ಕೊಣಾಜೆ: ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪಿಯ ಬಂಧನ: ಪೋಕ್ಸೊ ಕಾಯಿದೆಯಡಿ ಪ್ರಕರಣ

ಕೊಣಾಜೆ: ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ 10ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಶುಕ್ರವಾರ ಸಂಜೆ ಕೊಣಾಜೆ ಠಾಣಾ ವ್ಯಾಪ್ತಿಯ ಅಡ್ಕರೆಪಡ್ಪು ಎಂಬಲ್ಲಿ ನಡೆದಿದೆ. ಮಲಾರ್‌ನ ಖಲೀಲ್(21) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಕೊಣಾಜೆ ಗ್ರಾಮದ 10ನೇ ತರಗತಿಯ ವಿದ್ಯಾರ್ಥಿನಿಯೊರ್ವಳು ಅಡ್ಕರೆಪಡ್ಪು ಬಳಿ ಶಾಲೆ ಮುಗಿಸಿ ಸಂಜೆ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ಖಲೀಲ್ ದಾರಿಯಲ್ಲಿ ಅಡ್ಡವಾಗಿ ನಿಂತು ವಿದ್ಯಾರ್ಥಿನಿಯ ಕೈ ಹಿಡಿದು ಎಳೆದು ಲೈಂಗಿಕ ದೌರ್ಜನ್ಯ ಎಸಗಿದ್ದ.
ಈ ಸಂದರ್ಭದಲ್ಲಿ ಆಕೆ ಕಿರುಚಿದಾಗ ಆತ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಬಳಿಕ ಅದೇ ದಾರಿಯಲ್ಲಿ ಬರುತ್ತಿದ್ದ ವಿವಿಯಲ್ಲಿ ಉದ್ಯೋಗಿ ಯುವತಿಯೊರ್ವರ ಬೆನ್ನ ಹಿಂದೆ ಬರುತ್ತಿದ್ದಾಗ ಯುವತಿ ಅಲ್ಲಿಂದ ಓಡಿ ಹೋಗಿದ್ದರು. ಕೂಡಲೇ ಈ ವಿಷಯ ಸ್ಥಳೀಯರಿಗೆ ತಿಳಿದಾಗ ಈತನಿಗಾಗಿ ಪರಿಸರದಲ್ಲಿ ಹುಡಕಾಟ ನಡೆಸಲಾಗಿತ್ತು. ಆತ ಕೊಣಾಜೆ ಪಂಚಾಯಿತಿ ರಸ್ತೆ ಬಳಿ ಪರಾರಿಯಾಗುತ್ತಿರುವುದನ್ನು ನಾಗರಿಕರು ಕಂಡು ಆತನನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಆರೋಪಿ ಗಾಂಜಾ ವ್ಯಸನಿಯಾಗಿದ್ದು ಲೈಂಗಿಕ ದೌರ್ಜನ್ಯ ನೀಡಿ ಪರಾರಿಯಾಗುವಷ್ಟರಲ್ಲಿ ಸ್ಥಳೀಯರು ಒಟ್ಟು ಸೇರಿ ಆತನನ್ನು ಹಿಡಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಆರೋಪಿಯ ವಿರುದ್ದ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.







