ಜೆಎನ್‌ಯು ವಿದ್ಯಾರ್ಥಿ ಉಮರ್ ಖಾಲಿದ್ ಭಾರತದ ‘‘ನಿಜವಾದ ಪುತ್ರ’’ : ಸೋದರಿ

ಹೊಸದಿಲ್ಲಿ,ಫೆ.19: ಜೆಎನ್‌ಯು ಪಿಎಚ್‌ಡಿ ವಿದ್ಯಾರ್ಥಿ ಉಮರ್ ಖಾಲಿದ್ ವಿರುದ್ಧದ ಆರೋಪಗಳು ಸಂಪೂರ್ಣ ಕಪೋಲ ಕಲ್ಪಿತವಾಗಿವೆ ಮತ್ತು ಆತನ ವಿರುದ್ಧ ಇಂತಹ ಆರೋಪಗಳನ್ನು ಹೊರಿಸಿರುವುದು ಆತನ ಕುಟುಂಬ ಸದಸ್ಯರ ನೆಮ್ಮದಿಯನ್ನೇ ಕಸಿದುಕೊಂಡಿದೆ ಎಂದು ಪ್ರತಿಪಾದಿಸಿರುವ ಆತನ ಸೋದರಿ ಮರಿಯಂ ಫಾತಿಮಾ,ತನ್ನ ಸೋದರ ಭಾರತದ ‘‘ನಿಜವಾದ ಪುತ್ರ’’ನಾಗಿದ್ದಾನೆ ಎಂದಿದ್ದಾರೆ.
ಅಮೆರಿಕದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ಫಾತಿಮಾ,ಸಂಸತ್ ದಾಳಿಯ ಅಪರಾ ಅ್ಝಲ್ ಗುರುವನ್ನು ಗಲ್ಲಿಗೇರಿಸಿರುವುದನ್ನು ವಿರೋಸಿ ಜೆಎನ್‌ಯುದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದ ಆರೋಪವನ್ನು ಎದುರಿಸುತ್ತಿರುವ ಖಾಲಿದ್‌ನ ‘‘ವಿಚಾರಣೆ’’ಯನ್ನು ನಡೆಸುತ್ತಿರುವುದಕ್ಕಾಗಿ ಮಾಧ್ಯಮಗಳನ್ನು ತೀವ್ರ ತರಾಟೆಗೆತ್ತಿಕೊಂಡಿದ್ದಾರೆ. ಅವು ಕಾನೂನನ್ನು ಕೈಗೆತ್ತಿಕೊಂಡು ಯಾರನ್ನು ಬೇಕಾದರೂ ಕೊಲ್ಲುವ ಉನ್ಮತ್ತ ಗುಂಪನ್ನು ಸೃಷ್ಟಿಸುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ತೀವ್ರ ಎಡಪಂಥೀಯ ವಿದ್ಯಾರ್ಥಿ ಸಂಘಟನೆ ಡೆಮಾಕ್ರಟಿಕ್ ಸ್ಟುಡೆಂಟ್ಸ್ ಯೂನಿಯನ್ನಿನ ಮಾಜಿ ಸದಸ್ಯನಾಗಿರುವ ಖಾಲಿದ್ ಜೆಎನ್‌ಯು ವಿವಾದ ಭುಗಿಲೆದ್ದಾಗಿನಿಂದ ತಲೆ ಮರೆಸಿಕೊಂಡಿದ್ದು,ಪೊಲೀಸರು ಆತನಿಗಾಗಿ ಹುಡುಕಾಟದಲ್ಲಿ ತೊಡಗಿದ್ದಾರೆ.
ಹೆಚ್ಚಿನ ಸುದ್ದಿವಾಹಿನಿಗಳು ತಪ್ಪು ಮಾಹಿತಿಗಳನ್ನು ಆಧರಿಸಿ ಮಾಧ್ಯಮ ವಿಚಾರಣೆಗಳನ್ನು ನಡೆಸುತ್ತಿವೆ. ಖಾಲಿದ್ ಜೈಷ್-ಎ-ಮೊಹಮ್ಮದ್‌ನೊಂದಿಗೆ ನಂಟು ಹೊಂದಿದ್ದಾನೆಂದು ಗುಪ್ತಚರ ಸಂಸ್ಥೆ(ಐಬಿ)ವರದಿ ಮಾಡಿದೆ ಎಂದು ಅವು ಮೊದಲು ಬಿಂಬಿಸಿದ್ದವು. ಇದನ್ನು ಬಳಿಕ ಐಬಿ ನಿರಾಕರಿಸಿತು. ಆದರೆ ವದಂತಿ ಇನ್ನೂ ಹರಿದಾಡುತ್ತಲೇ ಇದೆ. ಇವೆಲ್ಲ ಸೇರಿ ಕಾನೂನನ್ನು ಕೈಗೆತ್ತಿಕೊಂಡು ಹತ್ಯೆಗೂ ಹೇಸದ ಉನ್ಮತ್ತ ಮನೋಸ್ಥಿತಿಯನ್ನು ಸೃಷ್ಟಿಸುತ್ತಿವೆ ಎಂದು ಾತಿಮಾ ಸುದ್ದಿಸಂಸ್ಥೆಗೆ ಕಳುಹಿಸಿರುವ ಇ-ಮೇಲ್‌ನಲ್ಲಿ ಹೇಳಿದ್ದಾರೆ.
