Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಕನ್ನಡ ಪತ್ರಿಕೆಯೊಂದರ ಉಗ್ರ ವರದಿ ಹಾಗು...

ಕನ್ನಡ ಪತ್ರಿಕೆಯೊಂದರ ಉಗ್ರ ವರದಿ ಹಾಗು ದೇಶದ ಜನರಿಗೆ ಎರಡು ಹೊತ್ತಿನ ಊಟದ ಚಿಂತೆ ಹೊತ್ತ ಉಮರ್ ಖಾಲಿದ್ !

ವಾರ್ತಾಭಾರತಿವಾರ್ತಾಭಾರತಿ20 Feb 2016 10:36 AM IST
share
ಕನ್ನಡ ಪತ್ರಿಕೆಯೊಂದರ ಉಗ್ರ ವರದಿ ಹಾಗು ದೇಶದ ಜನರಿಗೆ ಎರಡು ಹೊತ್ತಿನ ಊಟದ ಚಿಂತೆ ಹೊತ್ತ ಉಮರ್ ಖಾಲಿದ್ !

ಇಲ್ಲಿರುವುದು ವಿಜಯವಾಣಿ ಕನ್ನಡ ದೈನಿಕದ ಮುಖಪುಟದಲ್ಲಿ ಇಂದು ( ಫೆ. 20) ಬಂದಿರುವ ' ವರದಿ '. ಈ ' ವರದಿಯ' ಪ್ರಕಾರ  " ಉಮರ್ ಖಾಲಿದ್  ಜೆ ಎನ್ ಯು  ನಲ್ಲಿ ನಡೆದ ಉಗ್ರ ಅಫ಼್ಝಲ್ ಪರ ಹಾಗು ರಾಷ್ಟ್ರವಿರೋಧಿ ಪ್ರಕರಣದ ಮಾಸ್ಟರ್ ಮೈಂಡ್. ಪಾಕಿಸ್ತಾನದ ಭಯೋತ್ಪಾದನಾ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಉಮರ್ ಖಾಲಿದ್ ನಿಷೇಧಿತ ಸಿಮಿ ಸಂಘಟನೆಯ ಮಾಜಿ ಮುಖ್ಯಸ್ಥನ ಪುತ್ರ."  ಪತ್ರಿಕೆ ಆತನ ತಂದೆಗೂ ಸಾಕಷ್ಟು ಉದಾರವಾಗಿಯೇ ಪದವಿ ಪ್ರದಾನ ಮಾಡಿದೆ. ಆತನ ತಂದೆ ಎಸ್ ಕ್ಯೂ ಆರ್ ಇಲ್ಯಾಸ್  ವಿಜಯವಾಣಿಯ ಪ್ರಕಾರ " ಮಾಜಿ ಉಗ್ರ ", ನಿಷೇಧಿತ ಸಿಮಿ ಸಂಘಟನೆಯ ಮಾಜಿ ಮುಖ್ಯಸ್ಥ . 

ಈಗ ವಿಷಯಕ್ಕೆ ಬರೋಣ . 

ಉಮರ್ ಖಾಲಿದ್ ಹಲವಾರು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಹಾಗು ಆತನಿಗೆ ಜೈಶೆ ಮುಹಮ್ಮದ್ ಭಯೋತ್ಪಾದಕ ಸಂಘಟನೆ ಬೆಂಬಲ ನೀಡಿತ್ತು ಎಂದು ಬೇಹು ಇಲಾಖೆ (ಐಬಿ)ಯನ್ನು ಉಲ್ಲೇಖಿಸಿ ಕೆಲವು ಸುದ್ದಿ ವಾಹಿನಿಗಳು ಪ್ರಕಟಿಸಿದ ವರದಿಯ ಕುರಿತು ದಿ ಹಿಂದೂ ಪತ್ರಿಕೆ ಫೆಬ್ರವರಿ 17 ರಂದು ಪ್ರಕಟಿಸಿದ ವರದಿಯಲ್ಲಿ ದೇಶದ ಬೇಹು ಇಲಾಖೆ ಐಬಿಯ ಹಿರಿಯ ಅಧಿಕಾರಿ ನೀಡಿದ ಪ್ರತಿಕ್ರಿಯೆ ಇಲ್ಲಿದೆ. 

“We have not issued any such alert. It is a figment of someone’s imagination. You can always attribute anything to the IB, since we don’t come out in the open to deny or confirm,” a top intelligence official told The Hindu. 

