ರಿಯೋ ಜನೈರೊ ಓಪನ್: ನಡಾಲ್ ಕ್ವಾರ್ಟರ್ ಫೈನಲ್‌ಗೆ
ಬ್ರೆಝಿಲ್, ಫೆ.19: ಸ್ವದೇಶದ ನಿಕೊಲಸ್ ಅಲ್ಮಾಗ್ರೊರನ್ನು ನೇರ ಸೆಟ್‌ಗಳಿಂದ ಮಣಿಸಿದ ಸ್ಪೇನ್‌ನ ರಫೆಲ್ ನಡಾಲ್ ರಿಯೋ ಡಿ ಜನೈರೊ ಓಪನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದರು.
ಶುಕ್ರವಾರ ಇಲ್ಲಿ 1 ಗಂಟೆ, 40 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ನಡಾಲ್ ಅವರು ಅಲ್ಮಾಗ್ರೊರನ್ನು 6-3, 7-5 ಸೆಟ್‌ಗಳ ಅಂತರದಿಂದ ಮಣಿಸಿದರು.
ನಡಾಲ್ ಅವರು ಅಲ್ಮಾಗ್ರೊ ವಿರುದ್ಧ ಆಡಿದ್ದ 15 ಪಂದ್ಯಗಳಲ್ಲಿ 14ನೆ ಜಯ ಸಾಧಿಸಿದರು.
ನಡಾಲ್ ಮುಂದಿನ ಸುತ್ತಿನಲ್ಲಿ ಉಕ್ರೇನ್‌ನ ಒಲೆಕ್ಸಾಂಡರ್ ಡಾಲ್ಗೊಪೊಲೊವ್‌ರನ್ನು ಎದುರಿಸಲಿದ್ದಾರೆ. 14 ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿದ್ದ ನಡಾಲ್ 2014ರಲ್ಲಿ ರಿಯೊ ಓಪನ್ ಪ್ರಶಸ್ತಿ ಜಯಿಸಿದ್ದರು.
Next Story





