Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ದೇಶದ್ರೋಹಿಗಳಿಂದ ದೇಶಪ್ರೇಮದ ಪಾಠ

ದೇಶದ್ರೋಹಿಗಳಿಂದ ದೇಶಪ್ರೇಮದ ಪಾಠ

ವಾರ್ತಾಭಾರತಿವಾರ್ತಾಭಾರತಿ19 Feb 2016 11:21 PM IST
share

ವಿಶ್ವ ವಿದ್ಯಾನಿಲಯವೆಂದರೆ ಅದು ಚಿಂತಕರ ತವರು. ಜಗತ್ತಿನ ಬದಲಾವಣೆಗಳು, ಕ್ರಾಂತಿಗಳ ಮೊಳಕೆ ಇಲ್ಲಿಂದಲೇ. ವ್ಯವಸ್ಥೆಯ ವಿರುದ್ಧ ಜನರ ಆಕ್ರೋಶಕ್ಕೆ ಸ್ಪಷ್ಟ ರೂಪವೊಂದು ದೊರಕುವುದು ವಿಶ್ವವಿದ್ಯಾನಿಲಯದೊಳಗಿರುವ ಚಿಂತಕರಿಂದ, ಉಪನ್ಯಾಸ ಕರಿಂದ. ಅವರಿಂದ ರೂಪುಗೊಳ್ಳುವ ಆದರ್ಶ ವಿದ್ಯಾರ್ಥಿಗಳಿಂದ. ಆದುದರಿಂದಲೇ, ವಿಶ್ವವಿದ್ಯಾನಿಲಯಗಳನ್ನು ವ್ಯವಸ್ಥೆ ಸದಾ ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಹವಣಿಸುತ್ತದೆ. ವಿಶ್ವವಿದ್ಯಾನಿಲಯದಲ್ಲಿ ನಡೆಯುವ ಚಟುವಟಿಕೆಗಳನ್ನು ವ್ಯವಸ್ಥೆ ಸದಾ ಆತಂಕ, ಅನುಮಾನದ ಕಣ್ಣಿನಿಂದ ನೋಡುತ್ತಿರುತ್ತದೆ. ಆಳುವವನು ಹೆಚ್ಚು ಹೆಚ್ಚು ಭ್ರಷ್ಟನೂ, ಸರ್ವಾಧಿಕಾರಿಯೂ ಆದಂತೆಯೇ ವಿಶ್ವವಿದ್ಯಾನಿಲಯಗಳ ಮೇಲೆ ತನ್ನ ಬಲವನ್ನು ಪ್ರಯೋಗಿಸಲು ಯತ್ನಿಸುತ್ತಾನೆ.

ಯಾಕೆಂದರೆ, ಸ್ವಂತಿಕೆಯಿರುವ, ಆಲೋಚಿಸುವ ಯುವಕರು ವಿಶ್ವವಿದ್ಯಾನಿಲಯಗಳಲ್ಲಿ ಇರುವವರೆಗೆ ಆಳುವವನಿಗೆ ಆತಂಕ ತಪ್ಪಿದ್ದಲ್ಲ. ಈ ಕಾರಣದಿಂದಲೇ ಮೋದಿ ಅಧಿಕಾರಕ್ಕೆ ಬಂದ ಆರಂಭದಲ್ಲಿ ಮಾಡಿದ ಕೆಲಸ, ವಿಶ್ವವಿದ್ಯಾನಿಲಯಗಳನ್ನುನಿಯಂತ್ರಿಸುವುದು.ಮೊತ್ತ ಮೊದಲಾಗಿ, ಸಂಪನ್ಮೂಲ ಖಾತೆಯಂತಹ ಮಹತ್ವದ ಸ್ಥಾನವನ್ನು ಅಪ್ರಬುದ್ಧೆಯಾಗಿರುವ ಸ್ಮತಿ ಇರಾನಿಯಂತಹ ಜನಪ್ರಿಯ ನಟಿಯ ಕೈಗೊಪ್ಪಿಸಿ ವಿಶ್ವವಿದ್ಯಾ ನಿಲಯದ ಚಿಂತಕರ, ಸಂಶೋಧಕರ, ಪ್ರೊಫೆಸರ್‌ಗಳ ಘನತೆಯನ್ನು ಕೆಳಗಿಳಿಸಿತು. ಬಳಿಕ ಸ್ಮತಿ ಇರಾನಿಯನ್ನು ಮುಂದಿಟ್ಟುಕೊಂಡು ಆರೆಸ್ಸೆಸ್ ವಿಶ್ವವಿದ್ಯಾನಿಲಯಗಳನ್ನು ನಿಯಂತ್ರಿಸಲು ಆರಂಭಿಸಿತು.ಆದರೆ ಇದನ್ನು ಪ್ರಬಲವಾಗಿ ಪ್ರತಿಭಟಿಸಿದ್ದು ಸಂಘಟಿತ ದಲಿತ, ಕಮ್ಯುನಿಸ್ಟ್‌ವಿದ್ಯಾರ್ಥಿ ಸಂಘಟನೆಗಳು.ಪ್ರಗತಿಪರವಾಗಿ ಆಲೋಚಿಸುವ ವಿದ್ಯಾರ್ಥಿಗಳೆಲ್ಲರೂ ವಿಶ್ವವಿದ್ಯಾನಿಲಯದ ಘನತೆಯನ್ನು ಕುಗ್ಗಿಸುವ ಆರೆಸ್ಸೆಸ್ ನಾಯಕರ ಸಂಚಿನ ವಿರುದ್ಧ ಧ್ವನಿಯೆತ್ತುತ್ತಿದ್ದಾರೆ.