ಖಾಲಿದ್ ಶೋಷಿತ ವರ್ಗಗಳ ಹಕ್ಕುಗಳಿಗಾಗಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾನೆ ಎಂದಿರುವ ಾತಿಮಾ, ವಿವಾದಾತ್ಮಕ ಜೆಎನ್‌ಯು ಕಾರ್ಯಕ್ರಮದಲ್ಲಿ ಎಬಿವಿಪಿ ಕಾರ್ಯಕರ್ತರು ದೇಶವಿರೋ ಘೋಷಣೆಗಳನ್ನು ಕೂಗಿದ್ದರು ಎಂದು ಆಪಾದಿಸಿದ್ದಾರೆ.
ಖಾಲಿದ್‌ನ ಐವರು ತಂಗಿಯರಲ್ಲಿ ಹಿರಿಯವಳಾಗಿರುವ, ಆದರೆ ಆತನಿಗಿಂತ ಕಿರಿಯವಳಾಗಿರುವ ಾತಿಮಾ ತನ್ನ 12ರ ಹರೆಯದ ತಂಗಿಗೂ ಸಾಮಾಜಿಕ ಮಾಧ್ಯಮಗಳಲ್ಲಿ ಬೆದರಿಕೆಗಳನ್ನೊಡ್ಡಲಾಗುತ್ತಿದೆ ಎಂದಿದ್ದಾರೆ.
ಎರಡು ಟಿವಿ ವಾಹಿನಿಗಳಿಗೆ ಸಂದರ್ಶನ ನೀಡಿದ ಬಳಿಕ ಖಾಲಿದ್ ಕುಟುಂಬದವರೊಂದಿಗೆ ಮಾತನಾಡಿದ್ದ, ಆದರೆ ನಾಪತ್ತೆಯಾದಾಗಿನಿಂದ ಆಕುಟುಂಬದವರನ್ನು ಸಂಪರ್ಕಿಸಿಲ್ಲ. ಆತನ ಸುರಕ್ಷತೆಯ ಬಗ್ಗೆ ನಮಗೆ ಚಿಂತೆಯಾಗಿದೆ ಎಂದಿದ್ದಾರೆ.
ಖಾಲಿದ್ ಪಾಕಿಸ್ತಾನ್,ಭಯೋತ್ಪಾದಕರು ಮತ್ತು ಜೈಷ್ ಜೊತೆ ನಂಟು ಹೊಂದಿದ್ದಾನೆಂಬ ಆರೋಪಗಳೆಲ್ಲ ಸಂಪೂರ್ಣ ಸುಳ್ಳು,ಆತನ ಬಳಿ ಪಾಸ್‌ಪೋರ್ಟ್ ಕೂಡ ಇಲ್ಲ ಎಂದು ಫಾತಿಮಾ ಬೆಟ್ಟು ಮಾಡಿದ್ದಾರೆ.
ನಿಷೇತ ಸಿಮಿ ಸಂಘಟನೆಯ ಜೊತೆ ತನ್ನ ತಂದೆ ಎಸ್‌ಕ್ಯೂಆರ್ ಇಲ್ಯಾಸ್‌ರ ಹಿಂದಿನ ನಂಟಿನ ಕುರಿತಂತೆ ಾತಿಮಾ,2001ರಲ್ಲಿ ಅದನ್ನು ನಿಷೇಸುವ ಮತ್ತು ಖಾಲಿದ್ ಹುಟ್ಟುವ ಎಷ್ಟೋ ವರ್ಷಗಳ ಮೊದಲು,1985ರಲ್ಲಿಯೇ ತನ್ನ ತಂದೆ ಅದರಿಂದ ಹೊರಗೆ ಬಂದಿದ್ದರು. ಈಗ ಅದಕ್ಕೆ ಯಾವುದೇ ಅರ್ಥ ಕಲ್ಪಿಸಬೇಕಾಗಿಲ್ಲ ಎಂದಿದ್ದಾರೆ.







