Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಚುಟುಕು ಸುದ್ದಿಗಳು

ಚುಟುಕು ಸುದ್ದಿಗಳು

ವಾರ್ತಾಭಾರತಿವಾರ್ತಾಭಾರತಿ19 Feb 2016 11:23 PM IST
share

ವಿಕಲಚೇತನರ ಸಂಸ್ಥೆ, ಶಾಲೆಗಳ ನೋಂದಣಿಗೆ ಸೂಚನೆ
ಮಂಗಳೂರು, ಫೆ.19: ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಥವಾ ವಿಕಲಚೇತನರ ಕಲ್ಯಾಣ ಕಾರ್ಯಕ್ರಮಗಳಿಗೆ ಅನುದಾನ ಪಡೆದು ಅಥವಾ ಅನುದಾನ ಪಡೆಯದೆ ಅನುಷ್ಠಾನಗೊಳಿಸುವ ಸಂಸ್ಥೆಗಳು, ಶಾಲೆಗಳು ನೋಂದಣಿ ಮಾಡಿಸಿಕೊಳ್ಳಲು ಸೂಚಿಸಲಾಗಿದೆ.
ತಪ್ಪಿದಲ್ಲಿ ಆ ಶಾಲೆ-ಸಂಸ್ಥೆಗಳನ್ನು ಮುಚ್ಚಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಅನುಮತಿ ಪಡೆಯದಿರುವ ಸಂಸ್ಥೆ ಹಾಗೂ ವಿಶೇಷ ಶಾಲೆಗಳು ದ.ಕ. ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು, ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಪಂಚಾಯತ್ ಕಟ್ಟಡ ಸಂಕೀರ್ಣ ಕೊಟ್ಟಾರ, ಮಂಗಳೂರು. ದೂ.ಸಂ.: 0824-2458173. ಈ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

ಪರೀಕ್ಷೆ ಬರೆಯಲು ಅವಕಾಶ
ಮಂಗಳೂರು, ಫೆ.19: ಬೆಂಗಳೂರಿನ ತಾಂತ್ರಿಕ ಪರೀಕ್ಷಾ ಮಂಡಳಿಯ ಸುತ್ತೋಲೆಯಂತೆ ಸಿ03 ಪಠ್ಯಕ್ರಮದಲ್ಲಿನ ಸಮಾನಾಂತರವಿಲ್ಲದ ವಿಷಯಗಳಿಗೆ ಪರೀಕ್ಷೆ ಬರೆಯಲು 2016ರ ಎಪ್ರಿಲ್ ಪರೀಕ್ಷೆಯಲ್ಲಿ ಒಂದು ಅಂತಿಮ ಅವಕಾಶ ನೀಡಲಾಗಿದೆ. ಸಮಾನಾಂತರವಿಲ್ಲದ ವಿಷಯಗಳನ್ನು ತೇರ್ಗಡೆಯಾಗಲು ಬಾಕಿಯಿರುವ ಅಭ್ಯರ್ಥಿಗಳು 1,000 ರೂ. ಹೆಚ್ಚುವರಿ ಶುಲ್ಕ ಸಹಿತ ಫೆ.29ರೊಳಗೆ ಹೆಸರು ನೊಂದಾಯಿಸಿಕೊಳ್ಳಬಹುದು. ದಂಡ ಸಹಿತ ನೋಂದಾಯಿಸಲು ಮಾರ್ಚ್ 22 ಕೊನೆಯ ದಿನ ಎಂದು ಕೆಪಿಟಿ ಪ್ರಾಂಶುಪಾಲರ ಪ್ರಕಟನೆ ತಿಳಿಸಿದೆ.

