ಕುಂದಾಪುರ : ಹೆರಿಯ ನಾಯ್ಕರ ಮನೆಗೆ ಸಿಪಿಎಂ ನಾಯಕರ ಭೇಟಿ
ಕುಂದಾಪುರ, ಫೆ.19:ತಾಲೂಕಿನ ಕೆರಾಡಿ ಗ್ರಾಮದ ನಿವಾಸಿ ಹೆರಿಯ ನಾಯ್ಕ ಅವರು ರಬ್ಬರ್ ಬೆಲೆ ಕುಸಿತದಿಂದಾಗಿ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿ ಕೊಂಡಿದ್ದು, ಸಿಪಿಎಂ ಮುಖಂಡ ಸುರೇಶ ಕಲ್ಲಾಗರ ಗುರುವಾರ ರೈತನ ಮನೆಗೆ ತೆರಳಿ ಸಾಂತ್ವನ ಹೇಳಿದರು.
ಕೃಷಿಗಾಗಿ 3 ಲಕ್ಷ ರೂ.ಗಿಂತಲೂ ಹೆಚ್ಚು ಸಾಲ ಮಾಡಿಕೊಂಡಿದ್ದ ಹೆರಿಯ ನಾಯ್ಕರು ರಬ್ಬರ್ ಬೆಲೆ ಕುಸಿತದಿಂದಾಗಿ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಬ್ಬರ್ ಬೆಲೆ ಕುಸಿತಕ್ಕೆ ಕೇಂದ್ರದ ಬಿಜೆಪಿ ಸರಕಾರದ ಧೋರಣೆ ಪ್ರಮುಖ ಕಾರಣವಾಗಿದೆ ಎಂದವರು ಹೇಳಿದರು.
ಹೆರಿಯ ನಾಯ್ಕ ಕುಟುಂಬದ ಸಂಪೂರ್ಣ ಸಾಲ ತೀರಿಸಲು ಸರಕಾರ ಮುಂದೆ ಬರಬೇಕು. ಅಲ್ಲದೆ ಕುಟುಂಬ ಸುಸೂತ್ರವಾಗಿ ಮುನ್ನಡೆಯಲು ಸಹಾಯವಾಗುವಂತೆ ಮನೆಯಲ್ಲಿ ಒಬ್ಬರಿಗೆ ಉದ್ಯೋಗ ಹಾಗೂ 5 ಲಕ್ಷ ರೂ. ಪರಿಹಾರ ನೀಡಬೇಕೆಂದು ಸಿಪಿಎಂ ಉಡುಪಿ ಜಿಲ್ಲಾ ಸಮಿತಿ ರಾಜ್ಯ ಸರಕಾರ ವನ್ನು ಒತ್ತಾಯಿಸಿದೆ.
Next Story