( ನಾವು ಅಂತಹ ಯಾವುದೇ ಎಚ್ಚರಿಕೆ ನೀಡಿಲ್ಲ. ಇದು ಯಾರದ್ದೋ ಕಪೋಲ ಕಲ್ಪಿತ ಹೇಳಿಕೆ. ನಾವು ನಿರಾಕರಿಸಲು ಅಥವಾ ಖಚಿತಪಡಿಸಲು ಹೋಗುವುದಿಲ್ಲವಾದ್ದರಿಂದ ನೀವು ಯಾವಾಗ ಬೇಕಾದರೂ ಏನನ್ನು ಬೇಕಾದರೂ ಐಬಿ ಹೇಳಿದೆ ಎಂದು ಹೇಳಿಬಿಡಬಹುದು. )

ಇನ್ನು ಫೆಬ್ರವರಿ 19 ಕ್ಕೆ firstpost.com ವೆಬ್ ಸೈಟ್ #SeditionDebate: Everything you need to know about Umar Khalid, the man they're calling 'Kashmiri traitor' ಎಂಬ ಶೀರ್ಷಿಕೆಯಲ್ಲಿ  ಉಮರ್ ಖಾಲಿದ್ ಕುರಿತು ನೀಡಿದ ಕೆಲವು ಮಾಹಿತಿಗಳು ಇಲ್ಲಿವೆ : 

1. ಉಮರ್ ಖಾಲಿದ್ ಕಾಶ್ಮೀರಿ ಅಲ್ಲ. ಆತನಿಗೂ ಕಾಶ್ಮೀರಕ್ಕೂ ಯಾವುದೇ ಸಂಬಂಧವಿಲ್ಲ. ಮೂಲತ: ಮಹಾರಾಷ್ಟ್ರದ ಅಮರಾವತಿಯ ಆತನ ಕುಟುಂಬ 35 ವರ್ಷಗಳ ಹಿಂದೆ ದೆಹಲಿಗೆ ಬಂದು ಇಲ್ಲಿ ಜಾಮಿಯ ನಗರ್ ನಲ್ಲಿ ವಾಸವಾಗಿದೆ. 

2. ಸುದ್ದಿ ವಾಹಿನಿಗಳು ಪ್ರಸಾರ ಮಾಡಿದಂತೆ ಆತ ಸಂಪ್ರದಾಯವಾದಿ ಮುಸ್ಲಿಂ ಅಲ್ಲವೇ ಅಲ್ಲ. ಆತ ಕನಿಷ್ಟ ಮುಸ್ಲಿಮ್ ಧಾರ್ಮಿಕ ನಂಬಿಕೆಗಳನ್ನೂ ಅನುಸರಿಸುತ್ತಿರಲಿಲ್ಲ. ಆತ  ಸ್ವಘೋಷಿತ ನಾಸ್ತಿಕ ಹಾಗು ಕಟ್ಟರ್ ಎಡಪಂಥೀಯನಾಗಿದ್ದ. ಇದು ಆತನ ಎಲ್ಲ ಸ್ನೇಹಿತರಿಗೆ ಚೆನ್ನಾಗಿ ಗೊತ್ತಿದೆ.  ಇದೇ ವಿಷಯದಲ್ಲಿ ಆತನಿಗೆ ಹಾಗು ಮುಸ್ಲಿಮ್ ಧಾರ್ಮಿಕ ನಂಬಿಕೆಗಳನ್ನು ಪಾಲಿಸುವ ಆತನ ತಂದೆಗೂ ಭಿನಾಭಿಪ್ರಾಯವೂ ಇತ್ತು. 

ಜೆ ಏನ್ ಯು ಹಾಗು ದಿಲ್ಲಿ ವಿವಿಯಲ್ಲಿ ಸಕ್ರಿಯವಾಗಿರುವ Democratic Students' Union (DSU) ಸಂಘಟನೆಯ ನಾಯಕನಾಗಿದ್ದ ಉಮರ್ ಖಾಲಿದ್ , ಜೆ ಏನ್ ಯು ನ ಸೆಂಟರ್ ಫಾರ್ ಹಿಸ್ಟಾರಿಕಲ್ ಸ್ಟಡೀಸ್ ನಲ್ಲಿ ಪಿ ಎಚ್ ಡಿ ಮಾಡುತ್ತಿದ್ದ. DSU ಬಗ್ಗೆ ವಿಕಿಪೀಡಿಯಾದಲ್ಲಿ ಇರುವ ಪರಿಚಯದ ಪ್ರಥಮ ಪ್ಯಾರ  ಹೀಗಿದೆ : 

The All India Revolutionary Students Federation (AIRSF) was a frontal organisation of the Communist Party of India (Maoist). It includes constituent groups such as the Democratic Students' Union (DSU), active in the Jawaharlal Nehru University and the University of Delhi.[1]

3. ಉಮರ್ ಖಾಲಿದ್ ಪಾಕಿಸ್ತಾನಕ್ಕೆ ಒಮ್ಮೆಯೂ ಹೋಗಿಲ್ಲ. ಹೋಗಲು ಆತನ ಬಳಿ ಪಾಸ್ ಪೋರ್ಟ್ ಇಲ್ಲ. ಆತ ಇವರೆಗೆ ಪಾಸ್ ಪೋರ್ಟ್ಗಾಗಿ ಅರ್ಜಿಯನ್ನೂ ಸಲ್ಲಿಸಿಲ್ಲ !