ಇಂದು ಪ್ರೊ.ಕೆ.ಪಿ.ರಾವ್‌ರಿಂದ ‘ವೇದ’ ಉಪನ್ಯಾಸ
ಮಣಿಪಾಲ, ಫೆ.19: ಮಣಿಪಾಲ ವಿವಿಯ ಗಾಂಧಿ ಮತ್ತು ಶಾಂತಿ ಅಧ್ಯಯನ ಕೇಂದ್ರವು ಚಿಂತಕ ಪ್ರೊ. ಕೆ. ಪಿ. ರಾವ್‌ರಿಂದ ‘ವೇದಗಳ ಅಧ್ಯಯನ: ಒಂದು ಅವಲೋಕನ’ ಎಂಬ ವಿಚಾರದ ಕುರಿತು ಫೆ.20ರ ಶನಿವಾರ ಸಂಜೆ 4:30ಕ್ಕೆ ಮಣಿಪಾಲ ಅಂಚೆ ಕಚೇರಿಯ ಹಿಂಭಾಗದಲ್ಲಿರುವ ಹಳೆ ಟ್ಯಾಪ್ಮಿ ಕಟ್ಟಡದ ಪ್ರಥಮ ಮಹಡಿಯ ಎಲ್‌ಎಚ್1 ಸಭಾಂಗಣದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಗಾಂಧಿ ಮತ್ತು ಶಾಂತಿ ಅಧ್ಯಯನ ಪೀಠದ ನಿರ್ದೇಶಕ ಪ್ರೊ.ವರದೇಶ ಹಿರೇಗಂಗೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಫೆ.25ರಿಂದ ಕ್ರೀಡಾಶಾಲೆಗೆ ಆಯ್ಕೆ 
ಮಂಗಳೂರು, ಫೆ.19: ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2016-17ನೆ ಸಾಲಿಗೆ ಜಿಲ್ಲಾ ಕ್ರೀಡಾಶಾಲೆ/ವಸತಿ ನಿಲಯಗಳಿಗೆ ಅಭ್ಯರ್ಥಿಗಳನ್ನು (ಬಾಲಕರು, ಬಾಲಕಿಯರು) ಫೆ.25 ರಿಂದ 28ರವರೆಗೆ ಬೆಳಗ್ಗೆ 10ರಿಂದ ಅಪರಾಹ್ನ 1:30ರವರೆಗೆ ನಗರದ ಮಂಗಳಾ ಕ್ರೀಡಾಂಗಣದಲ್ಲಿ ಆಯ್ಕೆ ಮಾಡಲಾಗುವುದು.
 ಜಿಲ್ಲಾ ಕ್ರೀಡಾ ಶಾಲೆಗೆ ಆಯ್ಕೆ ಬಯಸುವ ಕ್ರೀಡಾಪಟುಗಳು ಈ ವರ್ಷ 4ನೆ ತರಗತಿಯಲ್ಲಿ ಕಲಿಯುತ್ತಿದ್ದು, 2016ಕ್ಕೆ 5ನೆ ತರಗತಿಗೆ ಪ್ರವೇಶ ಪಡೆಯಲು ಅ    ರ್ಹತೆ ಪಡೆದು ಜೂ.2016ಕ್ಕೆ 11 ವರ್ಷದೊಳಗಿರಬೇಕು. ತಾಲೂಕು ಕೇಂದ್ರಗಳಲ್ಲಿ ನಡೆದ ಆಯ್ಕೆಯಲ್ಲಿ ಭಾಗವಹಿಸದೆ ಇರುವ ಕ್ರೀಡಾಪಟುಗಳು ಕೂಡಾ ಭಾಗವಹಿಸಬಹುದು. ಆಸಕ್ತ ಅಭ್ಯರ್ಥಿಗಳು ಫೆ.25ರಿಂದ 28ರವರೆಗೆ ಬೆಳಗ್ಗೆ 10ಕ್ಕೆ ಮಂಗಳಾ ಕ್ರೀಡಾಂಗಣದಲ್ಲಿ ಹಾಜರಿರುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.


