ಕೊಪ್ಪಳ:ಕಬ್ಬು ಕಡಿಯಲು ತಮಿಳುನಾಡಿಗೆ ಗುಳೆ ಹೋದವರು ಮತದಾನಕ್ಕೆ ಬಂದರು..

ಕೊಪ್ಪಳ, ಫೆ.20:ಕಬ್ಬು ಕಡಿಯಲು ತಮಿಳುನಾಡಿಗೆ ಗುಳೆ ಹೋಗಿದ್ದ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಪ್ರಮೀಳಾ ತಾಂಡಾದ ನೂರಾರು ಮಂದಿ ಮತದಾರರು ತಾ.ಪಂ. ಮತ್ತು ಜಿ.ಪಂ ಚುನಾವಣೆಯ ಹಿನ್ನೆಲೆಯಲ್ಲಿ ಮತದಾನಕ್ಕೆ ವಾಪಸಾಗಿದ್ದಾರೆ.
ಬಿಜೆಪಿ ಅಭ್ಯರ್ಥಿಗಳು ತಮ್ಮನ್ನು ಮತದಾನ ಮಾಡಲು ಕರೆಸಿದ್ದಾರೆಂದು ಗ್ರಾಮಸ್ಥರು ಹೇಳುತ್ತಾರೆ.
,,,
ಮತ ಹಾಕಿದರೆ ಐದು ಸಾವಿರ ದಂಡ
ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಅಚರಯ್ಯನಹುಂಡಿಯಲ್ಲಿ ಮತಗಟ್ಟೆ ಸ್ಥಾಪಿಸದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗಗ್ಕೆ ಸಡ್ಡು ಹೊಡೆದು ಮತದಾನಕ್ಕೆ ಗ್ರಾಮಸ್ಥರು.ಬಹಿಷ್ಕಾರ ಹಾಕಿದ್ದಾರೆ.
ಮೂರು ಕಿ.ಮೀ ದೂರದ ದೊಡ್ಡ ಬಾಗಿಲು ಗ್ರಾಮದಲ್ಲಿ ಮತಗಟ್ಟೆ ಸ್ಥಾಪನೆಗೆ ಜನ ಗರಂ ಆಗಿದ್ದಾರೆ. ಮತದಾನ ಮಾಡಿದರೆ ಐದು ಸಾವಿರ ರೂ ದಂಡ ವಿಧಿಸುವುದಾಗಿ ಗ್ರಾಮದ ಮುಖಂಡರು ಗ್ರಾಮಸ್ಥರನ್ನು ಎಚ್ಚರಿಸಿದ್ದಾರೆ.
,,,,,,,
ಗ್ರಾಮ ಪಂಚಾಯತ್ ಕಟ್ಡಡಕ್ಕೆ ಬೇಡಿಕೆ
ಕೊಪ್ಪಳ ಜಿಲ್ಲೆಯ ಯಲಬುರ್ಗಿಯ ಚಿಕ್ಕಮಣ್ಣಾಪುರ ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ಗ್ರಾಮ ಪಂಚಾಯತ್ ಕಟ್ಟಡ ನಿರ್ಮಾಣಕ್ಕೆ ಗ್ರಾಮಸ್ಥರು ಆಗ್ರಹಿಸುತ್ತಿದ್ದರೂ, ಅವರ ಬೇಡಿಕೆ ಸ್ಪಂದಿಸದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತದಾನವನ್ನು ಬಹಿಷ್ಕರಿಸಿದ್ದಾರೆ.





