂದಿಗೆ ಯುವ ಜನತಾದಳ ರಾಜ್ಯ ಅಧ್ಯಕ್ಷ ಸಲೀಂ ಮಡವೂರು ನೇತ್ರತ್ವದ ಮಾನವೀಯ ಐಕ್ಯ ಸಂದೇಶ ಯಾತ್ರೆ ಶುಕ್ರವಾರ ಸಂಜೆ ಕುಂಬಳೆ ಯಿಂದ ಪ್ರಯಾಣ ಬೆಳೆಸಿತು.
ಜೆ ಡಿ ಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಾವೇದ್ ರೋಜ್ ಜಾಥಾ ನಾಯಕನಿಗೆ ಧ್ವಜ ಹಸ್ತಾಂತರಿಸು ವುದರೊಂದಿಗೆ ಚಾಲನೆ ನೀಡಿದರು.
ರಾಜ್ಯ ಉಪಾಧ್ಯಕ್ಷ ಪಿ . ಕೆ ಪ್ರವೀಣ್ ಅಧ್ಯಕ್ಷತೆ ವಹಿಸಿದ್ದರು.
ಮಂಜೇಶ್ವರ ಶಾಸಕ ಪಿ. ಬಿ ಅಬ್ದುಲ್ ರಜಾಕ್ , ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ .ಕೆ ಶ್ರೀಧರನ್ , ಜೆ ಡಿ ಯು ರಾಜ್ಯ ಹಿರಿಯ ನಾಯಕ ಪಿ . ಕೋರನ್ ಮಾಸ್ಟರ್, ರಾಜ್ಯ ಪ್ರಧಾನ ಕಾರ್ಯದರ್ಶಿ ವಿ . ಕುನ್ಚಾಲಿ, ಎ . ಭಾಸ್ಕರನ್, ಮನಯತ್ ಚಂದ್ರನ್ , ಎ . ವಿ ರಾಮಕೃಷ್ಣನ್ , ಸಿದ್ದಿಕ್ ಅಲಿ ಮೊಗ್ರಾಲ್ , ಮುಹಮ್ಮದ್ ಕುನ್ಚಿ ಮಾಸ್ಟರ್, ಆಹಮ್ಮದಾಲಿ ಕುಂಬಳೆ ಮೊದಲಾದವರು ಉಪಸ್ಥಿತರಿದ್ದರು.
ಜಾಥಾಕ್ಕೆ ಶನಿವಾರ ಬೆಳಿಗ್ಗೆ ೧೦ ಗಂಟೆಗೆ ಕಾನ್ಚಾ೦ಗಾಡ್, ೧೧ ಗಂಟೆಗೆ ತ್ರಿಕ್ಕರಿಪುರ ದಲ್ಲಿ ಸ್ವಾಗತ ನೀಡಲಾಗುವುದು.
ಬಳಿಕ ಕಣ್ಣೂರು ಜಿಲ್ಲೆ ಪ್ರವೇಶಿಸಲಿದೆ. ಫೆಬ್ರವರಿ ೨೯ ರಂದು ತಿರುವನಂತಪುರ ಗಾಂಧಿ ಪಾರ್ಕ್ ನಲ್ಲಿ ಯಾತ್ರೆ ಕೊನೆಗೊಳ್ಳಲಿದೆ.