ಮಳವೂರು ಗ್ರಾಮ ಸಭೆ
ಮಂಗಳೂರು, ಫೆ.19: ಮಳವೂರು ಗ್ರಾಪಂನ 2015-16ನೆ ಸಾಲಿನ ವಿಶೇಷ ಮಹಿಳಾ ಗ್ರಾಮಸಭೆಯು ಮಾ.8ರಂದು ಬೆಳಗ್ಗೆ 10:30ಕ್ಕೆ ಮಳವೂರು ಗ್ರಾಪಂ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ.
ಮಳವೂರು ಗ್ರಾಪಂನ 2015-16ನೆ ಸಾಲಿನ ಮಕ್ಕಳ ಗ್ರಾಮಸಭೆಯು ಮಾ.1ರಂದು ಬೆಳಗ್ಗೆ 10:30ಕ್ಕೆ ಕೆಂಜಾರಿನ ದ.ಕ ಜಿಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ತಾ.ಪಂ.ಗೆ ಆಡಳಿತಾಧಿಕಾರಿ ನೇಮಕ
ಕಾರ್ಕಳ, ಫೆ.19: ಕಾರ್ಕಳ ತಾ.ಪಂ.ಗೆ ಆಡಳಿತಾಧಿಕಾರಿಯಾಗಿ ಉಡುಪಿ ಜಿ.ಪಂ.ಉಪಕಾರ್ಯದರ್ಶಿ ಶ್ರೀನಿವಾಸ್ ಅವರನ್ನು ನೇಮಕ ಮಾಡಲಾಗಿದೆ.


ಫೆ.26-28: ಅಡ್ಕಾರು ಜಾತ್ರೆ
ಸುಳ್ಯ, ಫೆ.19: ಜಾಲ್ಸೂರು ಗ್ರಾಮದ ಮಾಯಿಲಕೋಟೆ ಅಂಜನಾದ್ರಿ ಪ್ರಸನ್ನಾಂಜನೇಯ ಸ್ವಾಮಿ ಹಾಗೂ ಗುಳಿಗರಾಜ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವವು ಫೆ.26ರಿಂದ 28ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಕ್ಷೇತ್ರದ ತಂತ್ರಿ ಪುರೋಹಿತ ನಾಗರಾಜ್ ಭಟ್ ಹಾಗೂ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಮಹಾಲಿಂಗ ಮಣಿಯಾಣಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜಾತ್ರೆಯ ಪ್ರಯುಕ್ತ ನೀಡಲಾಗುವ ಅಂಜನಾದ್ರಿ ಪುರಸ್ಕಾರಕ್ಕೆ ಉಪೇಂದ್ರ ಕಾಮತ್ ಹಾಗೂ ಗೋಪಾಡ್ಕರ್ ಆಯ್ಕೆಗೊಂಡಿದ್ದಾರೆ ಎಂದು ಅವರು ಹೇಳಿದರು.


ಧಾರ್ಮಿಕ ಕಾರ್ಯಕ್ರಮ
ಮೂಡುಬಿದಿರೆ, ಫೆ,.19: ಮೂಡುಬಿದಿರೆಯ ಪಡುಬಸದಿ ಭಗವಾನ್ ವಿಮಲ-ಅನಂತ-ಧರ್ಮನಾಥ ಸ್ವಾಮಿಯ ಹಾಗೂ ಬ್ರಹ್ಮ ಯಕ್ಷರ ಬಿಂಬ ಪ್ರತಿಷ್ಠೆಯ ವಾರ್ಷಿಕೋತ್ಸವವು ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯ ಸಾನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು.