ಪರಿಣಾಮವಾಗಿ, ತನ್ನ ವಿರುದ್ಧ ಧ್ವನಿಯೆತ್ತುವ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾನಿಲಯಗಳನ್ನೇ ದೇಶದ್ರೋಹಿಯೆಂದು ಕರೆದು ಅದರ ಕೈಗೆ ಬೇಡಿ ತೊಡಿಸುವುದಕ್ಕೆ ಆಳುವವರು ಹೊರಟಿದ್ದಾರೆ. ಹೊಸ ಆಲೋಚನೆಗಳು, ವಿಚಾರಗಳು, ಹೋರಾಟಗಳೆಲ್ಲವೂ ಆರೆಸ್ಸೆಸ್ ಪ್ರಕಾರ ದೇಶದ್ರೋಹವಾಗಿದೆ. ಮುಂದಿನ ದಿನಗಳಲ್ಲಿ ದೇಶದ್ರೋಹ ಮತ್ತು ದೇಶಪ್ರೇಮ ಪದಗಳು ತನ್ನ ಅರ್ಥ, ವ್ಯಾಖ್ಯಾ ನಗಳನ್ನು ಅದಲು ಬದಲಾಗಿಸಲಿವೆ. ಆರೆಸ್ಸೆಸ್ ಮತ್ತು ಅದರ ಪರಿವಾರ ನಡೆಸುತ್ತಿರುವ ದಾಂಧಲೆ ಯಿಂದಾಗಿ ದೇಶಪ್ರೇಮಿ ಎನಿಸಲು ಮುಜುಗರ ವಾಗುವಂತಹ, ದೇಶದ್ರೋಹಿಯೆನ್ನಲು ಹೆಮ್ಮೆ ಪಡುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಹಿರಿಯ ಪತ್ರಕರ್ತರಾಗಿರುವ ರಾಜ್‌ದೀಪ್ ಸರ್ದೇಸಾಯಿ ಸಹಿತ ಹಲವು ಚಿಂತಕರು ತಮ್ಮನ್ನು ತಾವೇ ‘ದೇಶದ್ರೋಹಿ’ಗಳು ಎಂದು ಘೋಷಿಸಿಕೊಂಡು ಆರೆಸ್ಸೆಸ್‌ನ ಸಂಚಿಗೆ ಸವಾಲು ಹಾಕಿದ್ದಾರೆ.

