ಕೆಲವು ನಿರಾಶ್ರಿತರನ್ನು ಕೊಡಿ: ಆಸ್ಟ್ರೇಲಿಯಕ್ಕೆ ನ್ಯೂಝಿಲ್ಯಾಂಡ್
ಸಿಡ್ನಿ, ಫೆ. 19: ಪೆಸಿಫಿಕ್ ದ್ವೀ ರಾಷ್ಟ್ರಗಳಲ್ಲಿರುವ ಬಂಧನ ಶಿಬಿರಗಳಿಗೆ ಆಸ್ಟ್ರೇಲಿಯ ಕಳುಹಿಸಿರುವ ಕೆಲವು ಆಶ್ರಯ ಕೋರಿಕೆದಾರರನ್ನು ಸ್ವೀಕರಿಸುವ ಕೊಡುಗೆಯನ್ನು ನ್ಯೂಝಿಲ್ಯಾಂಡ್ ಮುಂದಿಟ್ಟಿದೆ.
ಆದರೆ, ಈ ಕೊಡುಗೆಯನ್ನು ಆಸ್ಟ್ರೇಲಿಯ ಸ್ವೀಕರಿಸುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ. ಆಸ್ಟ್ರೇಲಿಯದಿಂದ ಪೆಸಿಫಿಕ್ ದ್ವೀಪ ನೌರುಗೆ ಸ್ಥಳಾಂತರಗೊಳ್ಳಲಿರುವ 267 ಆಶ್ರಯ ಕೋರಿಕೆದಾರರ ಭವಿಷ್ಯವೇನು ಎಂಬ ಬಗ್ಗೆ ಚರ್ಚೆ ನಡೆಯುತ್ತಿರುವ ಹಂತದಲ್ಲೇ ನ್ಯೂಝಿಲ್ಯಾಂಡ್ ಈ ಪ್ರಸ್ತಾಪ ಮುಂದಿಟ್ಟಿದೆ. ಆಸ್ಟ್ರೇಲಿಯಕ್ಕೆ ಬೇಡವಾದ ಕೆಲವು ಆಶ್ರಯ ಕೋರಿಕೆದಾರರನ್ನು ನ್ಯೂಝಿಲ್ಯಾಂಡ್ ಸ್ವೀಕರಿಸಬಹುದೇ ಎಂಬ ಬಗ್ಗೆಯೂ ಚರ್ಚೆ ನಡೆದಿದೆ.
Next Story