ಪೂಜಾರಿ ಹೇಳಿಕೆಗೆ ಪರ್ಕಳ ಕಾಂಗ್ರೆಸ್ ಖಂಡನೆ
ಉಡುಪಿ, ಫೆ.19: ಕಾಂಗ್ರೆಸ್‌ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಮೂಲಕ ಮುಖ್ಯಮಂತ್ರಿಯ ವಾಚ್ ಮತ್ತು ಜಯಪ್ರಕಾಶ್ ಹೆಗ್ಡೆ ಬಗ್ಗೆ ನೀಡಿರುವ ಹೇಳಿಕೆಗೆ ಪರ್ಕಳ ಕಾಂಗ್ರೆಸ್ ಕಟುವಾಗಿ ಟೀಕಿಸಿದೆ. ಮುಖ್ಯಮಂತ್ರಿಯ ವಾಚ್ ಕುರಿತು ಮಾತನಾಡಿ ಕಾಲಹರಣ ಮಾಡುವ ಬದಲು ಕಾರ್ಯಕರ್ತರೊಂದಿಗೆ ಸೇರಿ ಉಡುಪಿಯಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಬಹುದಿತ್ತು. ಜಯಪ್ರಕಾಶ್ ಹೆಗ್ಡೆ ಕುರಿತ ಸಲಹೆಯನ್ನು ಹೈಕಮಾಂಡ್‌ಗೆ ಯಾಕೆ ನೀಡಲಿಲ್ಲ? ಎಂದು ಪ್ರಶ್ನಿಸಿದೆ.
ಪೂಜಾರಿ ಜತೆ ವೇದಿಕೆ ಹಂಚಿಕೊಂಡ ಜಿಲ್ಲಾ ಹಿಂದುಳಿದ ನಾಯಕರು ಮತ್ತಿತರ ಕಾಂಗ್ರೆಸ್ ಮುಖಂಡರನ್ನು ಪಕ್ಷದ ಹುದ್ದೆಯಿಂದ ಅಮಾನತುಗೊಳಿಸಬೇಕು ಎಂದು ಪರ್ಕಳ ಕಾಂಗ್ರೆಸ್ ಮುಖಂಡರಾದ ಮೋಹನದಾಸ್ ನಾಯಕ್, ಗಣೇಶ್ ರಾಜ್ ಸರಳೇಬೆಟ್ಟು, ಕಾಂಗ್ರೆಸ್ ಕಾರ್ಯದರ್ಶಿ ಜಯಶೆಟ್ಟಿ ಬನ್ನಂಜೆ, ಸದಾನಂದ ಪೂಜಾರಿ ಪರ್ಕಳ, ಗಿಡ್ಡಣ್ಣ ಪೂಜಾರಿ ಒತ್ತಾಯಿಸಿದ್ದಾರೆ.