 ಅತ್ಯಂತ ವಿಷಾದನೀಯವೆಂದರೆ, ಶಿವಮೊಗ್ಗದ ಕುವೆಂಪು ವಿಶ್ವವಿಶ್ವವಿದ್ಯಾನಿಲಯವನ್ನೂ ‘ದೇಶ ದ್ರೋಹಿ’ ಪಟ್ಟಿಗೆ ಸೇರಿಸುವ ಧೈರ್ಯವನ್ನು ಸಂಘಪರಿವಾರ ಮಾಡಿರುವುದು. ರೋಹಿತ್ ವೇಮುಲಾ ಎನ್ನುವ ದಲಿತ ಸಂಶೋಧಕನ ಆತ್ಮಹತ್ಯೆ, ದಲಿತ ವಿದ್ಯಾರ್ಥಿಗಳ ಮೇಲೆ ಪ್ರಕರಣ, ಜೆಎನ್‌ಯು ವಿರುದ್ಧ ಸರಕಾರದ ದಾಳಿ ಇವುಗ ಳನ್ನು ವಿರೋಧಿಸಿ ಕುವೆಂಪು ವಿಶ್ವವಿದ್ಯಾನಿಲಯದ ಹಿರಿಯ ಉಪನ್ಯಾಸಕರು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಇದೀಗ ಬಿಜೆಪಿ ಮತ್ತು ಸಂಘಪರಿವಾರ ಜೊತೆ ಸೇರಿ ಕುವೆಂಪು ವಿಶ್ವವಿದ್ಯಾನಿಲಯವನ್ನು ‘ದೇಶದ್ರೋಹಿ’ಯೆಂದು ಸಾರ್ವಜನಿಕವಾಗಿ ಕರೆದು, ಅವಮಾನಿಸಿದೆ. ಹಲವು ದಶಕಗಳಿಂದ ಸೇವೆಸಲ್ಲಿಸುತ್ತಿರುವ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಶ್ರಯ ತಾಣವಾಗಿರುವ, ಕುವೆಂಪು ಅವರಂತಹ ಮಹೋನ್ನತ ಕವಿಯ ಹೆಸರನ್ನು ಹೊತ್ತಿರುವ ವಿಶ್ವವಿದ್ಯಾನಿಲಯ ಮತ್ತು ಅದರ ಉಪನ್ಯಾಸಕರನ್ನು ದೇಶದ್ರೋಹಿ ಎಂದು ಕರೆದ ದೇಶದ್ರೋಹಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಅತ್ಯಗತ್ಯವಾಗಿದೆ. ಈ ಕುವೆಂಪು ವಿಶ್ವವಿದ್ಯಾನಿಲಯಗಳಲ್ಲೂ ಸಂಘಪರಿವಾರ ತನ್ನ ಚಟುವಟಿಕೆಗಳನ್ನು ನಡೆಸಲು ಹವಣಿಸಿ ಈಗಾಗಲೇ ವಿಫಲವಾಗಿದೆ. ಮನುವಾದಿ ಚಿಂತಕ ಬೆಲ್ಜಿಯಂನ ಬಾಲಗಂಗಾಧರ ಎಂಬವರ ನೇತೃತ್ವದಲ್ಲಿ, ಉಪನ್ಯಾಸಕ ವೇಷದಲ್ಲಿದ್ದ ಕೆಲವು ಸಂಘಪರಿವಾರದ ವ್ಯಕ್ತಿಗಳು ಇಲ್ಲಿ ಬೇರೂರಲು ಹವಣಿಸಿ ಈಗಾಗಲೇ ವಿಫಲರಾಗಿದ್ದಾರೆ.

ಆದರೂ ಬೇರೆ ಬೇರೆ ರೂಪದಲ್ಲಿ ಈ ವಿಶ್ವವಿದ್ಯಾನಿಲಯವನ್ನು ನಿಯಂತ್ರಿಸಲು ಸಂಘಪರಿವಾರ ಹವಣಿಸುತ್ತಲೇ ಇದೆ. ಆದರೆ ಇಲ್ಲಿರುವ ಪ್ರಖರ ಚಿಂತಕರು, ಉಪನ್ಯಾಸಕರ ಕಾರಣದಿಂದ ಅವರ ಪ್ರಯತ್ನವೆಲ್ಲ ವಿಫಲವಾಗುತ್ತಾ ಬಂದಿದೆ. ಪರಿಣಾಮವಾಗಿ, ಇದೀಗ ಜೆಎನ್‌ಯು ಪರವಾಗಿ ಧ್ವನಿ ಎತ್ತಿದ ನೆಪವನ್ನು ಮುಂದಿಟ್ಟುಕೊಂಡು ಕುವೆಂಪು ವಿವಿ ವಿರುದ್ಧ ಸಂಘಪರಿವಾರ ಮತ್ತು ಬಿಜೆಪಿ ಟೀಕೆ ಮಾಡ ತೊಡಗಿದೆ.

