67.5 ಮೆಗಾ ವ್ಯಾಟ್ ವಿದ್ಯುತ್ ಉಳಿತಾಯ
ಹೊಸಬೆಳಕು ಯೋಜನೆ: 2 ಲಕ್ಷ ಎಲ್‌ಇಡಿ ಬಲ್ಬ್‌ಗಳ ಮಾರಾಟ

ಎಲ್‌ಇಡಿ ಬಲ್ಬ್ ಅಕ್ರಮವಾಗಿ ಮಾರಾಟ ಮಾಡಿದರೆ ಶಿಸ್ತು ಕ್ರಮ
ಬೆಂಗಳೂರು, ಫೆ. 19: ಹೊಸಬೆಳಕು ಯೋಜನೆ ಯಡಿ ಈವರೆಗೂ ಒಟ್ಟು 2ಲಕ್ಷ ಎಲ್‌ಇಡಿ ಬಲ್ಬ್ ಗಳನ್ನು ಮಾರಾಟ ಮಾಡಿದ್ದು, ಪ್ರತಿನಿತ್ಯ ಸುಮಾರು 30ಲಕ್ಷ ರೂ. ಮೊತ್ತದ 67.5 ಮೆ.ವ್ಯಾ.ನಷ್ಟು ವಿದ್ಯುತ್ ಬಳಕೆ ಕಡಿಮೆಯಾಗಿದೆ ಎಂದು ಎನರ್ಜಿ ಎಫೀಶಿಯನ್ಸಿ ಸರ್ವೀಸಸ್ ಲಿಮಿಟೆಡ್ ಸಂಸ್ಥೆ ತಿಳಿಸಿದೆ.
ಎಲ್‌ಇಡಿ ಬಲ್ಬ್ ಬಳಕೆ ಹಿನ್ನೆಲೆಯಲ್ಲಿ ಪರಿಸರಕ್ಕೆ ಈ ಯೋಜನೆಯಿಂದ ಸುಮಾರು 633 ಟನ್‌ಗಳಷ್ಟು ಕಾರ್ಬನ್‌ಡೈ ಆಕ್ಸೈಡ್ ಸೇರುವುದು ಕಡಿಮೆಯಾಗಿದ್ದು, ಪ್ರತಿದಿನ 7ಲಕ್ಷ ಮೆ.ವ್ಯಾ.ನಷ್ಟು ವಿದ್ಯುತ್ ಉಳಿತಾಯವಾಗುತ್ತಿದೆ ಎಂದು ಸಂಸ್ಥೆ ಇದೇ ವೇಳೆ ಮಾಹಿತಿ ನೀಡಿದೆ.
ಬಲ್ಬ್ ಬಳಕೆಯಿಂದ ತೊಂದರೆಯಿಲ್ಲ: ಬಲ್ಬ್‌ಗಳನ್ನು ಗ್ರಾಹಕರಿಗೆ ನೀಡುವ ಮುನ್ನ ಅಗತ್ಯ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಬಿಐಎಸ್ ವಿಶೇಷತೆಗಳನ್ನು ಒಳಗೊಂಡಂತೆ ಅನೇಕ ರೀತಿಯಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಅಲ್ಲದೆ, ಸುರಕ್ಷತೆಯ ದೃಷ್ಟಿಯಿಂದಲೂ ಆಧುನಿಕ ರೀತಿಯಲ್ಲಿ ಪರೀಕ್ಷೆಗೆ ಒಳಪಡಿಸಿ, ಒಪ್ಪಿಗೆ ಪಡೆದ ಬಳಿಕ ಗ್ರಾಹಕರಿಗೆ ನೀಡಲಾಗುತ್ತದೆ.
ಪ್ರಸ್ತುತ ಎಲ್‌ಇಡಿ ಬಲ್ಬ್‌ಗಳಿಂದ ಯಾವುದೇ ತೊಂದರೆ ಇಲ್ಲ ಎಂಬುದು ಸ್ಪಷ್ಟ. ಇದಕ್ಕಾಗಿ ಫೋಟೋಬಯೋಲಾಜಿಕಲ್ ಪರೀಕ್ಷೆಗಳನ್ನು ನಡೆಸಲಾಗಿದ್ದು, ಪರಿಸರ ಹಾಗೂ ಮನುಷ್ಯರಿಗೆ ಬಲ್ಬ್‌ಗಳಿಂದ ಯಾವುದೇ ಹಾನಿ ಇಲ್ಲ ಎಂಬುದು ತಿಳಿದು ಬಂದಿರುತ್ತದೆ.
ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ ನಿಯಮಿತ, ವಿದ್ಯುತ್ ಹಣಕಾಸು ನಿಗಮ, ಗ್ರಾಮೀಣ ವಿದ್ಯುದೀಕರಣ ನಿಗಮ, ಪವರ್ ಗ್ರಿಡ್ ಸಂಸ್ಥೆಗಳೊಂದಿಗೆ ಸಹಯೋಗ ಪಡೆದಿದ್ದು, ಇಂಧನ ಸಚಿವಾಲಯದಡಿಯಲ್ಲಿ ಇಂಧನ ಉಳಿತಾಯ ಯೋಜನೆಯನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಸ್ಥಾಪಿಸಲಾಗಿದೆ. ಇಇಎಸ್‌ಎಲ್ ದೇಶದಲ್ಲಿ ಎಲ್‌ಇಡಿ ಬಲ್ಬ್‌ಗಳ ಮೂಲಕ ಇಂಧನ ಉಳಿತಾಯದ ಕೆಲಸಗಳನ್ನು ಅನುಷ್ಠಾನ ಮಾಡುತ್ತಿದೆ. ಸರಕಾರ 77 ಕೋಟಿ ರೂ.ಬಲ್ಬ್‌ಗಳನ್ನು 2019ರ ಮಾರ್ಚ್ ಒಳಗಾಗಿ ವಿತರಿಸುವ ಗುರಿ ಹೊಂದಿದೆ. ಎನರ್ಜಿ ಎಫೀಶಿಯನ್ಸಿ ಸರ್ವೀಸಸ್ ಲಿ.ಸಂಸ್ಥೆಯು ಕೇಂದ್ರ ಸರಕಾರದ ಆಡಳಿತ ಹೊಂದಿರುವ ಸಾರ್ವಜನಿಕ ಇಂಧನ ಸೇವಾ ಸಂಸ್ಥೆಯಾಗಿದ್ದು, ಕರ್ನಾಟಕ ರಾಜ್ಯದಲ್ಲಿ 2015ರ ಡಿಸೆಂಬರ್‌ನಿಂದ ಯಶಸ್ವಿಯಾಗಿ ಹೊಸಬೆಳಕು ಯೋಜನೆಯನ್ನು ಮುನ್ನಡೆಸುತ್ತಿದೆ. ಎಲ್ಲ ವರ್ಗದವರಿಗೆ ಅನ್ವಯ ಆಗುವಂತೆ 9ವ್ಯಾಟ್‌ಗಳ ಎಲ್‌ಇಡಿ ಬಲ್ಬ್ ಗಳನ್ನು 100 ರೂ. ಗಳಿಗೆ ಗ್ರಾಹಕರಿಗೆ ನೀಡಲಾಗುತ್ತದೆ. ಅಲ್ಲದೆ, ಸಾಮಾಜಿಕ ತಾಣಗಳಲ್ಲಿ ಹೊಸ ಬೆಳಕು ಯೋಜನೆಯಲ್ಲಿ ನೀಡುತ್ತಿರುವ ಬಲ್ಬ್ ಗಳ ಮೇಲೆ ಮಾರಾಟಕ್ಕಾಗಿ ಅಲ್ಲ ಎಂದು ನಮೂದಿಸಲಾಗಿರುತ್ತದೆ.
ಹೀಗಾಗಿ ಇಇಎಸ್‌ನಿಂದ ಬಲ್ಬ್‌ಗಳನ್ನು ಪಡೆಯುವುದು ಸೂಕ್ತವಲ್ಲ ಎಂದು ಹೇಳಲಾಗುತ್ತಿದೆ. ಇಲ್ಲಿ ಮಾರಾಟಕ್ಕಾಗಿ ಅಲ್ಲ ಎಂಬುದು ಎಲ್‌ಇಡಿ ಬಲ್ಬ್ ಗಳನ್ನು ಲಾಭದಾಯಕವಾಗಿ ಮಾರಾಟ ಮಾಡುವ ಹಕ್ಕನ್ನು ಬಿಟ್ಟುಬಿಡಲಾಗಿದೆ ಎಂಬ ಸಂದೇಶ ಎಂದು ಸಂಸ್ಥೆ ಸ್ಪಷ್ಟಪಡಿಸುತ್ತದೆ.
ಎಲ್‌ಇಡಿ ಬಲ್ಬ್‌ಗಳು ಯೋಜನೆಗಾಗಿಯೇ ಇರುವ ಕೌಂಟರ್‌ಗಳಲ್ಲಿ ಮಾತ್ರ ಲಭ್ಯವಿದ್ದು, ಇನ್ನಿತರ ಸ್ಥಳಗಳಲ್ಲಿ ಲಭಿಸುವುದಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಬಲ್ಬ್ ಮಾರಾಟ ಕಂಡು ಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು.
ಎನರ್ಜಿ ಎಫೀಶಿಯನ್ಸಿ ಸರ್ವಿಸಸ್ ಲಿಮಿಟೆಡ್ ಸಂಸ್ಥೆ.







