ಹದಿನೈದು ಜಿಲ್ಲೆಗಳಲ್ಲಿ ಮತದಾನ ಆರಂಭ
ತಾ.ಪಂ.ಜಿ.ಪಂ ಎರಡನೆ ಹಂತದ ಚುನಾವಣೆ

ಬೆಂಗಳೂರು, ಫೆ.20: ರಾಜ್ಯದ ಹದಿನೈದು ಜೆಲ್ಲೆಗಳಲ್ಲಿ ಎರಡನೆ ಹಂತದ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗೆ ಮತದಾನ ಇಂದು ಬೆಳಗ್ಗೆ 7 ಗಂಟೆಗೆ ಆರಂಭಗೊಂಡಿದೆ.
531 ಜಿಲ್ಲಾ ಪಂಚಾಯತ್ ಮತ್ತು 1,939 ತಾಲೂಕು ಪಂಚಾಯತ್‌ನ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, 15 ಜಿಲ್ಲೆಗಳಲ್ಲಿ ಮತದಾನಕ್ಕಾಗಿ 17,698 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. 70,72,923 ಮಹಿಳೆಯರು ಮತ್ತು 72,21,522 ಪುರುಷರು ಸೇರಿದಂತೆ 1,42,74,895 ಮಂದಿ ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ
ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಚಾಮರಾಜನಗರ, ಬೀದರ್, ಬಳ್ಳಾರಿ, ರಾಯಚೂರು, ಕಲಬುರಗಿ, ಯಾದಗಿರಿ, ಕೊಪ್ಪಳ, ವಿಜಯಪುರ ಜಿಲ್ಲೆಗಳಲ್ಲಿ ಚುನಾವಣೆ ನಡೆಯುತ್ತಿದೆ.
17,698 ಮತಗಟ್ಟೆಗಳ ಪೈಕಿ 3626 ಅತಿ ಸೂಕ್ಷ್ಮ ಮತ್ತು 4097 ಸೂಕ್ಷ್ಮ ಮತಗಟ್ಟೆಗಳಾಗಿವೆ. ನಕ್ಸಲ್ ಪೀಡಿತ ಮತ್ತು ಗಡಿಭಾಗದ ಜಿಲ್ಲೆಗಳಲ್ಲಿ ಚುನಾವಣೆಯ ಭದ್ರತೆಗಾಗಿ ಕೇಂದ್ರಿಯ ಮೀಸಲು ಪೊಲೀಸ್ ಪಡೆಯನ್ನು ನಿಯೋಜನೆ ಮಾಡಲಾಗಿದೆ