ಭಾರತ ಸಂಕ್ರಮಣ ಘಟ್ಟದಲ್ಲಿದೆ. ಇಲ್ಲಿ ದೇಶದ್ರೋಹಿಗಳೆಲ್ಲ ದೇಶಪ್ರೇಮಿಯ ವೇಷ ತೊಟ್ಟು, ದೇಶದ ನಾಶಕ್ಕೆ ಬುನಾದಿ ಹಾಕುತ್ತಿದ್ದಾರೆ.ದಲಿತರ ದೌರ್ಜನ್ಯದ ವಿರುದ್ಧ ಮಾತನಾಡಿದರೆ ಅದು ದೇಶದ್ರೋಹ. ಕೋಮು ವಿಭಜನೆಯ ವಿರುದ್ಧ ಮಾತನಾಡಿದರೆ, ರೈತರ ಆತ್ಮಹತ್ಯೆಯ ಕುರಿತಂತೆ ಮಾತನಾಡಿದರೆ, ಅಂಬಾನಿ, ಅದಾನಿಗಳ ವಿರುದ್ಧ ಮಾತನಾಡಿದರೆ ದೇಶದ್ರೋಹ ಎಂದು ಈ ನಕಲಿ ದೇಶಪ್ರೇಮಿಗಳು ವಾದ ಮಾಡುತ್ತಿದ್ದಾರೆ. ಡಬ್ಲುಟಿಒ ವಿರುದ್ಧ ಮಾತನಾಡಿದರೆ ಅದು ಭಯೋತ್ಪಾದನೆಯಾಗುತ್ತದೆ. ಪರಿಸರದ ಪರವಾಗಿ ಮಾತನಾಡಿದರೆ ಅದು ದೇಶದ್ರೋಹವಾಗುತ್ತದೆ. ವೌಢ್ಯದ ವಿರುದ್ಧ ಮಾತನಾಡಿದರೂ ಭಯೋತ್ಪಾದನೆಯಾಗುತ್ತದೆ. ಯಾವುದೇ ಸ್ವಾತಂತ್ರ ಹೋರಾಟದ ಹಿನ್ನೆಲೆಯೇ ಇಲ್ಲದ ಈ ಸಂಘಟನೆಗಳು ಇಂದು ದೇಶಪ್ರೇಮಿ, ದೇಶದ್ರೋಹಿಗಳೆಂಬ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಲು ಹೊರಟಿರುವುದೇ ವರ್ತಮಾನದ ವ್ಯಂಗ್ಯ. ಗಾಂಧಿಯನ್ನು ಕೊಂದ ಸಂಘಟನೆಯನ್ನು ಪ್ರತಿನಿಧಿಸುವ, ಹಲವು ಹತ್ಯಾಕಾಂಡಗಳ ರಕ್ತವನ್ನು ಮೆತ್ತಿಕೊಂಡಿರುವ ಸಂಘಟನೆಗಳು ಚಿಂತನೆಯ ಆಗರಗಳಾಗಿರುವ ವಿಶ್ವವಿದ್ಯಾನಿಲಯಗಳನ್ನು ನಾಶ ಮಾಡಲು ಹೊರಟಿರುವುದು ಭಾರತದ ಭವಿಷ್ಯದಲ್ಲಿ ಭಾರೀ ಅನಾಹುತಗಳನ್ನು ತಂದೊಡ್ಡಲಿವೆೆ.ಇತಿಹಾಸದಲ್ಲಿ ನಲಂದಾ ವಿಶ್ವವಿದ್ಯಾನಿಲಯದ ಮೇಲೆ ಶತ್ರುಗಳು ದಾಳಿ ಮಾಡಿರುವುದನ್ನು ನಾವು ನೋಡಿದ್ದೇವೆ.ಇಂದು ಇತಿಹಾಸ ಪುನರಾವರ್ತನೆಯಾಗಿದೆ. ಮತ್ತೆ ಶತ್ರುಗಳು ಬೇರೆ ವೇಷದಲ್ಲಿ ನಮ್ಮ ವಿಶ್ವವಿದ್ಯಾನಿಲಯವನ್ನು ಧ್ವಂಸ ಮಾಡಲು ಸಜ್ಜಾಗಿದ್ದಾರೆ.ಸಕಲ ಭಾರತೀಯರು ಒಂದಾಗಿ, ತಮ್ಮೆಲ್ಲ ಶಕ್ತಿಯನ್ನು ಒಟ್ಟಾಗಿ ಬಳಸಿ ಇದನ್ನು ಪ್ರತಿಭಟಿಸಬೇಕಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X