ಕಯ್ಯರು ಓಪತ್ತಿಮೂಲೆ: ಪುರಾತನ ದೈವಸ್ಥಾನಗಳ ಪತ್ತೆ
ಮಂಜೇಶ್ವರ, ಫೆ.19: ಮಂಜೇಶ್ವರ ತಾಲೂಕಿನ ಕಯ್ಯರು ಗ್ರಾಮದ ಓಪತ್ತಿಮೂಲೆ ಎಂಬಲ್ಲಿ ಸುಮಾರು 30 ಎಕ್ರೆ ಸ್ಥಳವನ್ನು ಸರಕಾರದ ಜೀರೋಲ್ಯಾಂಡ್ ಯೋಜನೆಯಲ್ಲಿ ಫಲಾನುಭವಿಗಳಿಗೆ ತಲಾ 3 ಸೆಂಟ್ಸ್‌ನಂತೆ ವಿತರಣೆ ಮಾಡಲಾದೆ. ಇದೀಗ ಈ ಜಾಗದ ಕಾಡು-ಪೊದೆಗಳನ್ನು ಕಡಿದಾಗ ಪುರಾತನ ಪುಣ್ಯ ದೈವಸ್ಥಾನಗಳಾದ ನಾಗಬನ, ಕೊರತಿ ದೈವಬನ ಮತ್ತು ಕೊರಗಜ್ಜ ಕಟ್ಟೆ, ಮೂವರು ಮುಗೇರ ದೈವಗಳ ಬನಗಳ ಅವಶೇಷಗಳು ಪತ್ತೆಯಾಗಿವೆ. ಹಿಂದೆ ಪ್ರತಿಷ್ಠಿತ ಬ್ರಾಹ್ಮಣ ಕುಟುಂಬದ ಸ್ವಾಧೀನದಲ್ಲಿದ್ದ ಈ ಸ್ಥಳದಲ್ಲಿ ದೈವಗಳಿಗೆ ಪರ್ವ ನಡೆಯುತ್ತಿತ್ತೆಂಬುದಾಗಿ ಸ್ಥಳೀಯರು ಹೇಳುತ್ತಿದ್ದಾರೆ. ಕಾಡಿನೊಳಗೆ ಪತ್ತೆಯಾದ ದೈವಗಳ ಬನಗಳನ್ನು ರಕ್ಷಿಸಲು ಬನ ಸಂರಕ್ಷಣ ಸಮಿತಿ ರಚಿಸಲು ಮುಂದಾಗಿದ್ದಾರೆ. ಈ ಸ್ಥಳವನ್ನು ಬನಗಳ ಅಭಿವೃದ್ಧಿಗೆ ಕಾದಿರಿಸಬೇಕೆಂಬುದಾಗಿ ಸ್ಥಳೀಯರು ಒತ್ತಾಯಿಸಿದ್ದಾರೆ.
*ಅನರ್ಹರಿಗೆ ಸ್ಥಳ ವಿತರಣೆ : ಭೂರಹಿತರಿಗೆ ಸರಕಾರದ ಜೀರೋ ಲ್ಯಾಂಡ್ ಯೋಜನೆಯಡಿ ಬಡವರಿಗೆ ಮನೆ ನಿರ್ಮಿಸಲು ತಲಾ 3 ಸೆಂಟ್ಸ್ ಸ್ಥಳ ವಿತರಣೆ ಎಂದಿದ್ದರೂ ಈ ಪಟ್ಟಿಯಲ್ಲಿ ಬಹಳಷ್ಟು ಮಧ್ಯಮ ವರ್ಗದವರು, ಶ್ರೀಮಂತರು ಸೇರ್ಪಡೆಗೊಂಡಿರುವ ಆರೋಪವಿದೆ.ಈ ಕುರಿತು ಯುವ ರಾಜಕೀಯ ಸಂಘಟನೆಯ ನಾಯಕರು ಕಂದಾಯ ಸಚಿವರಿಗೆ ಮತ್ತು ಕಂದಾಯ ಇಲಾಖೆಯ ಉನ್ನತ ಅಧಿಕಾರಿಗೆ ದೂರು ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂಬ ದೂರು ಕೇಳಿ ಬರುತ್ತಿವೆ.


