ಕಾರ್ಕಳ: ನಕ್ಸಲ್ ಪೀಡಿತ ಪರಿಸರದ ಪರಿಶಿಷ್ಢ ಪಂಗಡ ಕುಟುಂಬಗಳಿಂದ ಮತದಾನ ಬಹಿಷ್ಕಾರ
ಕಾರ್ಕಳ: ಕಾರ್ಕಳ ತಾಲೂಕಿನ ನಕ್ಸಲ್ ಪೀಡಿತ ಮುತ್ಲುಪಾಡಿ, ಅಂದಾರು ಮೂಡು ದರ್ಕಾಸು ನಿವಾಸಿಗಳಾದ ಪರಿಶಿಷ್ಠ ಪಂಗಡ ಕುಟುಂಬಗಳಿಂದ ಮತದಾನ ಬಹಿಷ್ಕಾರ ನಡೆದಿದೆ.
ಮೂಲಭೂತ ಸೌಕರ್ಯ ವಂಚಿತ ಈ ಪ್ರದೇಶದಲ್ಲಿ ಅಭಿವೃದ್ಧಿ ನಡೆಯುವವರೆಗೆ ಮತ ಹಾಕುವುದಿಲ್ಲ ಎಂದ ಗ್ರಾಮಸ್ಥರು, ರಾಜಕಾರಣಿಗಳೊಂದಿಗೆ ತಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಲು ಒತ್ತಾಯಿಸಿದರು. ಮತ ಚಲಾಯಿಸಿದಲ್ಲಿ ಬಸವ ಕಲ್ಯಾಣ ಯೋಜನೆಯಲ್ಲಿ ಮನೆ ಕಟ್ಟುವ ಅನುದಾನವನ್ನು ತಡೆ ಹಿಡಿಯುತ್ತೇವೆ ಎಂದು ಅಧಿಕಾರಿಗಳು ಹೇಳಿರುವುದಾಗಿ ಆರೋಪ ಕೇಳಿ ಬಂದಿದ್ದು, ಇದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದು, ಕೆಲವು ಕುಟುಂಬಗಳಿಗೆ ರಾಜಕೀಯ ಪಕ್ಷಗಳಿಂದ ಹಣದ ಆಮಿಷ ತೋರಿಸಲಾಗಿದೆ ಎಂಬ ಆರೋಪವು ಕೇಳಿಬಂದಿದೆ.
Next Story