4. ನನ್ನ ಮಗ ಯಾವುದಾದರೂ ದೇಶವಿರೋಧಿ ಘೋಷಣೆ ಕೂಗಿದ್ದಾನೆ ಎಂದು ಸರಕಾರ ಪರಿಗಣಿಸಿದ್ದರೆ , ಆತ ದೇಶದ ನ್ಯಾಯಾಲಯದೆದುರು ಹಾಜರಾಗಬೇಕು ಎಂದು ಆತನ ತಂದೆ ಹೇಳಿದ್ದಾರೆ. 

ಉಮರ್ ಖಾಲಿದ್ ಹಾಗು ಆತನ ಸ್ನೇಹಿತನ ನಡುವಿನ ವಾಟ್ಸ್ ಆಪ್ ಸಂಭಾಷಣೆಯೊಂದು firspost.comಗೆ ಸಿಕ್ಕಿದ್ದು ಅದು ಹೀಗಿದೆ :

Friend: Bhai, calcium tablets khalo. Is umr mein daant jhadna think nahi. (Take calcium tablets. At your age, you don't want to lose teeth) You should take care of yourself

Umar: Hyper mat ho. Thik hoon mein. Is desh ke logon ko do waqt ka khana nahi milita. Tum log selfish ho. Kabhi toh bada socho (Don't be hyper. I'm fine. In this country, people don't get to eat two meals a day. You people are selfish. Try and think big).

ಗೆಳೆಯ : ಭಾಯ್ , ಕ್ಯಾಲ್ಸಿಯಂ ಮಾತ್ರೆ ತಿನ್ನು. ಈ ವಯಸ್ಸಲ್ಲಿ ಹಲ್ಲು ಹೋಗುವುದು ಒಳ್ಳೆಯದಲ್ಲ. ಆರೋಗ್ಯ ನೋಡಿಕೊ. 

ಉಮರ್ : ಜಾಸ್ತಿ ಗಂಭೀರ ಆಗಬೇಡ. ನಾನು ಸರಿ ಇದ್ದೇನೆ. ಈ ದೇಶದ ಜನರಿಗೆ ಎರಡು ಹೊತ್ತು ಸರಿಯಾಗಿ ಊಟ ಸಿಗುತ್ತಿಲ್ಲ. ನೀವು ಸ್ವಾರ್ಥಿಗಳಾಗಿದ್ದೀರಿ. ಯಾವತ್ತಾದರೂ ದೊಡ್ಡದನ್ನು ಯೋಚಿಸಲು ಪ್ರಯತ್ನಿಸಿ. 

 ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಫೆಬ್ರವರಿ 19ಕ್ಕೆ ಪ್ರಕಟಿಸಿದ ವರದಿಯಲ್ಲಿ ಉಮರ್ ಖಾಲಿದ್ ನ ತಂದೆ ಎಸ್ . ಕ್ಯೂ. ಆರ್. ಇಲ್ಯಾಸ್ ಅವರ ಹೇಳಿಕೆ ಹೀಗಿದೆ :  “I left SIMI in 1985, before my son Umar Khalid was born, and when there was not a single case against any individual in SIMI or the organisation. SIMI was banned in 2001,” Syed Qasim Rasool Ilyas told The Indian Express.

ನಾನು ಸಿಮಿಯನ್ನು 1985 ರಲ್ಲೇ ಬಿಟ್ಟಿದ್ದೇನೆ. ಆಗ ನನ್ನ ಮಗ ಉಮರ್ ಹುಟ್ಟಿಯೇ ಇರಲಿಲ್ಲ. ಮಾತ್ರವಲ್ಲ ಆಗ ಸಿಮಿಯ ಅಥವಾ ಅದರ ಯಾವುದೇ ಸದಸ್ಯರ ವಿರುದ್ಧ ಒಂದೇ ಒಂದು ದೂರು ದಾಖಲಾಗಿರಲಿಲ್ಲ. ಸಿಮಿ ನಿಷೇಧವಾಗಿದ್ದು 2001 ರಲ್ಲಿ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X