ಕೂರ್ಗ್ ಗೈಸ್ ಕೊಯಿನಾಡಿಗೆ ತೆಕ್ಕಿಲ್ ವಾಲಿಬಾಲ್ ಪ್ರಶಸ್ತಿ
ಸುಳ್ಯ, ಫೆ.19: ತೆಕ್ಕಿಲ್ ಮಾದರಿ ಹಿರಿಯ ಪ್ರಾಥಮಿಕ ಹಾಗು ಆಂಗ್ಲಮಾಧ್ಯಮ ಪ್ರೌಢ ಶಾಲೆ ಬೀಜದ ಕಟ್ಟೆ ಗೂನಡ್ಕ ಇದರ ದಶಮಾನೋತ್ಸವದ ಪ್ರಯುಕ್ತ ಪುರುಷರ ವಾಲಿಬಾಲ್ ಪಂದ್ಯಾಟವು ಗೂನಡ್ಕ ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆ ಕ್ರೀಡಾಂಗಣದಲ್ಲಿ ಜರಗಿತು.
    ಕ್ರೀಡಾಕೂಟದಲ್ಲಿ ಹತ್ತು ತಂಡಗಳು ಭಾಗವಹಿಸಿದ್ದವು. ಅಂತಿಮ ಪಂದ್ಯದಲ್ಲಿ ಕೂರ್ಗ್‌ಗೈಸ್ ಕೊಯಿನಾಡು ತಂಡವು ಫ್ರೆಂಡ್ಸ್ಕ್ಲಬ್ ಗೂನಡ್ಕ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡುತು.
ಪಂದ್ಯಕೂಟವನ್ನು ರಾಷ್ಟ್ರೀಯ ವಾಲಿಬಾಲ್ ತೀರ್ಪುಗಾರ ಮೋಹಿತ್ ಏನೆಕಲ್ಲು ಉದ್ಘಾಟಿಸಿದರು. ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆಯ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ಅಧ್ಯಕ್ಷತೆ ವಹಿಸಿದ್ದರು.ಅತಿಥಿಗಳಾಗಿ ರಾಜ್ಯಮಟ್ಟದ ವಾಲಿಬಾಲ್ ತೀರ್ಪುಗಾರ ಮನೋಜ್ ಅಡ್ಕಾರ್ ಭಾಗವ ಹಿಸಿದ್ದರು.
 ವೇದಿಕೆಯಲ್ಲಿ ಕೃಷ್ಣಬಳಗ ಗೂನಡ್ಕದ ಸದಸ್ಯರಾದ ಪರಮೇಶ್ವರ ಆಚಾರ್ಯ, ವಾಸು ಆಚಾರ್ಯ, ಸಮಾಜ ಸೇವಕ ಎಸ್.ಕೆ. ಹನೀಫ್, ಕ್ರೀಡಾ ಸಮಿತಿಯ ಅಧ್ಯಕ್ಷ ರಾಮಕೃಷ್ಣ ಸಂಪಾಜೆ, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕ ದಾಮೋದರ್ ಕೆ. ಮತ್ತು ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಹರಿಣಾಕ್ಷಿ ಕೆ.ಎಸ್ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಕಿ ರಮ್ಯಾ ಸ್ವಾಗತಿಸಿದರು. ಸಹಶಿಕ್ಷಕಿ ತೃಪ್ತಾ ವಂದಿಸಿದರು. ಧನ್ಯಾಶ್ರೀ ಮತ್ತು ರೇಖಾ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಸಮಾರಂಭದಲ್ಲಿ ನಿವೃತ್ತ ಫಾರೆಸ್ಟರ್ ವೀರಪ್ಪಗೌಡಹಾಗೂ ನವೀನ್ ಕುಮಾರ್ ಗೂನಡ್ಕ ಬಹುಮಾನ ವಿತರಿಸಿದರು
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಯು.ಕೆ ತೀರ್ಥರಾಮ್, ತೀರ್ಪುಗಾರ ರಾದ ಮೋಹಿತ್ ಏನೆಕಲ್,ಅಶ್ರಫ್ ಗುಂಡಿ,ರಾಮಕೃಷ್ಣ ಸಂಪಾಜೆ, ಮುಹಮ್ಮದ್ ಕುಂಞಿ ಕೊಯಿನಾಡು, ಕಿಶೋರ್ ಕಲ್ಲುಗಂಡಿ,ಮುಖ್ಯಶಿಕ್ಷಕ ದಾಮೋದರ ಮಾಸ್ತರ್,ಹರಿಣಾಕ್ಷಿ ಉಪಸ್ಥಿತರಿದ್ದರು.


