ಕನ್ಹಯ್ಯಗೆ ಹಲ್ಲೆಗೈದ ವಕೀಲನಿಗೆ ಸನ್ಮಾನ
ಹೊಸದಿಲ್ಲಿ, ಫೆ.19: ಇಲ್ಲಿನ ಪಟಿಯಾಲ ಕೋರ್ಟ್ ಆವರಣದಲ್ಲಿ ಸೋಮವಾರ ಹಾಗೂ ಬುಧವಾರ ದಾಂಧಲೆಗೈದು ಜೆಎನ್‌ಯು ವಿದ್ಯಾರ್ಥಿ ಯೂನಿಯನ್ ನಾಯಕ ಕನ್ಹಯ್ಯಾ ಕುಮಾರ್‌ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವ ವೇಳೆ ಹಲ್ಲೆ ನಡೆಸಿದ್ದ ಗುಂಪಿನ ನೇತೃತ್ವ ವಹಿಸಿದ್ದ ವಕೀಲ ವಿಕ್ರಮ್ ಚೌಹಾಣ್‌ನನ್ನು ವಕೀಲರ ತಂಡವೊಂದು ಗುರುವಾರ ಸನ್ಮಾನಿಸಿದೆ.
ಶಾಹ್‌ದರಾ ಬಾರ್ ಎಸೋಸಿಯೇಶನ್ ಸದಸ್ಯರು ಕರ್ಕರ್‌ದೂಮ ಕೋರ್ಟಿನ ಗೇಟ್ ಸಂಖ್ಯೆ 5ರ ಹೊರಗೆ ಗುರುವಾರ ಸಂಜೆ ಮೋಂಬತ್ತಿ ಮೆರವಣಿಗೆ ನಡೆಸಿದ್ದು ಇದರಲ್ಲಿ ಚೌಹಾಣ್ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ. ಎಸೋಸಿಯೇಶನ್ ಅಧ್ಯಕ್ಷ ಚೌಹಾಣ್‌ಗೆ ಮಾಲಾರ್ಪಣೆ ಮಾಡಿ ‘‘ಶಾಹ್‌ದರಾ ಬಾರ್ ಎಸೋಸಿಯೇಶನ್ ನಿಮ್ಮ ಜತೆಗಿದೆ’’ ಎಂದು ಹೇಳಿದರು.
ಆದರೆ ಜಿಲ್ಲಾ ಬಾರ್ ಸಮನ್ವಯ ಸಮಿತಿ (ಡಿಬಿಸಿಸಿ) ಕೋರ್ಟ್ ಆವರಣದ ಹೊರಗೆ ನಡೆದ ಹಲ್ಲೆ ಘಟನೆಗಳನ್ನು ಖಂಡಿಸಿದೆಯಾದರೂ ಹಲ್ಲೆಗೈದವರು ‘‘ವಕೀಲರ ಉಡುಗೆಗಳನ್ನು ಧರಿಸಿದ ಹೊರಗಿನವರು’’ ಎಂದು ಹೇಳಿಕೊಂಡಿದೆ.
Next Story





