ಫ್ಯಾಸಿಸಂ ವಿರುದ್ಧ ಒಂದಾಗಲು ಜಮಾಅತ್ ಕರೆ

ಹೊಸದಿಲ್ಲಿ, ಫೆ. 19: ಪಟಿಯಾಲಹೌಸ್ ಕೋರ್ಟ್ ಆವರಣದಲ್ಲಿ ವಿದ್ಯಾರ್ಥಿಗಳ, ಮಾಧ್ಯಮದವರ ಮತ್ತು ಜೆ.ಎನ್.ಯು ಉಪನ್ಯಾಸಕರ ಮೇಲೆ ನಡೆದ ಹಲ್ಲೆಯನ್ನು, ಜಮಾಅತೆ ಇಸಾಮೀ ಹಿಂದ್‌ರಾಷ್ಟ್ರೀಯ ಕಾರ್ಯದರ್ಶಿ ಮುಹಮ್ಮದ್ ಸಲೀಮ್ ಎಂಜಿನಿಯರ್‌ತೀವ್ರವಾಗಿ ಖಂಡಿಸಿದ್ದಾರೆ. ಸಿ.ಪಿ.ಐಯ ಅಲ್ಪಸಂಖ್ಯಾತ ವಿಭಾಗದ ಮುಖ್ಯಸ್ಥರ ಮೇಲೆ ಹಾಡಹಗಲೇ ಬಿ.ಜೆ.ಪಿ ಶಾಸಕ ದಾಳಿ ಮಾಡಿ ಮಾಧ್ಯಮದ ಮುಂದೆ ನನ್ನ ಬಳಿ ಗನ್ ಇದ್ದಿದ್ದರೆ ಆತನಿಗೆ ಶೂಟ್ ಮಾಡುತಿದ್ದೆ ಎಂದು ಘೋಸಿರುವುದು ಆಘಾತಕಾರಿಯಾದುದು. ಬಿ. ಜೆ. ಪಿಯ ಬೆಂಬಲಿತ ಕೆಲವರು ಕೋರ್ಟ್‌ಆವರಣದಲ್ಲಿ ವಕೀಲರ ಉಡುಪಿನಲ್ಲಿ ಮಾಧ್ಯಮ ಮಿತ್ರರಿಗೆ ಮ ಕೆಲವು ಪತ್ರಕರ್ತರಿಗೆ ಬೆದರಿಸಿ ಹಲ್ಲೆ ನಡೆಸಿರುವುದಲ್ಲದೆ, ಈ ಸಂದರ್ಭದಲ್ಲಿ ಪೊಲೀಸರು ಮೂಕ ಪ್ರೇಕ್ಷಕರಾಗಿ ನಿಂತು ರಟ್ಟೆ ಬಲದ ಪ್ರದರ್ಶನವನ್ನು ದೂರದಿಂದ ವೀಕ್ಷಿಸುತಿದ್ದುದು ನಾಚಿಕೆಗೇಡಿನ ಸಂಗತಿ ಎಂದು ಮುಹಮ್ಮದ್ ಸಲೀಂ ಹೇಳಿದ್ದಾರೆ.
ಜೆ. ಎನ್. ಯು ಕ್ಯಾಂಪಸ್‌ನಲ್ಲಿ ನಡೆದ ಶಿಸ್ತು ಕ್ರಮ ಮತ್ತು ಪೂರ್ವಯೋಜಿತ ದಾಳಿ ಕಾನೂನಿನ ಕಡೆಗಣನೆಯಾಗಿದೆ. ದೇಶವು ಫ್ಯಾಸಿಸಂನ ಸುಳಿಯಲ್ಲಿ ಸಿಲುಕಿಕೊಂಡು ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ನೆನಪಿಸುತ್ತಿದೆ. ಫ್ಯಾಸಿಸ್ಟ್ ಶಕ್ತಿಗಳು ಅಲ್ಪಸಂಖ್ಯಾತ ಮತ್ತು ಹಿಂದುಳಿದವರ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದ್ದಾರೆ. ಕೋಮುವಾದಿ ಹಾಗೂ ಬಹುಸಂಖ್ಯಾತರ ಸಂಕುಚಿತ ಅಜೆಂಡಾಗಳನ್ನು ಭಾರತದ ಪ್ರಜೆಗಳ ಮೇಲೆ ಹೇರುತ್ತಿದ್ದಾರೆ. ಕೇಂದ್ರ ಸರಕಾರವು ಹಲ್ಲೆ ನಡೆಸಿರುವವರ ವಿರುದ್ಧ ತ್ವರಿತವಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಕಾನೂನು ಕೈಗೆತ್ತಿಕೊಳ್ಳುತ್ತಿರುವವರಿಗೆ ತೀಕ್ಷ್ಣವಾಗಿ ಎಚ್ಚರಿಸಬೇಕೆಂದು ಅವರು ಆಗ್ರಹಿಸಿದ್ದಾರೆ.