 ಸಬಲೀಕರಣ ವಿಚಾರ ಸಂಕಿರಣ
ಪುತ್ತೂರು, ಫೆ.19: ಆಧುನಿಕ ಭಾರತೀಯ ಮಹಿಳೆಯರು ಶಿಕ್ಷಣ ಮತ್ತು ಕೌಶಲಗಳನ್ನು ಬಳಸಿ, ಸಾಮಾಜಿಕ ಮತ್ತು ಭಾವನಾತ್ಮಕ ನಿರ್ಬಂಧಗಳ ಹಿಡಿತದಿಂದ ಹೊರಬಂದು, ದೇಶದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ರಾಜ್ಯ ಹೈಕೋರ್ಟ್‌ನ ವಕೀಲೆ ಸುಶೀಲಾ ಹೇಳಿದರು.
ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮಹಿಳಾ ಸಬಲೀಕರಣ ಘಟಕದ ಆಶ್ರಯದಲ್ಲಿ ‘ಸಬಲೀಕರಣ  ದೃಷ್ಟಿಕೋನಗಳು ಮತ್ತು ಭವಿಷ್ಯ’ ಕುರಿತು ಕಾಲೇಜು ಸಭಾಂಗಣದಲ್ಲಿ ಜರಗಿದ ವಿಚಾರಗೋಷ್ಠಿಯಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯ ಪ್ರೊ.ಲಿಯೊ ನೊರೊನ್ಹ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಸಬಲೀಕರಣ ಘಟಕದ ಸಂಚಾಲಕಿ ಪ್ರೊ.ಶ್ರೀಮಣಿ ಸ್ವಾಗತಿಸಿದರು. ಪ್ರೊ. ಕಮಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು.

ಕುಷ್ಠರೋಗ ನಿವಾರಣಾ ಕಾರ್ಯಕ್ರಮ
ಕಾರ್ಕಳ, ಫೆ.19: ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಕ್ರೈಸ್ಟ್‌ಕಿಂಗ್ ಪ.ಪೂ. ಕಾಲೇಜಿನ ಆಶ್ರಯದಲ್ಲಿ ರಾಷ್ಟ್ರೀಯ ಹುತಾತ್ಮರ ದಿನಾಚರಣೆ ಹಾಗೂ ಕುಷ್ಠರೋಗ ನಿವಾರಣಾ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಸಂಸ್ಥೆಯ ಪ್ರಾಚಾರ್ಯ ಪ್ರೊ. ನಾರಾಯಣ ಶೇಡಿಕಜೆ ಉದ್ಘಾಟಿಸಿ ಮಾತನಾಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಉಪನ್ಯಾಸಕಿ ಆಶಾ ಭಂಡಾರಿ ಸ್ವಾಗತಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ವೈದ್ಯಕೇತರ ಮೇಲ್ವಿಚಾರಣಾಧಿಕಾರಿ ಸುರೇಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಯುವ ಪ್ರತಿಭೆಯನ್ನು ಪ್ರೋತ್ಸಾಹಿಸಿ: ಅನಂತ ಜಿ. ಪೈ
ಕಾರ್ಕಳ, ಫೆ.19:ಗ್ರಾಮೀಣ ಪ್ರದೇ ಶದಲ್ಲಿ ಅನೇಕ ಮಂದಿ ಪ್ರತಿ ಭಾವಂತರಿದ್ದಾರೆ. ಅವರಿಗೆ ಸೂಕ್ತ ಅವಕಾಶ ದೊರೆತಾಗ ಮಾತ್ರ ಭಾರತೀಯ ಸಂಗೀತವು ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಕಾರ್ಕಳ ಶಾಸ್ತ್ರೀಯ ಸಂಗೀತ ಸಭಾ ಯುವ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಶಾಸ್ತ್ರೀಯ ಸಂಗೀತ ಸಭಾದ ಗೌರವಾಧ್ಯಕ್ಷ ಅನಂತ ಜಿ. ಪೈ ಹೇಳಿದ್ದಾರೆ.ಕಾರ್ಕಳ ಶಾಸ್ತ್ರೀಯ ಸಂಗೀತ ಸಭಾವು ಏರ್ಪಡಿಸಿದ ರಾಷ್ಟ್ರೀಯ ಸಂಗೀತ ಮಹೋತ್ಸವದ ಸಮಾ ರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಸಭಾದ ಅಧ್ಯಕ್ಷ ಎಸ್.ನಿತ್ಯಾನಂದ ಪೈ ಅಧ್ಯಕ್ಷತೆ ವಹಿಸಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X