ದುಬೈ ಟೆನಿಸ್ ಚಾಂಪಿಯನ್‌ಶಿಪ್: ಸಾರಾ ಇರಾನಿ ಸೆಮಿ ಫೈನಲ್‌ಗೆ
ದುಬೈ, ಫೆ.19: ಇಟಲಿಯ ಸಾರಾ ಇರಾನಿ ದುಬೈ ಟೆನಿಸ್ ಚಾಂಪಿಯನ್‌ಶಿಪ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಸೆಮಿ ಫೈನಲ್‌ಗೆ ತೇರ್ಗಡೆಯಾದರು.
ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ಇರಾನಿ ಅವರು ಮಡಿಸನ್ ಬ್ರೆಂಗ್ಲೆ ಅವರನ್ನು 4-6, 6-1, 6-4 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.
ಮುಂದಿನ ಸುತ್ತಿನಲ್ಲಿ ಕರೊಲಿನ್ ಗಾರ್ಸಿಯಾರನ್ನು ಎದುರಿಸಲಿದ್ದಾರೆ. 38ನೆ ರ್ಯಾಂಕಿನ ಫ್ರೆಂಚ್‌ನ ಗಾರ್ಸಿಯಾ ಜರ್ಮನಿಯ ಆ್ಯಂಡ್ರಿಯ ಪೆಟ್ಕೋವಿಕ್‌ರನ್ನು 6-3, 6-4 ಸೆಟ್‌ಗಳ ಅಂತರದಿಂದ ಮಣಿಸಿದ್ದರು.
ಇವಾನೊವಿಕ್‌ಗೆ ಝೆಕ್ ಆಟಗಾರ್ತಿ ಶಾಕ್:
ದುಬೈ ಟೆನಿಸ್ ಟೂರ್ನಿಯಲ್ಲಿ ಮತ್ತೋರ್ವ ಅಗ್ರ ಶ್ರೇಯಾಂಕಿತ ಆಟಗಾರ್ತಿ ಟೂರ್ನಿಯಲ್ಲಿ ಆಘಾತಕಾರಿ ಸೋಲನುಭವಿಸಿದ್ದಾರೆ.
ಗುರುವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಸರ್ಬಿಯದ ಇವಾನೊವಿಕ್‌ರನ್ನು ಝೆಕ್‌ನ ಬಾರ್ಬೊರಾ ಸ್ಟ್ರಿಕೊವಾ ಅವರು 7-6(7/5), 6-3 ಸೆಟ್‌ಗಳ ಅಂತರದಿಂದ ಮಣಿಸಿದರು.
ಡಬ್ಲುಟಿಎ ಟೂರ್ನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿ 8 ಶ್ರೇಯಾಂಕಿತ ಆಟಗಾರ್ತಿಯರು ಮೊದಲ ಇಲ್ಲವೇ ಎರಡನೆ ಸುತ್ತಿನ ಪಂದ್ಯಗಳಲ್ಲಿ ಸೋತಿದ್ದಾರೆ. ಇದೀಗ ಇವಾನೊವಿಕ್ ಈ ಪಟ್ಟಿಗೆ ಹೊಸ ಸೇರ್ಪಡೆಯಾಗಿದ್ದಾರೆ.







